ತಂದೆ ತಾಯಿಯನ್ನು ನಡು ರಸ್ತೆಯಲ್ಲಿ ಅಟ್ಟಾಡಿಸಿ ಕೊಂದ ಪಾಪಿ ಪುತ್ರ! - Mahanayaka

ತಂದೆ ತಾಯಿಯನ್ನು ನಡು ರಸ್ತೆಯಲ್ಲಿ ಅಟ್ಟಾಡಿಸಿ ಕೊಂದ ಪಾಪಿ ಪುತ್ರ!

senior citizen
10/04/2022


Provided by

ತ್ರಿಶೂರ್: ತಂದೆ-ತಾಯಿಯನ್ನು ಮಗ ನಡುರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ತ್ರಿಶೂರ್ ನಲ್ಲಿ ನಡೆದಿದೆ.   ತ್ರಿಶೂರಿನ ಇಂಚಕುಂಡುವಿನ ಕುಟ್ಟನ್ (60) ಮತ್ತು ಅವರ ಪತ್ನಿ ಚಂದ್ರಿಕಾ (55) ಮೃತಪಟ್ಟವರು.

ಕುಟ್ಟನ್ ಮತ್ತು  ಅವರ ಪತ್ನಿ ಚಂದ್ರಿಕಾ ಮನೆಯ ಹೊರಗಿನ ರಸ್ತೆಯಲ್ಲಿ ಹುಲ್ಲು ಕತ್ತರಿಸುತಿದ್ದ ಸಂದರ್ಭದಲ್ಲಿ ಮಚ್ಚಿನೊಂದಿಗೆ ಬಂದ ಮಗ ಅನೀಶ್ ಮೊದಲು ತಂದೆ ಕುಟ್ಟನ್ ಅವರ ಕುತ್ತಿಗೆ ಮತ್ತು ಎದೆಗೆ ಕತ್ತಿಯಿಂದ ಇರಿದಿದ್ದಾನೆ. ನಂತರ ತಾಯಿ ಚಂದ್ರಿಕಾ ಅವರನ್ನು ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹೋಗಿ ಕೊಚ್ಚಿ ಹಾಕಿದ್ದಾನೆ.

ಮಗ ಹಲ್ಲೆ ಮಾಡಲು ಮುಂದಾದಾಗ ಪಾಲಕರು  ಜೀವ ಭಯದಿಂದ ಓಡಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಗಂಬೀರ ಗಾಯಗೊಂಡ ದಂಪತಿಗಳು ಸ್ದಳದಲ್ಲೇ ಮೃತಪಟ್ಟಿದ್ದಾರೆ. ಇವರ ಮೃತದೇಹಗಳು ರಸ್ತೆಯಲ್ಲೇ ಬಿದ್ದಿದ್ದು, ಅನಿರೀಕ್ಷಿತ ದಾಳಿಯಿಂದ ಗ್ರಾಮಸ್ದರು ಬೆಚ್ಚಿಬಿದ್ದಿದ್ದಾರೆ.

ಹೆತ್ತವರನ್ನು ಕೊಲೆ ಮಾಡಿದ ನಂತರ ಆರೋಪಿ ಮಗ ಅನೀಶ್ ಪರಾರಿಯಾಗಿದ್ದಾನೆ. ಘಟನೆಗೆ ಕುಟುಂಬ ಕಲಹವೆ ಕಾರಣ ಎನ್ನಲಾಗಿದೆ. ಆರೋಪಿಗಾಗಿ ಪೋಲಿಸರು ಶೋಧ ಕಾರ್ಯ ಮುಂದುವರಿದಿದೆ.

ಕೃತ್ಯದ ಬಳಿಕ ಆರೋಪಿಯೇ ಪೊಲೀಸರಿಗೆ ಕರೆ ಮಾಡಿ ಹತ್ಯೆಯ ಬಗ್ಗೆ ಮಾಹಿತಿ ನೀಡಿದ್ದು ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಕೇರಳ ಮಾಧ್ಯಮಗಳು ವರದಿ ಮಾಡಿವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಶ್ರೀಲಂಕಾ ಆರ್ಥಿಕ ದುಸ್ಥಿತಿ: ಭಾರತಕ್ಕೆ ಮತ್ತೆ ವಲಸೆ ಬಂದ 19 ಜನರು

ಶ್ರೀರಾಮನವಮಿ: ಕಲ್ಲು ತೂರಾಟ ಹಿನ್ನೆಲೆಯಲ್ಲಿ ಶೋಭಾಯಾತ್ರೆ ರದ್ದು

ಚಂದ್ರು ಹತ್ಯೆ ಪ್ರಕರಣ ಸಿಐಡಿಗೆ ವಹಿಸಲು ತೀರ್ಮಾನ: ಸಿಎಂ ಬೊಮ್ಮಾಯಿ

ಮೋದಿಯನ್ನು ಬಲವಂತವಾಗಿ ತಬ್ಬಿಕೊಳ್ಳುವ ಪಕ್ಷ ನಮ್ಮದಲ್ಲ: ರಾಹುಲ್ ಗಾಂಧಿಗೆ ಮಾಯಾವತಿ ಖಾರ ಪ್ರತಿಕ್ರಿಯೆ

ಕಾರುಗಳ ನಡುವೆ ಭೀಕರ ಅಪಘಾತ: ಓರ್ವ ಸ್ಥಳದಲ್ಲೇ ಸಾವು

ಇತ್ತೀಚಿನ ಸುದ್ದಿ