ಅಕ್ಷರ ಸಂತ ಹರೇಕಳ ಹಾಜಬ್ಬನವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ - Mahanayaka

ಅಕ್ಷರ ಸಂತ ಹರೇಕಳ ಹಾಜಬ್ಬನವರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

harekala hajabba
08/11/2021

ಕೊಣಾಜೆ:  ಅಕ್ಷರ ಸಂತ ಹರೇಕಳ ಹಾಜಬ್ಬನವರಿಗೆ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗಾಗಿ ತಮ್ಮ ಸ್ವಂತ ದುಡಿಮೆಯಿಂದಲೇ ಶಾಲೆ ಕಟ್ಟಿಸಿದ ಮಹಾನ್ ಸಾಧಕರಾಗಿರುವ ಹರೇಕಳ ಹಾಜಬ್ಬನವರಿಗೆ ಇಂದು ಪದ್ಮಶ್ರೀ ಗೌರವ ಸಂದಿದೆ.

ಹರೇಕಳ ಎಂಬ ಗ್ರಾಮೀಣ ಪ್ರದೇಶದಲ್ಲಿ ಶಾಲೆಯನ್ನು ನಿರ್ಮಿಸಿ ಅಕ್ಷರ ಕ್ರಾಂತಿಯನ್ನು ಮೊಳಗಿಸಿದ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಘೋಷಣೆಯಾಗಿರುವ ಸಂದರ್ಭದಿಂದಲೂ ಕರಾವಳಿಯ ಜನರು  ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕಾಗಿ ಕಾಯುತ್ತಿದ್ದರು. ಅಂತಿಮವಾಗಿ  ಇಂದು  ರಾಷ್ಟ್ರಪತಿಗಳಿಂದ ಅತ್ಯುತ್ತಮ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ಹಾಜಬ್ಬ ಸ್ವೀಕರಿಸಿದ್ದಾರೆ.

ಇನ್ನೂ ಹರೇಕಳ ಹಾಜಬ್ಬ ಅವರಿಗೆ ಪ್ರಶಸ್ತಿ ಪ್ರಧಾನವಾಗುತ್ತಿರುವ ದೃಶ್ಯವನ್ನು ಹಾಜಬ್ಬನವರು ಕಟ್ಟಿಸಿದ ಶಾಲೆಯ ಮಕ್ಕಳು ಶಾಲೆಯಲ್ಲಿ ಅಳವಡಿಸಿದ್ದ ಪರದೆಯ ಮೂಲಕ ವೀಕ್ಷಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ