ಉತ್ತರ ಪ್ರದೇಶ: ತಮ್ಮದೇ ಕ್ಷೇತ್ರದ ಬಿಜೆಪಿ ಶಾಸಕನನ್ನು ಅಟ್ಟಾಡಿಸಿದ ಗ್ರಾಮಸ್ಥರು - Mahanayaka

ಉತ್ತರ ಪ್ರದೇಶ: ತಮ್ಮದೇ ಕ್ಷೇತ್ರದ ಬಿಜೆಪಿ ಶಾಸಕನನ್ನು ಅಟ್ಟಾಡಿಸಿದ ಗ್ರಾಮಸ್ಥರು

bjp mla vikram saini
21/01/2022


Provided by

ಲಖನೌ: ಉತ್ತರ ಪ್ರದೇಶದಲ್ಲಿ ತಮ್ಮದೇ ಕ್ಷೇತ್ರದ ಶಾಸಕರೊಬ್ಬರನ್ನು ಸ್ಥಳೀಯರು ಅಟ್ಟಾಡಿಸಿರುವ ಘಟನೆ ಮುಜಾಫರ್‌ನಗರದ ಮುನ್ವರ್‌ಪುರ ಗ್ರಾಮದಲ್ಲಿ ನಡೆದಿದೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಗ್ರಾಮಕ್ಕೆ ಆಗಮಿಸಿದ್ದ ಬಿಜೆಪಿ ಶಾಸಕ ವಿಕ್ರಮ್ ಸೈನಿ ವಿರುದ್ಧ ಸ್ಥಳೀಯರು ಘೋಷಣೆ ಕೂಗಿದ್ದಾರೆ. ಕೃಷಿ ಕಾನೂನು ವಿಚಾರವಾಗಿ ಶಾಸಕರ ವಿರುದ್ಧ ಘೋಷಣೆ ಕೂಗಿದ ಗ್ರಾಮಸ್ಥರು ಬಳಿಕ ಅವರು ಕಾರಿನಿಂದ ಕೆಳಗಿಳಿಯಲೂ ಕೂಡ ಆಸ್ಪದ ನೀಡದೇ ಮುತ್ತಿಗೆ ಹಾಕಿದ್ದಾರೆ.

ಕೂಡಲೇ ಹಿಂತಿರುಗಿ ಸ್ಥಳದಿಂದ ಹೊರಹೋಗುವಂತೆ ಆಗ್ರಹಿಸಿದ್ದು, ಈ ವೇಳೆ ಆಕ್ರೋಶಿತರ ಆಗ್ರಹಕ್ಕೆ ಮಣಿದ ಶಾಸಕ ಬಂದ ಕಾರಿನಲ್ಲೇ ವಾಪಸ್ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕರು ತಮ್ಮ ಭೇಟಿಗೆ ವಿರೋಧ ವ್ಯಕ್ತಪಡಿಸಿದವರು ಮದ್ಯದ ಅಮಲಿನಲ್ಲಿದ್ದರು ಎಂದು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಚೀನಾದ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಯುವಕನ ಪತ್ತೆಗೆ ಪಿಎಲ್‌ಎ ನೆರವು ಕೋರಿದ ಭಾರತೀಯ ಸೇನೆ

ಧಾರ್ಮಿಕ ನಾಯಕ ಕಾಳಿಚರಣ್ ಮಹಾರಾಜ್ ಮತ್ತೊಮ್ಮೆ ಅರೆಸ್ಟ್!

ಮಂಗಳೂರು: ಮರುವಾಯಿ ಮೀನಿನ ಪದಾರ್ಥ ತಿಂದು ಹಲವರು ಅಸ್ವಸ್ಥ

ವೈದ್ಯಕೀಯ ಕೋರ್ಸ್‌: ಒಬಿಸಿಗಳಿಗೆ ಶೇ. 27, ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿಗೆ ಸುಪ್ರೀಂಕೋರ್ಟ್‌ ಅನುಮತಿ

ಇತ್ತೀಚಿನ ಸುದ್ದಿ