ಕೋವಿಶೀಲ್ಡ್, ಕೋವ್ಯಾಕ್ಸಿನ್ ಮುಕ್ತ ಮಾರುಕಟ್ಟೆಗೆ ಡಿಜಿಸಿಐ ಶಿಫಾರಸು - Mahanayaka
12:44 AM Wednesday 19 - March 2025

ಕೋವಿಶೀಲ್ಡ್, ಕೋವ್ಯಾಕ್ಸಿನ್ ಮುಕ್ತ ಮಾರುಕಟ್ಟೆಗೆ ಡಿಜಿಸಿಐ ಶಿಫಾರಸು

covishield covaccine
21/01/2022

ನವದೆಹಲಿ: ಜನತೆಗೆ ಉಚಿತವಾಗಿ ಒದಗಿಸಲಾಗುತ್ತಿರುವ ಕೋವಿಡ್ ಲಸಿಕೆಗಳಾದ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್​ ಲಸಿಕೆಯನ್ನು ಮುಕ್ತ ಮಾರುಕಟ್ಟೆ ಮೂಲಕ ಒದಗಿಸಲು ಅವಕಾಶ ನೀಡುವಂತೆ ಕೇಂದ್ರ ಔಷಧ ನಿಯಂತ್ರಣ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.


Provided by

ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ಮಾರುಕಟ್ಟೆಗೆ ತರಲು ಭಾರತ್ ಬಯೋಟೆಕ್ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಗಳು ಅರ್ಜಿಯನ್ನು ಸಲ್ಲಿಸಿದ್ದವು. ಈ ಅರ್ಜಿಗಳನ್ನು ಹಿಂದಿನ ಶುಕ್ರವಾರ ಪರಿಶೀಲನೆ ನಡೆಸಿದ ಡಿಸಿಜಿಐ ಕೋವಿಡ್ ಲಸಿಕೆಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಲು ಈಗ ಶಿಫಾರಸು ಮಾಡಿದೆ.

ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಅಡಿಯಲ್ಲಿ ಬರುವ ತಜ್ಞರ ಸಮಿತಿ ಕೂಡಾ ಕೇಂದ್ರ ಔಷಧ ನಿಯಂತ್ರಣ ಸಮಿತಿಗೆ ಕೋವಿಡ್ ಲಸಿಕೆಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಪರಿಷ್ಕರಿಸುವಂತೆ ಮನವಿ ಮಾಡಿತ್ತು. ಈ ಮೂಲಕ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳು ಶೀಘ್ರದಲ್ಲೆ ಮುಕ್ತ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.


Provided by

ಹಿಂದಿನ ವರ್ಷ ಜ. 23ರಿಂದ ಈ ಕೋವಿಡ್ ಲಸಿಕೆಗಳನ್ನು ತುರ್ತು ಬಳಕೆ ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. ಮುಕ್ತ ಮಾರುಕಟ್ಟೆಗೆ ಬರುವ ಮೂಲಕ ಕೋವಿಡ್ ಸೋಂಕಿನ ಅಪಾಯ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವ ಸಾಧ್ಯತೆಯಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದ್ವಿಚಕ್ರ ವಾಹನ – ಲಾರಿ ಮುಖಾಮುಖಿ ಡಿಕ್ಕಿ; ಸವಾರ ಸಾವು

ಹೆಸರಾಂತ ಮಕ್ಕಳ ತಜ್ಞ ಡಾ.ದಿನೇಶ್ ಅವರ ಸ್ಮರಣಾರ್ಥ ಚಾಲ್ಸ್ ಆಂಬುನೆಲ್ಸ್ ನಿಂದ ಉಚಿತ ಸೇವೆ

ಖ್ಯಾತ ಕವಿ ಚೆನ್ನವೀರ ಕಣವಿ ಆರೋಗ್ಯದಲ್ಲಿ ಏರುಪೇರು

ಬಿಜೆಪಿ ಶಾಸಕ ಅನಿಲ್‌ ಬೆನಕೆಯಿಂದ ಕೋವಿಡ್ ನಿಯಮ ಉಲ್ಲಂಘನೆ: ಪ್ರಕರಣ ದಾಖಲು

ಇತ್ತೀಚಿನ ಸುದ್ದಿ