ಮೀನು ತರಲು ಇನ್ನು ಮಾರ್ಕೆಟ್ ಗೆ ಹೋಗಬೇಕಿಲ್ಲ | ಮನೆ ಬಾಗಿಲಿಗೆ ಬರಲಿದೆ ಮೀನು! - Mahanayaka
10:03 AM Saturday 23 - August 2025

ಮೀನು ತರಲು ಇನ್ನು ಮಾರ್ಕೆಟ್ ಗೆ ಹೋಗಬೇಕಿಲ್ಲ | ಮನೆ ಬಾಗಿಲಿಗೆ ಬರಲಿದೆ ಮೀನು!

19/11/2020


Provided by

ಬೆಂಗಳೂರು: ರಾಜ್ಯ ಮೀನುಗಾರಿಕೆ ಇಲಾಖೆಯು ಆನ್ ಲೈನ್ ಮೂಲಕ ಮೀನು ಮಾರಾಟಕ್ಕೆ ಮುಂದಾಗಿದ್ದು, ಈ ಸಂಬಂಧ ಆ್ಯಪ್ ಒಂದನ್ನು ಅಭಿವೃದ್ಧಿ ಪಡಿಸುತ್ತಿದೆ. ಈ ಸಂಬಂಧ ಬಂದರು ಮತ್ತು ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.

ಆನ್ ಲೈನ್ ಮುಖಾಂತರ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ಮೀನು ತಂದು‌ಕೊಡುವ ಯೋಜನೆ ರೂಪಿಸಲಾಗುತ್ತಿದೆ ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದು, ಈಗಾಗಲೇ ಅಪ್ ಸಿದ್ದ ಪಡಿಸಲಾಗುತ್ತಿದೆ. ನವೆಂಬರ್ 21 ರಂದು ಮತ್ಸ್ಯ ಸಂಪದ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಹೆಸರುಘಟ್ಟದಲ್ಲಿರುವ ಮೀನುಗಾರಿಕೆ ಸಾಕಾಣಿಕೆ ಕೇಂದ್ರದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಮೀನು ಕ್ವಾರೈಂಟ್‍ನ್ ಕೇಂದ್ರ ಸ್ಥಾಪಿಸಲಾಗಿದೆ. ವಿದೇಶದಿಂದ ಆಮದು ಮಾಡಿದ ಮೀನನ್ನು ಒಂದು ವಾರ ಪ್ರತ್ಯೇಕವಾಗಿಟ್ಟು ರೋಗ ಮುಕ್ತವೆಂದು ನಿರ್ಧರಿಸಿದ ನಂತರ ಸಾಕಾಣಿಕೆ ಮಾಡಲಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ಇತ್ತೀಚಿನ ಸುದ್ದಿ