ವಾಟ್ಸಾಪ್ ಬಳಕೆದಾರರಿಗೆ ಸಿಹಿಸುದ್ದಿ | ವಾಟ್ಸಾಪ್ ನಿಂದ ನೀವು ಲಾಭಗಳಿಸಬಹುದು! - Mahanayaka

ವಾಟ್ಸಾಪ್ ಬಳಕೆದಾರರಿಗೆ ಸಿಹಿಸುದ್ದಿ | ವಾಟ್ಸಾಪ್ ನಿಂದ ನೀವು ಲಾಭಗಳಿಸಬಹುದು!

29/10/2020


Provided by

ಭಾರತದಾದ್ಯಂತ ವಾಟ್ಸಾಪ್ ಬಳಕೆ ವ್ಯಾಪಕವಾಗಿದೆ. ಇದೇ ಸಂದರ್ಭದಲ್ಲಿ ಬಹುತೇಕರು ತಮ್ಮ ಬ್ಯುಸಿನೆಸ್ ನಲ್ಲಿ ಹೆಚ್ಚಾಗೆ ವಾಟ್ಸಾಪ್ ಬಳಕೆ ಮಾಡುತ್ತಿದ್ದಾರೆ. ವಾಟ್ಸಾಪ್ ನಲ್ಲಿ ಬ್ಯುಸಿನೆಸ್ ಗಳನ್ನು ನಡೆಸುವವರಿಗಾಗಿ ವಾಟ್ಸಾಪ್  ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಿದೆ.


ಈ ವಾಟ್ಸಾಪ್ ಬ್ಯುಸಿನೆಸ್ ಈಗ ಹೊಸತಾಗಿ ತರಲು ಉದ್ದೇಶಿಸಿರುವ ವಾಟ್ಸಾಪ್ ನ್ನು ಆನ್ ಲೈನ್ ವ್ಯವಹಾರಕ್ಕೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದೊಂದು ಮಿನಿ ಶಾಪಿಂಗ್ ಫ್ಲಾಟ್ ಫಾರ್ಮ್ ನಂತೆ ಕಾರ್ಯನಿರ್ವಹಿಸಲಿದೆ. ವಾಟ್ಸಾಪ್ ನಲ್ಲಿ ನಿಮ್ಮ ಗ್ರಾಹಕರಿಗೆ ಉತ್ಪನ್ನಗಳ ವಿವರಗಳನ್ನು ಟೆಕ್ಟ್ಸ್, ಆಡಿಯೋ, ವಿಡಿಯೋ ಮೂಲಕವೂ ನೀಡಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಅಲ್ಲದೇ ಗ್ರಾಹಕರು ಯಾವುದೇ ಉತ್ಪನ್ನಗಳ ವಿವರಗಳನ್ನು ತಿಳಿಯಲು ನೇರವಾಗಿ ಸಂಬಂಧಪಟ್ಟ ಕಂಪೆನಿಯನ್ನು ಸಂಪರ್ಕಿಸಲು ಈ ವಾಟ್ಸಾಪ್ ಅನುಕೂಲಕಾರಿಯಾಗಿದೆ.


ಇಷ್ಟೆಲ್ಲ ವೈಶಿಷ್ಟ್ಯವನ್ನು ಹೊಂದಿರುವ ವಾಟ್ಸಾಪ್ ನಿಮಗೆ ಉಚಿತವಾಗಿ ಸಿಗುತ್ತದೆಯೇ ಎಂದು ನೀವು ಪ್ರಶ್ನಿಸುವುದಾದರೆ, ಇಲ್ಲ ಎಂದೇ ಅನ್ನಬೇಕಾಗುತ್ತದೆ. ಆದರೆ, ನಿಮ್ಮ ಕೈಗೆಟಕುವ ದರದಲ್ಲಿ ಈ ವಾಟ್ಸಾಪ್ ನ್ನು ನೀವು ಮಾಡಿಕೊಳ್ಳಬಹುದಾಗಿದೆ ಎಂದು ಹೇಳಲಾಗುತ್ತಿದೆ. ಈ ಅಕೌಂಟ್ ಗೆ ಎಷ್ಟು ಹಣ ವಿಧಿಸಲಾಗುತ್ತದೆ ಎಂಬ ಬಗ್ಗೆ ಫೇಸ್ ಬುಕ್ ಆಗಲಿ, ವಾಟ್ಸಾಪ್ ಆಗಲಿ ಇನ್ನೂ ಯಾವುದೇ ಮಾಹಿತಿಗಳನ್ನು ನೀಡಿಲ್ಲ. ಈ ಆ್ಯಪ್ ನ್ನು ಪರೀಕ್ಷೆ ನಡೆಸಿದ ಬಳಿಕವೇ ಹೊರ ತರಲಾಗುವುದು. ಆ ಬಳಿಕ ಈ ಅಕೌಂಟ್ ಗೆ  ಹಣ ವಿಧಿಸುವ ಬಗ್ಗೆ ಮಾಹಿತಿ ಸಿಗಲಿದೆ.


ವಿಶ್ವಾದ್ಯಂತ 50 ದಶಲಕ್ಷಕ್ಕೂ ಹೆಚ್ಚು ಜನರು ವಾಟ್ಸಾಪ್ ಬಳಸುತ್ತಿದ್ದಾರೆ ಮತ್ತು ಸಾರ್ವಜನಿಕ ಸಂವಹನಕ್ಕೆ ಇದು ಅತ್ಯಂತ ಉಪಕಾರಿಯೂ ಆಗಿದೆ. ಈ ಫ್ಲ್ಯಾಟ್ ಫಾರಂ, ನಿಮ್ಮ ಬ್ಯುಸಿನೆಸ್ ನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಹಾಗಾಗಿ ಆನ್ ಲೈನ್ ಬ್ಯುಸಿನೆಸ್ ಆರಂಭಿಸುವವರಿಗೆ ಇದೊಂದು ಸಿಹಿ ಸುದ್ದಿಯೇ ಆಗಿದೆ.


ಇತ್ತೀಚಿನ ಸುದ್ದಿ