ಇಂಧನ ಬೆಲೆ ಏರಿಕೆ: ವಿಮಾನದಲ್ಲಿ ಸ್ಮೃತಿ ಇರಾನಿ, ಕಾಂಗ್ರೆಸ್ ನಾಯಕ ನಡುವೆ ಜಟಾಪಟಿ - Mahanayaka

ಇಂಧನ ಬೆಲೆ ಏರಿಕೆ: ವಿಮಾನದಲ್ಲಿ ಸ್ಮೃತಿ ಇರಾನಿ, ಕಾಂಗ್ರೆಸ್ ನಾಯಕ ನಡುವೆ ಜಟಾಪಟಿ

smriti irani
10/04/2022


Provided by

ನವದೆಹಲಿ: ಇಂಧನ ಬೆಲೆ ಏರಿಕೆ ಕುರಿತಂತೆ ವಿಮಾನದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಮಹಿಳಾ ಕಾಂಗ್ರೆಸ್ ಅಖಿಲ ಭಾರತ ಅಧ್ಯಕ್ಷೆ ನೇತಾ ಡಿಸೋಜಾ ನಡುವೆ ವಾಗ್ವಾದ ನಡೆದಿದೆ.


Provided by

ಗುವಾಹಟಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.  ಎಲ್‌ ಪಿಜಿ ಸಿಲಿಂಡರ್ ಬೆಲೆ ಏರಿಕೆ ಕುರಿತು ಸಚಿವರಿಗೆ ಪ್ರಶ್ನೆಗಳನ್ನು ಕೇಳುತ್ತಿರುವ ದೃಶ್ಯವನ್ನು ನೇತಾ ಡಿಸೋಜಾ ತಮ್ಮ ಮೊಬೈಲ್‌ ನಲ್ಲಿ ಚಿತ್ರೀಕರಿಸಿದ್ದಾರೆ.

ಇಂಧನ ಬೆಲೆ ಏರಿಕೆ ಸಂಬಂಧ ಪ್ರಶ್ನೆ ಕೇಳಿದಾಗ ಸ್ಮೃತಿ ಇರಾನಿ  ಲಸಿಕೆಯ ವಿಚಾರ ಮಾತನಾಡಿದರು. ಇದಾದ ಬಳಿಕ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಈ ವಿಡಿಯೋವನ್ನು ಸ್ಮೃತಿ ಇರಾನಿ ಕೂಡ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಿಕೊಂಡಿದ್ದಾರೆ.


Provided by

”ಗೌಹಾಟಿಗೆ ತೆರಳುತ್ತಿದ್ದಾಗ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಭೇಟಿಯಾಗಿದ್ದೆ.  ಎಲ್‌ಪಿಜಿ ಬೆಲೆ ಏರಿಕೆಯ ಬಗ್ಗೆ ಕೇಳಿದಾಗ, ಅವರು ಲಸಿಕೆ ಬಗ್ಗೆ ಮಾತನಾಡಿದರು. ಹಾಗೆಯೇ ಬಡವರನ್ನು ದೂಷಿಸಿದ್ದಾರೆ. ನೋಡಿ ಇವರು ಜನ ಸಾಮಾನ್ಯರ ಪ್ರಶ್ನೆಗೆ ಹೇಗೆ ಉತ್ತರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ತಂದೆ ತಾಯಿಯನ್ನು ನಡು ರಸ್ತೆಯಲ್ಲಿ ಅಟ್ಟಾಡಿಸಿ ಕೊಂದ ಪಾಪಿ ಪುತ್ರ!

ಶ್ರೀಲಂಕಾ ಆರ್ಥಿಕ ದುಸ್ಥಿತಿ: ಭಾರತಕ್ಕೆ ಮತ್ತೆ ವಲಸೆ ಬಂದ 19 ಜನರು

ಶ್ರೀರಾಮನವಮಿ: ಕಲ್ಲು ತೂರಾಟ ಹಿನ್ನೆಲೆಯಲ್ಲಿ ಶೋಭಾಯಾತ್ರೆ ರದ್ದು

ಚಂದ್ರು ಹತ್ಯೆ ಪ್ರಕರಣ ಸಿಐಡಿಗೆ ವಹಿಸಲು ತೀರ್ಮಾನ: ಸಿಎಂ ಬೊಮ್ಮಾಯಿ

ಮೋದಿಯನ್ನು ಬಲವಂತವಾಗಿ ತಬ್ಬಿಕೊಳ್ಳುವ ಪಕ್ಷ ನಮ್ಮದಲ್ಲ: ರಾಹುಲ್ ಗಾಂಧಿಗೆ ಮಾಯಾವತಿ ಖಾರ ಪ್ರತಿಕ್ರಿಯೆ

ಇತ್ತೀಚಿನ ಸುದ್ದಿ