ಗರ್ಭಿಣಿಯನ್ನು ನೆಲಕ್ಕೆ ತಳ್ಳಿದ ಬಿಜೆಪಿ ಮುಖಂಡ ಸವದಿ | ಮಹಿಳೆಗೆ ಗರ್ಭಪಾತ! - Mahanayaka

ಗರ್ಭಿಣಿಯನ್ನು ನೆಲಕ್ಕೆ ತಳ್ಳಿದ ಬಿಜೆಪಿ ಮುಖಂಡ ಸವದಿ | ಮಹಿಳೆಗೆ ಗರ್ಭಪಾತ!

30/11/2020

ಮಹಾಲಿಂಗಪುರ: ಪುರಸಭೆ ಆವರಣದಲ್ಲಿ  ಬಿಜೆಪಿ ಮುಖಂಡ ಹಾಗೂ ಬೆಂಬಲಿಗರು ಗರ್ಭಿಣಿ ಪುರಸಭೆ ಸದಸ್ಯೆಯನ್ನು ಎಳೆದಾಡಿದ ಪರಿಣಾಮ ಮಹಿಳೆಗೆ ಇದೀಗ ಗರ್ಭಪಾತವಾಗಿದೆ.

ಮಹಾಲಿಂಗಪುರ ಪುರಸಭೆ ಚುನಾವಣೆ ವೇಳೆ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಬೆಂಬಲಿಗರು ಪುರಸಭೆ ಸದಸ್ಯೆ ಚಾಂದಿನಿ ನಾಯಕ್ ಅವರನ್ನು ಗರ್ಭಿಣಿ ಎಂದೂ ನೋಡದೇ ಎಳೆದಾಡಿ ನೆಲಕ್ಕೆ ತಳ್ಳಿ ಹಾಕಿದ್ದರು.


ನೆಲಕ್ಕೆ ಬಿದ್ದ ಚಾಂದಿನಿ ನಾಯಕ್ ಅವರಿಗೆ ತೀವ್ರವಾಗಿ ಗಾಯವಾಗಿತ್ತು. ಆ ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಇದರ ಬೆನ್ನಿಗೆ ಇದೀಗ ಚಾಂದಿನಿ ನಾಯಕ್ ಅವರಿಗೆ ಗರ್ಭಪಾತವಾಗಿದೆ.


Provided by

ಮೂರು ತಿಂಗಳ ಗರ್ಭಿಣಿ ಚಾಂದಿನಿ ನಾಯಕ್ ಅವರು ಇದೀಗ ಬಿಜೆಪಿ ನಾಯಕ ಸವದಿ ಹಾಗೂ  ಬಿಜೆಪಿ ಕಾರ್ಯಕರ್ತರ ಕುಕೃತ್ಯದಿಂದಾಗಿ ತಮ್ಮ ಮಗುವನ್ನು ಕಳೆದುಕೊಂಡಿದ್ದಾರೆ.  ಘಟನೆ ಹಿನ್ನೆಲೆ ಇದೀಗ ಬಿಜೆಪಿ ನಾಯಕರ ವಿರುದ್ಧ ಕೊಲೆ ಪ್ರಕರಣ ದಾಖಲಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ