ಕೊರೊನಾದಿಂದ ಜನ ಸಾಯುವುದು ನೋಡಲಾಗದೇ ಆತ್ಮಹತ್ಯೆ ಮಾಡಿಕೊಂಡ ಡಾಕ್ಟರ್! - Mahanayaka

ಕೊರೊನಾದಿಂದ ಜನ ಸಾಯುವುದು ನೋಡಲಾಗದೇ ಆತ್ಮಹತ್ಯೆ ಮಾಡಿಕೊಂಡ ಡಾಕ್ಟರ್!

dr vivek
03/05/2021

ನವದೆಹಲಿ: ದೇಶವನ್ನು ರಕ್ಷಿಸ ಬೇಕಿರುವ ಜನಪ್ರತಿನಿಧಿಗಳು ಸಾಲು ಸಾಲು ಹೆಣಗಳು ಬೀಳುತ್ತಿದ್ದರೂ ಪಶ್ಚಾತಾಪವೇ ಇಲ್ಲದೇ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಸಂದರ್ಭದಲ್ಲಿ ವೈದ್ಯರೊಬ್ಬರು ಕೊವಿಡ್ ಸೋಂಕಿತರ ಸಾವು ನೋಡಲು ಸಾಧ್ಯವಾಗದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಿಲ್ಲಿಯಲ್ಲಿ ನಡೆದಿದೆ.

ಮ್ಯಾಕ್ಸ್ ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಕೆಲಸ ಮಾಡುವ ಸ್ಥಾನಿಕ ವೈದ್ಯ ಡಾ.ವಿವೇಕ್ ಆತ್ಮಹತ್ಯೆ ಮಾಡಿಕೊಂಡ ವೈದ್ಯರಾಗಿದ್ದಾರೆ. ಕಣ್ಣೆದುರೇ 5-6 ಜನರು ಏಕಕಾಲದಲ್ಲಿ ಮೃತಪಡುತ್ತಿರುವ ದೃಶ್ಯವನ್ನು ನೋಡಲಾಗದೇ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.

ಇನ್ನೂ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿರುವ ಅವರು, ಐಸಿಯುನಲ್ಲಿ ಅವಿರತ ಶ್ರಮದ ಬಳಿಕವೂ ಜನರ ಜೀವ ರಕ್ಷಣೆ ಮಾಡಲಾಗದೇ ನಾನು ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. 5 ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ವಿವೇಕ್ ಅವರ ಪತ್ನಿ 2 ತಿಂಗಳ ಗರ್ಭಿಣಿಯಾಗಿದ್ದಾರೆ. ಇಂತಹ ಸ್ಥಿತಿಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದರೆ, ಅವರ ಮನಸ್ಸು ಅದೆಷ್ಟು ನೊಂದಿರಬಹುದು ಎನ್ನುವ ಬೇಸರದ ಮಾತುಗಳು ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ