ಮಹಾದಂಧೆ ಬಯಲು..? ಪರಿಷ್ಕೃತ ನೀಟ್ ರಿಸಲ್ಟ್ ನ ಟಾಪರ್ ಗಳ ಸಂಖ್ಯೆಯಲ್ಲಿ ಭಾರೀ ಇಳಿಮುಖ
ಸುಪ್ರೀಂಕೋರ್ಟ್ ನಿರ್ದೇಶನದ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪರಿಷ್ಕೃತ ನೀಟ್-ಯುಜಿ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಟಾಪರ್‌ಗಳ ಸಂಖ್ಯೆ 61ರಿಂದ 17ಕ್ಕೆ ಇಳಿಕೆಯಾಗಿದೆ. ಪ್ರತಿ ಪ್ರಶ್ನೆಗೆ ಒಂದೇ ಒಂದು ನಿಖರ ಉತ್ತರ ಸ್ವೀಕರಿಸುವಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದಾಗಿ ಪರಿಷ್ಕೃತ ಫಲಿತಾಂಶದಲ್ಲಿ ಬದಲಾವಣೆ ಕಂಡುಬಂದಿದೆ.
ಆರಂಭದಲ್ಲಿ ಟಾಪರ್‌ಗಳೆಂದು ಘೋಷಿಸಲ್ಪಟ್ಟಿದ್ದ 67 ಅಭ್ಯರ್ಥಿಗಳಲ್ಲಿ 44 ಮಂದಿ ಪೂರ್ಣ ಅಂಕ ಪಡೆದಿದ್ದರು. ಭೌತಶಾಸ್ತ್ರ ವಿಷಯಕ್ಕೆ ಗ್ರೇಸ್ ಅಂಕ ನೀಡಿದ್ದರಿಂದ ಪೂರ್ಣ ಅಂಕ ಅವರಿಗೆ ದೊರೆತಿತ್ತು.
ಬಳಿಕ ಕೆಲ ಕೇಂದ್ರಗಳಲ್ಲಿ ಸಮಯ ವ್ಯರ್ಥವಾಗಿದೆ ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಗ್ರೇಸ್ ಅಂಕಗಳನ್ನು ಹಿಂಪಡೆಯಲಾಗಿತ್ತು. ಇದರಿಂದ ಟಾಪರ್‌ಗಳ ಸಂಖ್ಯೆ 67ರಿಂದ 61ಕ್ಕೆ ಇಳಿಕೆಯಾಗಿತ್ತು. ಇದೀಗ ಪರಿಷ್ಕೃತ ನೀಟ್-ಯುಜಿ ಫಲಿತಾಂಶ ಪ್ರಕಟವಾದ ಬಳಿಕ ಟಾಪರ್‌ಗಳ ಸಂಖ್ಯೆ 61ರಿಂದ 17ಕ್ಕೆ ಇಳಿಕೆಯಾಗಿದೆ.
ಮೇ 5ರಂದು ನಡೆದ ನೀಟ್-ಯುಜಿ ಪರೀಕ್ಷೆಯ ವೇಳೆ ಸಮಯದ ಕೊರತೆ ಎದುರಿಸಿದ 1,563 ಅಭ್ಯರ್ಥಿಗಳಿಗೆ ನೀಡಲಾಗಿದ್ದ ಗ್ರೇಸ್ ಅಂಕಗಳನ್ನು ರದ್ದುಪಡಿಸಿ ಅವರಿಗೆ ಜೂನ್ 23ರಂದು ಮರು-ಪರೀಕ್ಷೆ ನಡೆಸಲಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth