ವೃದ್ಧೆ ಬದುಕಿರುವಾಗಲೇ ಮರಣ ಪತ್ರ ನೀಡಿದ ಅಧಿಕಾರಿಗಳು - Mahanayaka

ವೃದ್ಧೆ ಬದುಕಿರುವಾಗಲೇ ಮರಣ ಪತ್ರ ನೀಡಿದ ಅಧಿಕಾರಿಗಳು

chikkamagalluru
04/02/2022

ಚಿಕ್ಕಮಗಳೂರು: ಆಸ್ತಿಗಾಗಿ ಬದುಕಿರುವಾಗಲೇ ವೃದ್ಧೆಯ ಹೆಸರಿನಲ್ಲಿ ಸಂಬಂಧಿಕರು ಮರಣ ಪತ್ರ ಸೃಷ್ಟಿ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಪಟ್ಟಣದಲ್ಲಿ ನಡೆದಿದೆ.

ವೃದ್ಧೆಯ ಮರಣ ಪತ್ರ ಸೃಷ್ಟಿಗೆ ಮುಂದಾದ ಸಂಬಂಧಿಕರನ್ನು ವಿಚಾರಿಸದೆ , ಪರಿಶೀಲಿಸದೆ ತಾಲೂಕು ಅಧಿಕಾರಿಗಳು ಕೂಡ ಯಡವಟ್ಟು ಮಾಡಿದ್ದಾರೆ. ಬದುಕಿರುವಾಗಲೇ ವೃದ್ಧೆ ಹೆಸರಿಗೆ ಮರಣ ಪತ್ರ, ವಂಶವೃಕ್ಷ ನೀಡಿದ್ದಾರೆ.

ಮರಣ ಪತ್ರ, ವಂಶವೃಕ್ಷ ಸೃಷ್ಟಿ ಮಾಡಿ ಆಸ್ತಿ ಕಬಳಿಕೆಗೆ ಸಂಬಂಧಿಕರು ಯತ್ನಿಸಿದ್ದು, ಜಮೀನು ಕಳೆದುಕೊಂಡು ವೃದ್ಧೆ ಸಾರಮ್ಮ ಬೀದಿಗೆ ಬಿದ್ದಿದ್ದಾರೆ. ವೃದ್ಧೆ ಸತ್ತು ಹೋಗಿದ್ದಾರೆಂದು ಮರಣ ಪತ್ರ ಸೃಷ್ಟಿ ಮಾಡಿದ್ದು, ವೃದ್ಧೆಯ ಮರಣ ಪತ್ರ ಬಂದ ಕಾರಣ ರೇಷನ್ ಕಾರ್ಡ್ ಕೂಡ ಬಂದ್ ಆಗಿದೆ.

ಬಾಳೆಕೊಪ್ಪ ಸರ್ವೇ ನಂ 26 ರಲ್ಲಿರುವ ಒಂದು ಎಕರೆ 16 ಗುಂಟೆ ಜಮೀನಿಗಾಗಿ ಸಾರಮ್ಮ ಸಂಬಂಧಿಕರಾದ ಇ.ಟಿ.ಬಾಬು ಹಾಗೂ ಶ್ರೀಜಾ ಎಂಬವರು ನಕಲಿ ದಾಖಲೆ ಸೃಷ್ಟಿ ಮಾಡಿದ್ದಾರೆ. ಜಮೀನು ಕೊಡುವುದಿಲ್ಲ ಎಂದು ಇ.ಟಿ.ಬಾಬು ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಸೂಕ್ತ ನ್ಯಾಯ ಒದಗಿಸುವಂತೆ ಮಾಧ್ಯಮದ ಬಳಿ ವೃದ್ಧೆ ತಮ್ಮ ಆಳಲು ತೋಡಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜು ಗೇಟ್ ಹಾಕಿರುವುದು ಸಂವಿಧಾನ ವಿರೋಧಿ: ಸಿದ್ದರಾಮಯ್ಯ

ಮಾ.12ಕ್ಕೆ ನಿಗದಿಯಾಗಿದ್ದ ನೀಟ್‌ ಪಿಜಿ ಪರೀಕ್ಷೆ ಮುಂದೂಡಿಕೆ

ಭೀಕರ ರಸ್ತೆ ಅಪಘಾತ: ಆರು ಮಂದಿ ಸಾವು

ವೈದ್ಯಕೀಯ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ಧರಣಿ

ಬಿಎಸ್‌ಪಿ ಮಾತ್ರ ದೇಶಕ್ಕೆ ಅಚ್ಛೇದಿನ್ ತರಬಲ್ಲ ಪಕ್ಷ: ಮಾಯಾವತಿ

 

 

ಇತ್ತೀಚಿನ ಸುದ್ದಿ