ಡಾನ್ಸ್ ಮಾಡುತ್ತಿದ್ದ ಮಹಿಳಾ ಕಾರ್ಯಕರ್ತೆಯರ ಮೇಲೆ ನೋಟು ಎಸೆದ ಕಾಂಗ್ರೆಸ್ ಕಾರ್ಯಕರ್ತರು | ವಿಡಿಯೋ ವೈರಲ್
ಗದಗ: ಗದಗ- ಬೆಟಗೇರಿ ನಗರಸಭೆ ಚನಾವಣಾ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರ ಮೇಲೆ ಸ್ವಪಕ್ಷದವರೇ, ಹಣ ಎಸೆದು ವಿಕೃತಿ ಮೆರೆದಿರುವ ಘಟನೆಯ ವಿಡಿಯೋ ವೈರಲ್ ಆಗಿದ್ದು, ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ವಾರ್ಡ್ ನಂ. 31ರ ಕಾಂಗ್ರೆಸ್ ಅಭ್ಯರ್ಥಿ ಗೀತಾಬಾಯಿ ಕೃಷ್ಣಸಾ ಹಬೀಬ ಅವರು ನಾಮಪತ್ರ ಸಲ್ಲಿಕೆಗೆ ಆಗಮಿಸಿದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಾಂಗ್ರೆಸ್ ಪಕ್ಷದ ಟೋಪಿ ಧರಿಸಿರುವ ಮಹಿಳಾ ಕಾರ್ಯಕರ್ತೆಯರು ಡಿಜೆಗೆ ಉತ್ಸಾಹದಿಂದ ಹೆಜ್ಜೆ ಹಾಕಿದ್ದು, ಈ ವೇಳೆ ಅಲ್ಲಿದ್ದ ಕೆಲವರು ಮಹಿಳೆಯರ ಮೇಲೆ ನೋಟು ಎಸೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಇದೇನಾ ಎಂದು ಜನರು ಪ್ರಶ್ನಿಸುವಂತಾಗಿದೆ. ಈ ಘಟನೆ ಕಾಂಗ್ರೆಸ್ ಬಗ್ಗೆ ಯಾವ ಸಂದೇಶವನ್ನು ನೀಡುತ್ತದೆ ಎನ್ನುವ ಪ್ರಶ್ನೆಗಳಿಗೂ ಕಾರಣವಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಯುವ ಸಾಮಾಜಿಕ ಹೋರಾಟಗಾರ್ತಿ ನೇಮಿಚಂದ್ರ ನಿಧನ
ಮತಾಂತರ ನಿಷೇಧ ಮಸೂದೆ: ಬಿಜೆಪಿ ಶಾಸಕಾಂಗ ಸಭೆಯಲ್ಲಿ ನಡೆದ ಚರ್ಚೆಗಳೇನು?
ರಂಗಾಯಣದಲ್ಲಿ ರಾಜಕೀಯ ನಾಟಕ: ಠಾಣೆ ಮೆಟ್ಟಿಲೇರಿದ ರಂಗಾಯಣ-ಪ್ರಗತಿಪರರ ವಿವಾದ
ನನ್ನ ಕ್ಯಾರೆಕ್ಟರ್ ಬಗ್ಗೆ ಹೇಳ್ಬೇಕಂದ್ರೆ, ನೀವು ಟ್ರೈಲರ್ ನೋಡಬೇಕು | ರಶ್ಮಿಕಾ ಮಂದಣ್ಣ
ಬೂದಿ ಮುಚ್ಚಿದ ಕೆಂಡದಂತಿದ್ದ ಉಪ್ಪಿನಂಗಡಿ ಸಹಜ ಸ್ಥಿತಿಯತ್ತ!
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ನಿಧನ | ಪ್ರಧಾನಿ ಮೋದಿ ಸಹಿತ ಗಣ್ಯರಿಂದ ಸಂತಾಪ




























