ಬಸ್‌ ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ವೃದ್ಧನಿಗೆ ಚಪ್ಪಲಿ ಸೇವೆ ಮಾಡಿದ ಮಹಿಳೆ! | ಕಾಲಿಗೆ ಬಿದ್ದು ಪರಾರಿಯಾದ ಕಾಮುಕ - Mahanayaka
12:12 AM Thursday 10 - September 2026

ಬಸ್‌ ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ವೃದ್ಧನಿಗೆ ಚಪ್ಪಲಿ ಸೇವೆ ಮಾಡಿದ ಮಹಿಳೆ! | ಕಾಲಿಗೆ ಬಿದ್ದು ಪರಾರಿಯಾದ ಕಾಮುಕ

kolara bus
14/08/2026

ಕೋಲಾರ: ಕೆಎಸ್‌ ಆರ್‌ ಟಿಸಿ ಬಸ್‌ ನಲ್ಲಿ ಪಕ್ಕದ ಸೀಟಿನಲ್ಲಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ವೃದ್ಧನೊಬ್ಬನಿಗೆ ಮಹಿಳೆ ಹಾಗೂ ಪ್ರಯಾಣಿಕರು ಧರ್ಮದೇಟು ನೀಡಿರುವ ಘಟನೆ ನಡೆದಿದೆ.

ಕೋಲಾರದಿಂದ ಬಂಗಾರಪೇಟೆಗೆ ತೆರಳುತ್ತಿದ್ದ ಕೆಎಸ್‌ ಆರ್‌ ಟಿಸಿ ಬಸ್‌ ನಲ್ಲಿ (KA–51–F–4452) ಈ ಘಟನೆ ಸಂಭವಿಸಿದೆ.

ಬಸ್‌ ನಲ್ಲಿ ಮಹಿಳೆಯ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಈ ವೃದ್ಧ, ಆಕೆಯೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದ್ದಾನೆ. ಮಹಿಳೆಯ ಕೈಯನ್ನು ಮುಟ್ಟಿದ್ದಲ್ಲದೆ, ಆಕೆಯ ಕೈಗೆ ಮುತ್ತು ನೀಡಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.

ಕೆಲ ಕಾಲ ಈತನ ಅಸಭ್ಯ ವರ್ತನೆಯನ್ನು ತಡೆದುಕೊಂಡ ಮಹಿಳೆ, ಬಳಿಕ ಆಕ್ರೋಶಗೊಂಡು ಬಸ್‌ನಲ್ಲೇ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಹಿಳೆ ಧರ್ಮದೇಟು ನೀಡುತ್ತಿದ್ದಂತೆ ಭೀತಿಗೊಂಡ ವೃದ್ಧ, “ನನಗೂ ಹೆಂಡತಿ, ಮಕ್ಕಳಿದ್ದಾರೆ, ದಯವಿಟ್ಟು ನನ್ನನ್ನು ಬಿಟ್ಟುಬಿಡಿ” ಎಂದು ಅಂಗಲಾಚಿ ಕ್ಷಮೆ ಕೋರಿದ್ದಾನೆ.

ಕಾಲಿಗೆ ಬಿದ್ದು ಪರಾರಿಯಾದ ಆರೋಪಿ:

ಮಹಿಳೆಯ ಆಕ್ರೋಶ ಕಂಡು ಬಸ್‌ನಲ್ಲಿದ್ದ ಇತರ ಪ್ರಯಾಣಿಕರೂ ಮಧ್ಯಪ್ರವೇಶಿಸಿ ಆರೋಪಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಆತ, ಮಹಿಳೆಯ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ್ದಾನೆ. ಬಳಿಕ ಬಸ್ ನಿಲ್ಲಿಸುತ್ತಿದ್ದಂತೆ ಕೆಳಗಿಳಿದು ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಯಾವುದೇ ಅಧಿಕೃತ ಪೊಲೀಸ್ ದೂರು ದಾಖಲಾಗಿಲ್ಲ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti