ಅರವಕುರುಚಿಯಲ್ಲಿ ಸೋಲು | ಅಣ್ಣಾಮಲೈ ಮೊದಲ ಪ್ರತಿಕ್ರಿಯೆ ಏನು ಗೊತ್ತಾ? - Mahanayaka
10:05 PM Thursday 21 - August 2025

ಅರವಕುರುಚಿಯಲ್ಲಿ ಸೋಲು | ಅಣ್ಣಾಮಲೈ ಮೊದಲ ಪ್ರತಿಕ್ರಿಯೆ ಏನು ಗೊತ್ತಾ?

annamalai
03/05/2021


Provided by

ಚೆನ್ನೈ: ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ ಅವರು ತಮಿಳುನಾಡಿನ ಅರವಕುರುಚಿಯಿಂದ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದಾರೆ.

ತಮ್ಮ ಸೋಲಿನ ಬಗ್ಗೆ ಟ್ವೀಟ್ ಮಾಡಿರುವ ಅವರು, ಸೋಲುಗಳು ಜೀವನದ ಒಂದು ಭಾಗವಾಗಿದೆ. ಇಂತಹ ಸೋಲುಗಳನ್ನು ನಾನು ಜೀವನದಲ್ಲಿ ಬಹಳ ನೋಡಿದ್ದೇನೆ. ನಾನು ಗೆಲುವಿನ ರೇಖೆ ದಾಟಲು ಆಗಿಲ್ಲ.  68 ಸಾವಿರ ಮತ ನೀಡಿದ  ಅರವಕುರುಚಿ ಕ್ಷೇತ್ರದ ಮತದಾರರಿಗೆ ಧನ್ಯವಾದಗಳು  ಎಂದು ಅವರು ತಿಳಿಸಿದ್ದಾರೆ.

ಐಪಿಎಸ್ ಅಧಿಕಾರಿಯಾಗಿದ್ದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ತನ್ನ ಊರಿನಲ್ಲಿ ಸಮಾಜ ಸೇವೆ ಮಾಡುತ್ತೇನೆ ಎಂದು ಹೇಳಿ ತೆರಳಿದ್ದರು. ಆದರೆ ಇದಾಗಿ ಕೆಲವೇ ಸಮಯದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಆ ಬಳಿಕ ಅವರನ್ನು ಅರವಕುರುಚಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು.

ಇತ್ತೀಚಿನ ಸುದ್ದಿ