ಬಿಎಸ್ ಪಿಗೆ ಕೈಕೊಟ್ಟು ಎಸ್ ಪಿ ಸೇರಲು ಮುಂದಾದ ಐವರು ಶಾಸಕರು! - Mahanayaka
5:37 PM Saturday 24 - January 2026

ಬಿಎಸ್ ಪಿಗೆ ಕೈಕೊಟ್ಟು ಎಸ್ ಪಿ ಸೇರಲು ಮುಂದಾದ ಐವರು ಶಾಸಕರು!

28/10/2020

ಲಕ್ನೋ: ಬಹುಜನ ಸಮಾಜ ಪಾರ್ಟಿಯೊಳಗೆ ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಆರಂಭವಾದ ಬಂಡಾಯ ಇದೀಗ ಐವರು ಶಾಸಕರ ರಾಜೀನಾಮೆಯವರೆಗೆ ಮುಂದುವರಿಯುವ ಲಕ್ಷಣಗಳು ಕಂಡು ಬರುತ್ತಿದ್ದು, ಬಿಎಸ್ ಪಿಯ ಐವರು ಬಂಡಾಯ ಶಾಸಕರು ಸಮಾಜವಾದಿ ಪಾರ್ಟಿಯ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗಿದ್ದಾರೆ.


ಬಂಡಾಯ ಬಿಎಸ್ ಪಿ ಶಾಸಕರು ಎಮ್ ಎಲ್ ಸಿ ಉದಯ್ ವೀರ್ ಸಿಂಗ್ ಅವರು ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದು, ಈ ಮೂಲಕ ಅವರು ಬಿಎಸ್ ಪಿ ತೊರೆದು ಎಸ್ಪಿಗೆ ಸೇರುವ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.


ಬಂಡಾಯ ಶಾಸಕರಾದ ಅಸ್ಲಂ ಚೌಧರಿ, ಅಸ್ಲಂ ರೈನೀ, ಮುಜ್ತಾಬಾ ಸಿದ್ದಿಕಿ, ಹಕೀಮ್ ಲಾಲ್ ಬಿಂದ್ ಮತ್ತು ಗೋವಿಂದ್ ಜಟಾವ್ ಅವರು ಅಖಿಲೇಶ್ ಯಾದವ್ ಅವರೊಂದಿಗೆ ಬುಧವಾರ ರಹಸ್ಯ ಸಭೆ ನಡೆಸಿದ್ದಾರೆ ಎಂದು ಹೇಳಲಾಗಿದೆ.  ಜೊತೆಗೆ ಮುಂದಿನ ಚುನಾವಣೆಯಲ್ಲಿ ಎಸ್ಪಿಯಿಂದ ಟಿಕೆಟ್ ಕೇಳಿದ್ದಾರೆ ಎಂದೂ ಹೇಳಲಾಗಿದೆ.


ಇನ್ನೂ ಇಬ್ಬರು ಬಿಎಸ್ ಪಿ ಶಾಸಕರು ಎಸ್ ಪಿ ಸೇರಲು ಇಚ್ಛಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಗಳು ಇನ್ನೂ ದೊರೆತಿಲ್ಲ.


ಇತ್ತೀಚಿನ ಸುದ್ದಿ