ನನ್ನ ಕ್ಯಾರೆಕ್ಟರ್ ಬಗ್ಗೆ ಹೇಳ್ಬೇಕಂದ್ರೆ, ನೀವು ಟ್ರೈಲರ್ ನೋಡಬೇಕು | ರಶ್ಮಿಕಾ ಮಂದಣ್ಣ - Mahanayaka

ನನ್ನ ಕ್ಯಾರೆಕ್ಟರ್ ಬಗ್ಗೆ ಹೇಳ್ಬೇಕಂದ್ರೆ, ನೀವು ಟ್ರೈಲರ್ ನೋಡಬೇಕು | ರಶ್ಮಿಕಾ ಮಂದಣ್ಣ

rashmika mandanna
15/12/2021

ಬೆಂಗಳೂರು: ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಚಿತ್ರ ಪುಷ್ಪ ಸಿನಿಮಾ 17ಕ್ಕೆ ರಿಲೀಸ್ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನಲ್ಲಿ ಚಿತ್ರ ತಂಡ ಚಿತ್ರದ ಪ್ರಚಾರ ನಡೆಸಿತು.  ನಟ ಅಲ್ಲು ಅರ್ಜುನ್ , ನಟಿ ರಶ್ಮಿಕಾ ಮಂದಣ್ಣ ಸೇರಿದಂತೆ ಚಿತ್ರದ ವಿವಿಧ ಕಲಾವಿದರು ಪ್ರಚಾರದಲ್ಲಿ ಭಾಗಿಯಾಗಿದ್ದರು.


Provided by
Provided by
Provided by
Provided by
Provided by
Provided by
Provided by

ಚಿತ್ರದ ಬಗ್ಗೆ ಮಾತನಾಡಿದ ರಶ್ಮಿಕಾ ಮಂದಣ್ಣ,  17 ಪುಷ್ಪ ಸಿನಿಮಾ ರಿಲೀಸ್ ಆಗ್ತಿದೆ… ಎನ್ನುತ್ತಲೇ ಯಾವ ಭಾಷೆಯಲ್ಲಿ ಮಾತನಾಡಬೇಕು ಎಂದು ತಿಳಿಯದೇ ಗೊಂದಕ್ಕೀಡಾಗಿ ಜೋರಾಗಿ ನಕ್ಕರು ಬಳಿಕ ಮಾತು ಮುಂದುವರಿಸಿ,  ಎಲ್ಲ ಲಾಂಗ್ವೇಜ್ ಮಿಕ್ಸ್ ಆಗಿದೆ ತುಂಬಾ ಹಿಂದೆ ಹೋಗಿ ಬಿಟ್ಟಿದ್ದೇನೆ ಎಂದರು.

ನನ್ನ ಕ್ಯಾರೆಕ್ಟರ್ ಬಗ್ಗೆ ಹೇಳ್ಬೇಕೆಂದ್ರೆ, ನೀವು ಟ್ರೈಲರ್ ನಲ್ಲಿ, ಸಾಂಗ್ಸ್ ನಲ್ಲಿ ನೋಡಿದ್ದೀರಿ ನಿಮಗೆಲ್ಲರಿಗೂ ಖುಷಿಯಾಗಿದೆ ಅಂದ್ಕೊಂಡಿದ್ದೇನೆ. ಪುಷ್ಪಂನಲ್ಲಿ ಚಿತ್ರ ತಂಡ ಹಾರ್ಡ್ ವರ್ಕ್ ಮಾಡಿದೆ. ಅದು ಟ್ರೈಲರ್ ನಲ್ಲಿ, ಸಾಂಗ್ಸ್ ನಲ್ಲಿ ಕಾಣಿಸುತ್ತಿದೆ. ಇದೊಂದು ಟೀಂ ವರ್ಕ್, ನನಗೆ ಏನ್ ಹೇಳ್ಬೇಕು ಅಂತ ಅರ್ಥವಾಗ್ತಿಲ್ಲ,  17ಕ್ಕೆ ನಮ್ಮೆಲ್ಲರ ಹಾರ್ಡ್ ವರ್ಕ್ ಕಾಣಿಸುತ್ತದೆ ಎಂದರು.

ಇನ್ನೂ ಕರ್ನಾಟಕಕ್ಕೆ ಬಹಳ ಅಪರೂಪಕ್ಕೆ ಆಗಮಿಸಿರುವ ಬಗ್ಗೆ ಮಾತನಾಡಿದ ಅವರು, ನಾನು ನನ್ನ ಮನೆಗೆ ಹೋಗದೇ ಬಹಳ ದಿನಗಳಾಯಿತು. ಕರ್ನಾಟಕಕ್ಕೆ ಬಾರದೇ ತುಂಬಾ ದಿನಗಳಾದವು. ಇಂದು ನಿಮ್ಮನ್ನೆಲ್ಲ ಭೇಟಿ ಮಾಡಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೂದಿ ಮುಚ್ಚಿದ ಕೆಂಡದಂತಿದ್ದ ಉಪ್ಪಿನಂಗಡಿ ಸಹಜ ಸ್ಥಿತಿಯತ್ತ!

ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ನಿಧನ | ಪ್ರಧಾನಿ ಮೋದಿ ಸಹಿತ ಗಣ್ಯರಿಂದ ಸಂತಾಪ

ಸಿದ್ದರಾಮಯ್ಯ ವೇಸ್ಟ್ ಬಾಡಿ, ಅವನ ಕಥೆ ಮುಗಿದಿದೆ | ರಮೇಶ್ ಜಾರಕಿಹೊಳಿ

ಕುಡಿತದ ಮತ್ತಿನಲ್ಲಿ ಅಪ್ರಾಪ್ತ ವಯಸ್ಸಿನ ತನ್ನ ಮಗಳನ್ನೇ ಅತ್ಯಾಚಾರ ನಡೆಸಿದ ತಂದೆ!

ಏಕಾಏಕಿ ಎದ್ದು ನಿಂತು ಅಂಬೇಡ್ಕರ್ ಫೋಟೋ ಯಾಕೆ ಹಾಕಿಲ್ಲ? ಎಂದು ಪ್ರಶ್ನಿಸಿದ ಶಾಸಕ ಅನ್ನದಾನಿ | ಗರಂ ಆದ ಸ್ಪೀಕರ್

ಬಿಜೆಪಿ ನಾಯಕರು ಡಿ.ಕೆ.ಶಿವಕುಮಾರ್ ಜೊತೆಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದರು | ಲಖನ್ ಜಾರಕಿಹೊಳಿ

ಇತ್ತೀಚಿನ ಸುದ್ದಿ