ಸಿದ್ದರಾಮಯ್ಯ ವೇಸ್ಟ್ ಬಾಡಿ, ಅವನ ಕಥೆ ಮುಗಿದಿದೆ | ರಮೇಶ್ ಜಾರಕಿಹೊಳಿ - Mahanayaka

ಸಿದ್ದರಾಮಯ್ಯ ವೇಸ್ಟ್ ಬಾಡಿ, ಅವನ ಕಥೆ ಮುಗಿದಿದೆ | ರಮೇಶ್ ಜಾರಕಿಹೊಳಿ

ramesh jarakiholi
15/12/2021

ಬೆಳಗಾವಿ:  ಸಿದ್ದರಾಮಯ್ಯ ವೇಸ್ಟ್ ಬಾಡಿ, ಅವನ ಕಥೆ ಮುಗಿದಿದೆ. ಮುಂದಿನ ಸಾರಿ ಆ ಮನುಷ್ಯ ಸೋಲುತ್ತಾನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಘಟನೆ  ನಡೆದಿದೆ.

ಜಿಲ್ಲೆಯ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಒಬ್ಬ ಹಿಂದುಳಿದ ಪ್ರಮುಖ ನಾಯಕ ಹೊರ ಬೀಳುತ್ತಿದ್ದಾನೆ ಎಂದು ಸಿದ್ದರಾಮಯ್ಯಗೆ ಭಯ ಹುಟ್ಟಿದೆ. ಸಿದ್ದರಾಮಯ್ಯರನ್ನ ಕುರುಬರೆಲ್ಲರೂ ರಿಜೆಕ್ಟ್ ಮಾಡಿದ್ದಾರೆ. ಸಿದ್ದರಾಮಯ್ಯ ವೇಸ್ಟ್​ ಬಾಡಿ. ಅವನದ್ದು ಕಥೆ ಮುಗಿದಿದೆ. ಮುಂದಿನ ಸಾರಿ ಆ ಮನುಷ್ಯ ಸೋಲುತ್ತಾನೆ ಎಂದು ವಾಗ್ದಾಳಿ ನಡೆಸಿದರು.

ನಾನು ಕಾಂಗ್ರೆಸ್ ಸೋಲಿಸುತ್ತೇನೆ ಅಂತಾ ಹಠಕ್ಕೆ ಬಿದ್ದಿದ್ದು ನಿಜ. ಇವತ್ತು ಅವರ ಪಕ್ಷ ಗೆದ್ದಿದೆ ಅದರ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಎಲ್ಲಿ ತಪ್ಪಿದೆ ಎಂಬುದು ಆಂತರಿಕವಾಗಿ ಚರ್ಚೆ ಮಾಡುತ್ತೇವೆ ಎಂದು ಅವರು ಇದೇ ವೇಳೆ ಹೇಳಿದರು.

ಪಕ್ಷ ಯಾಕೆ ಸೋತಿದೆ ಎಂಬುದನ್ನು ನಮ್ಮ ವರಿಷ್ಠರ ಜೊತೆಗೆ ಚರ್ಚೆ ಮಾಡಿ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ‌. ಕೊನೆಯ ಮೂರು ದಿನಗಳಲ್ಲಿ ಜಿಲ್ಲೆಯ ಚಿತ್ರಣ ಬದಲಾಯಿತು. ಬಿಜೆಪಿಗೆ ಹೋಗುವ ಕುರಿತು ಲಖನ್ ಜಾರಕಿಹೊಳಿ‌ ತೀರ್ಮಾನ ತೆಗೆದುಕೊಳ್ಳಬೇಕು. ಲಖನ್ ಜಾರಕಿಹೊಳಿ‌ ಕೊನೆಯ ಮೂರು ದಿನ ನಮ್ಮ ಕೈಗೆ ಸಿಗಲಿಲ್ಲ. ಚುನಾವಣೆ ಚಿತ್ರಣ ಬದಲಾಗಿದ್ದಕ್ಕೆ ನಾನು ಬಿಜೆಪಿ ಪಕ್ಷದ ಪರ ಪ್ರಚಾರ ಮಾಡಿದ್ದೇನೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕುಡಿತದ ಮತ್ತಿನಲ್ಲಿ ಅಪ್ರಾಪ್ತ ವಯಸ್ಸಿನ ತನ್ನ ಮಗಳನ್ನೇ ಅತ್ಯಾಚಾರ ನಡೆಸಿದ ತಂದೆ!

ಏಕಾಏಕಿ ಎದ್ದು ನಿಂತು ಅಂಬೇಡ್ಕರ್ ಫೋಟೋ ಯಾಕೆ ಹಾಕಿಲ್ಲ? ಎಂದು ಪ್ರಶ್ನಿಸಿದ ಶಾಸಕ ಅನ್ನದಾನಿ | ಗರಂ ಆದ ಸ್ಪೀಕರ್

ಬಿಜೆಪಿ ನಾಯಕರು ಡಿ.ಕೆ.ಶಿವಕುಮಾರ್ ಜೊತೆಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದರು | ಲಖನ್ ಜಾರಕಿಹೊಳಿ

ಮುಸ್ಲಿಮ್ ವ್ಯಕ್ತಿಯ ಪಾರ್ಥಿವ ಶರೀರ ಸಾಗಿಸಲು ದಾರಿ ಮಾಡಿಕೊಟ್ಟ ಹನುಮ ಮಾಲಾಧಾರಿಗಳು!

ಕಾನದ-ಕಟದರ ಜನನ: ತುಳುನಾಡಿನ ಅವಳಿ ವೀರರು-ಕಾನದ ಕಟದರು | ಸಂಚಿಕೆ: 10

ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆ ಹಣ್ಣಿನ ಜೊತೆಗೆ ಶೇಂಗಾ ಮಿಠಾಯಿ ನೀಡಲು ನಿರ್ಧಾರ!

ಇತ್ತೀಚಿನ ಸುದ್ದಿ