ಈಶ್ವರಪ್ಪನವರಿಗೆ  ಸಂವಿಧಾನ ಓದಿಸಿ, ಅದರ ಅರ್ಥ ತಿಳಿಸಬೇಕು  | ಡಿ.ಕೆ.ಶಿವಕುಮಾರ್ - Mahanayaka
10:55 AM Saturday 23 - August 2025

ಈಶ್ವರಪ್ಪನವರಿಗೆ  ಸಂವಿಧಾನ ಓದಿಸಿ, ಅದರ ಅರ್ಥ ತಿಳಿಸಬೇಕು  | ಡಿ.ಕೆ.ಶಿವಕುಮಾರ್

30/11/2020


Provided by

ದೇವನಹಳ್ಳಿ: ಬೆಳಗಾವಿ ಲೋಕಸಭಾ ಉಪ ಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡುವುದಿಲ್ಲ ಎಂದು ಹೇಳಿಕೆ ನೀಡಿರುವ ಕೆ.ಎಸ್.ಈಶ್ವರಪ್ಪ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಈಶ್ವರಪ್ಪನವರಿಗೆ ಸಂವಿಧಾನ ಓದಿಸಬೇಕು. ಸಂವಿಧಾನದ ಆಶಯ ಏನು ಎನ್ನುವುದನ್ನು ಅವರು ತಿಳಿದುಕೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದು,  ಬಿಜೆಪಿಯವರಿಗೆ ಸಂವಿಧಾನ ಅಂದರೇನು ಎನ್ನುವುದು ಗೊತ್ತಿಲ್ಲ, ಹಾಗಾಗಿ ಅವರ ಪಕ್ಷದವರಿಗೆ ಸಂವಿಧಾನವನ್ನು ಓದಿಸಿ ಅದರ ಅರ್ಥಗಳನ್ನು ವಿವರಿಸಬೇಕು.  ಮುಸ್ಲಿಮರಿಗೆ ಟಿಕೆಟ್ ಕೊಡುವುದಿಲ್ಲ ಎಂದು ಈಶ್ವರಪ್ಪನವರು ಹೇಳುವುದಾದರೆ,  ಅವರು ಅಲ್ಪಸಂಖ್ಯಾತ ಘಟಕವನ್ನು ನಿಷೇಧಿಸಲಿ ಎಂದು ಅವರು ತಿರುಗೇಟು ನೀಡಿದರು.

‘ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಬೇಕು ಎಂದು ನಾವು ನ್ಯಾಯಾಲಯದ ಮೆಟ್ಟಿಲೇರಿದ್ದೆವು. ನಮ್ಮ ನಿರೀಕ್ಷೆಯಂತೆ ಈಗ ಚುನಾವಣೆ ಘೋಷಣೆಯಾಗಿದೆ. ಜನರಿಗೆ ಅಧಿಕಾರ ಸಿಗಬೇಕು ಎಂಬುದು ನಮ್ಮ ಉದ್ದೇಶ. ಇದು ಪಕ್ಷಾತೀತವಾಗಿ ನಡೆಯುವ ಚುನಾವಣೆ ಇದು. ಈ ಚುನಾವಣೆ ನಡೆಯಬೇಕು ಎಂಬುದು ನಮ್ಮ ಚಿಂತನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

 

ಇತ್ತೀಚಿನ ಸುದ್ದಿ