1.91 ಲಕ್ಷ ರೂಪಾಯಿಗೆ ಮಾರಾಟವಾದ ಬಂಡೂರು ಟಗರು! - Mahanayaka
10:24 PM Monday 1 - September 2025

1.91 ಲಕ್ಷ ರೂಪಾಯಿಗೆ ಮಾರಾಟವಾದ ಬಂಡೂರು ಟಗರು!

tagaru
08/11/2021


Provided by

ಮಂಡ್ಯ:  ಬಂಡೂರು ಟಗರೊಂದು ದಾಖಲೆಯ ಬೆಲೆಗೆ ಮಾರಾಟವಾಗಿದ್ದು,  ಬರೋಬ್ಬರಿ 1.91 ಲಕ್ಷ ರೂಪಾಯಿಗೆ ಮಾರಾಟವಾಗುವ ಮೂಲಕ ಈ ಟಗರು ದಾಖಲೆ ಸೃಷ್ಟಿಸಿದೆ. ಈ ಟಗರು ಭಾರೀ ಬೆಲೆಗೆ ಮಾರಾಟವಾಗಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಇಲ್ಲಿನ ದೇವಿಪುರ ಗ್ರಾಮದ ಸಣ್ಣಪ್ಪ ಎಂಬವರು ಟಗರು ಮಾರಿದ ರೈತರಾಗಿದ್ದು,  2 ವರ್ಷಗಳ ಹಿಂದೆ ಅವರು ಈ ಬಂಡೂರು ಟಗರನ್ನು 1 ಲಕ್ಷದ 5 ಸಾವಿರ ರೂಪಾಯಿಗಳ ಹಿಂದೆ  ಖರೀದಿಸಿದ್ದರು. ಆದರೆ ಇದೀಗ ಈ ಟಗರು 1 ಲಕ್ಷದ 91 ಸಾವಿರ ರೂಪಾಯಿಗಳಿಗೆ ಮಾರಾಟವಾಗಿದೆ.

ಈ ಬಂಡೂರು ಟಗರನ್ನು 1.91 ಲಕ್ಷ ರೂಪಾಯಿಗಳಿಗೆ  ಬಿದರಕೋಟೆಯ ಕೃಷ್ಣಗೌಡ ಎಂಬವರು ಖರೀದಿಸಿದ್ದಾರೆ. ಇನ್ನೂ ಅಧಿಕ ಬೆಲೆ ಮಾರಾಟವಾದ ಟಗರನ್ನು ಗ್ರಾಮಸ್ಥರು ಮೆರವಣಿಗೆ ನಡೆಸಿ, ಗ್ರಾಮದ ಹಿರಿಯಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಖರೀದಿದಾರರ ಜೊತೆಗೆ ಕಳುಹಿಸಿಕೊಡಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ