ಗಂಡನನ್ನು ಆನ್ ಲೈನ್ ಸೈಟ್ ನಲ್ಲಿ ಮಾರಾಟಕ್ಕಿಟ್ಟ ಪತ್ನಿ! - Mahanayaka

ಗಂಡನನ್ನು ಆನ್ ಲೈನ್ ಸೈಟ್ ನಲ್ಲಿ ಮಾರಾಟಕ್ಕಿಟ್ಟ ಪತ್ನಿ!

john linda
04/02/2022

ಉದ್ಯೋಗದ ಒತ್ತಡದ ನಡುವೆ ಪತ್ನಿ, ಮಕ್ಕಳಿಗೆ ಸಮಯ ನೀಡುವುದು ಬಹಳಷ್ಟು ಪುರುಷರಿಗೆ ಒಂದು ಸವಾಲಿನ ಕೆಲಸವೇ ಆಗಿದೆ. ಪತಿ ಮನೆಗೆ ಸರಿಯಾಗಿ ಸಮಯ ನೀಡುತ್ತಿಲ್ಲ ಎನ್ನುವ ಕಾರಣಕ್ಕೆ ಎಷ್ಟೂ ಸಂಸಾರಗಳು ಒಡೆದು, ಜಗಳ ಬೀದಿಗೆ ಬರುವುದು ಸರ್ವೇ ಸಾಮಾನ್ಯವಾಗಿದೆ. ಆದರೆ. ಇಲ್ಲೊಬ್ಬಳು ಪತ್ನಿ ತನ್ನ ತನ್ನ ಗಂಡನ ಮೇಲಿನ ಕೋಪಕ್ಕೆ ಆತನನ್ನು ಹರಾಜಿಗಿಟ್ಟ ಘಟನೆಯೇ ನಡೆದು ಹೋಗಿದೆ.

ಹೌದು..! . ಐರಿಷ್ ​ನ ಲಿಂಡಾ ಮ್ಯಾಕ್​ ಅಲಿಸ್ಟರ್​ ಎನ್ನುವ ಮಹಿಳೆ ತನ್ನ ಪತಿ ಜಾನ್ ​ರನ್ನು ಹರಾಜಿಗಿಟ್ಟಿದ್ದಾಳೆ. ಪತಿ ಮೀನುಗಾರಿಕೆಗೆ ತೆರಳಿದ್ದಾನೆ. ಮನೆಗೆ ಸರಿಯಾಗಿ ಸಮಯ ನೀಡುತ್ತಿಲ್ಲ ಎನ್ನುವ ಕಾರಣ ಮುಂದಿಟ್ಟು ತನ್ನ ಪತಿಯನ್ನು ಹರಾಜಿಗಿಟ್ಟಿರುವುದಾಗಿ ಆಕೆ ತಾನು ನೀಡಿರುವ ಜಾಹೀರಾತಿನಲ್ಲಿ ತಿಳಿಸಿದ್ದಾಳೆ.

ಪತಿ ಜಾನ್ ಆಕೆಯನ್ನು ಮತ್ತು ಇಬ್ಬರನ್ನು ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಮೀನುಗಾರಿಕೆಗೆ ತೆರಳಿದ ಕಾರಣ ಆನ್ಲೈನ್​ ಹರಾಜು ಸೈಟ್​ ನಲ್ಲಿ ಮಾರಾಟಕ್ಕಿಟ್ಟಿದ್ದಾಳೆ. ಗಂಡನ ಫೋಟೋ ಮತ್ತು ಆತನ ಬಗೆಗಿನ ವಿವರಗಳನ್ನು ನೀಡಿ ಹರಾಜಿಗಿಟ್ಟಿದ್ದಾಳೆ.

ಜಾನ್​ ಆರು ಅಡಿ ಒಂದು ಇಂಚು ಎತ್ತರವಿದ್ದಾನೆ. 37 ವರ್ಷ ವಯಸ್ಸಾಗಿದೆ. ಮೀನುಗಾರಿಗೆ ಮತ್ತು ಬೇಟೆಯಲ್ಲಿ ಪರಿಣಿತಿಯನ್ನು ಪಡೆದಿದ್ದು, ಆಹಾರ ಮತ್ತು ನೀರನ್ನು ನೀಡಿದರೆ ಸಾಕು ನ್ಯಾಯಯುತವಾಗಿರುತ್ತಾನೆ . ಅಲ್ಲದೇ ಈತ ಗೋಮಾಂಸ ಕೃಷಿಯನ್ನು ಮಾಡುತ್ತಾನೆ. ಕೆಲವೊಮ್ಮೆ ಅತಿಯಾದ ಜಲಸಂಚಯನವು ಅಪಾಯಕಾರಿಯಾಗಿರುತ್ತದೆ. ಅದನ್ನು ಅರ್ಥಮಾಡಿಕೊಳ್ಳಬೇಕಿದೆ. ಅಲ್ಲದೆ ಆತನಿಗೆ ಕೆಲವು ಮನೆಯ ಕೆಲಸಗಳನ್ನೂ ಕಲಿಸುವ ಅಗತ್ಯವಿದೆ. ಅದನ್ನು ಕಲಿಸುವಷ್ಟು ಸಮಯವಾಗಲೀ ತಾಳ್ಮೆಯಾಗಲಿ ನನಗೆ ಇಲ್ಲ ಎಂದು ಗಂಡನನ್ನು ಹರಾಜಿಗಿಟ್ಟ ಜಾಹೀರಾತಿನಲ್ಲಿ ಮಹಿಳೆ ತಿಳಿಸಿದ್ದಾಳೆ.

ರಜಾ ಇರುವ ದಿನಗಳಲ್ಲಿ ಹೀಗೆ ಮಕ್ಕಳನ್ನು, ನನ್ನನ್ನು ಬಿಟ್ಟು ಹೋಗುವುದು ಸರಿಯಲ್ಲ. ಅಲ್ಲದೆ ಮಧ್ಯರಾತ್ರಿ ಮನೆಗೆ ಬರುವ ಅಭ್ಯಾಸ ನನ್ನ ತಾಳ್ಮೆಯನ್ನು ಕೆಡಿಸಿದೆ ಹೀಗಾಗಿ ಹರಾಜಿಗೆ ಇಟ್ಟಿದ್ದೇನೆ. ಇದೇ ಅಂತಿಮ ನಿರ್ಧಾರವಾಗಿದೆ. ಯಾವುದೆ ಬದಲಾವಣೆ ಮತ್ತು ವಾಪಸ್​  ಮಾಡಲು ಅವಕಾಶವಿಲ್ಲ ಎಂದು ಹೇಳಿದ್ದಾರೆ.

ಪತ್ನಿ ಲಿಂಡಾ ನೀಡಿದ ಜಾಹೀರಾತಿನ ಬಗ್ಗೆ ಜಾನ್ ​ಗೆ ಸ್ನೇಹಿತರು ತಿಳಿಸಿದ ಬಳಿಕವೇ ಗೊತ್ತಾಗಿದೆ. ಹೀಗಿದ್ದರೂ ಅದನ್ನು ಆತ ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ವರದಿಯಾಗಿದೆ.

ಇನ್ನೂ  ಈ ಜಾಹೀರಾತು ವ್ಯಾಪಕ ವೈರಲ್ ಆದ ಬಳಿಕ ಟ್ರೇಡ್​ ಮಿ ಸೈಟ್​ ನ ಗಮನಕ್ಕೆ ಬಂದಿದ್ದು, ನಿಯಮ ಉಲ್ಲಂಘಿಸಲಾಗಿದೆ ಎಂದು ಜಾಹೀರಾತನ್ನು ತೆಗೆದು ಹಾಕಲಾಗಿದೆ. ಆದರೂ ಲಿಂಡಾ ನೀಡಿದ್ದ ಜಾಹೀರಾತಿಗೆ 63 ಯುರೋಗೆ ಬಿಡ್ಡಿಂಗ್ ಆಗಿತ್ತು ಎನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ವೃದ್ಧೆ ಬದುಕಿರುವಾಗಲೇ ಮರಣ ಪತ್ರ ನೀಡಿದ ಅಧಿಕಾರಿಗಳು

ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜು ಗೇಟ್ ಹಾಕಿರುವುದು ಸಂವಿಧಾನ ವಿರೋಧಿ: ಸಿದ್ದರಾಮಯ್ಯ

ಮಾ.12ಕ್ಕೆ ನಿಗದಿಯಾಗಿದ್ದ ನೀಟ್‌ ಪಿಜಿ ಪರೀಕ್ಷೆ ಮುಂದೂಡಿಕೆ

ಭೀಕರ ರಸ್ತೆ ಅಪಘಾತ: ಆರು ಮಂದಿ ಸಾವು

ಓಮಸತ್ವ, ಕಸ್ತೂರಿ ಮಾರಾಟ ಮಾಡುವ ನೆಪದಲ್ಲಿ ಮಹಿಳೆಯ ಅತ್ಯಾಚಾರ ಯತ್ನ

 

ಇತ್ತೀಚಿನ ಸುದ್ದಿ