ಚಿಕ್ಕಮಗಳೂರು: ವಸತಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ — ಬಾಲಕನ ಸ್ಥಿತಿ ಗಂಭೀರ - Mahanayaka
12:42 PM Thursday 10 - September 2026

ಚಿಕ್ಕಮಗಳೂರು: ವಸತಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನ — ಬಾಲಕನ ಸ್ಥಿತಿ ಗಂಭೀರ

residential school chikkamagaluru
14/08/2026

ಚಿಕ್ಕಮಗಳೂರು: ನಗರದ ಕಲ್ಯಾಣ ನಗರದಲ್ಲಿರುವ ಆಲ್ದೂರು–ಆವುತಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ 14 ವರ್ಷದ ನಿಶದ್ ಎಂಬ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.

ಬಾಲಕ ತಾನು ಮಲಗಿದ್ದ ಕೊಠಡಿಯಲ್ಲೇ ಬಟ್ಟೆ ಒಣಗಿಸಲು ಕಟ್ಟಿದ್ದ ದಾರದಿಂದ ನೇಣು ಹಾಕಿಕೊಂಡಿದ್ದಾಗ, ತಕ್ಷಣವೇ ಗಮನಿಸಿದ ಸಹಪಾಠಿಗಳು ಸಮಯಪ್ರಜ್ಞೆ ಮೆರೆದು ಆತನನ್ನು ರಕ್ಷಿಸಿದ್ದಾರೆ.

ಘಟನೆಯಿಂದ ಗಂಭೀರಗೊಂಡ ಬಾಲಕನನ್ನು ಮೊದಲು ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರ್ಕಾರಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಆತನ ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸಿದ ಕಾರಣ, ವೆಂಟಿಲೇಟರ್ ಹಾಗೂ ಗ್ಲುಕೋಸ್ ಬೆಂಬಲದೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti