ಪರೋಟ ಸೇವಿಸಿದ ಬಾಲಕನ ದಾರುಣ ಸಾವು: ಪೋಷಕರಿಗೆ ಕಾದಿತ್ತು ಶಾಕಿಂಗ್ ನ್ಯೂಸ್! - Mahanayaka

ಪರೋಟ ಸೇವಿಸಿದ ಬಾಲಕನ ದಾರುಣ ಸಾವು: ಪೋಷಕರಿಗೆ ಕಾದಿತ್ತು ಶಾಕಿಂಗ್ ನ್ಯೂಸ್!

edukki
30/04/2022

ಇಡುಕ್ಕಿ:  ಪರೋಟ ತಿಂದು ತೀವ್ರ ಅಸ್ವಸ್ಥಗೊಂಡ  9 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿದ ಘಟನೆ ಕೇರಳದ ಇಡುಕ್ಕಿಯ ನೆಡುಂಕಂಡಂನಲ್ಲಿ ನಡೆದಿದೆ.


Provided by

ಇಲ್ಲಿನ ಪರಮತೋಡು ಕಾಲೊನಿಯ ಸಂತೋಷ್ ಮೃತ ಬಾಲಕ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಪರೋಟ ತಿಂದ ನಂತರದಲ್ಲಿ ಬಾಲಕ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣವೇ ಆತನನ್ನು  ನೆಡುಂಕಂಡಂನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ  ಇಂದು ಬೆಳಗ್ಗೆ ದುರಾದೃಷ್ಟವಶಾತ್ ಬಾಲಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ

ಬಾಲಕನಿಗೆ ಏನಾಯ್ತು ಅನ್ನೋದು ತಿಳಿಯುವಷ್ಟರಲ್ಲಿ ಬಾಲಕ ಸಾವಿಗೀಡಾಗಿದ್ದಾನೆ. ಆಸ್ಪತ್ರೆ ಅಧಿಕಾರಿಗಳು ನೀಡಿರುವ ಮಾಹಿತಿಗಳಂತೆ ಪರೋಟ ಶ್ವಾಸಕೋಶದಲ್ಲಿ ಸಿಲುಕಿದ್ದರಿಂದಾಗಿ ಬಾಲಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಯಾವುದೇ ಆಹಾರ ಸೇವನೆಯ ವೇಳೆ ಅತ್ಯಂತ ಜಾಗೃತರಾಗಿರಬೇಕು. ಆಹಾರ ಸೇವನೆಯ ವೇಳೆ ಮಾತುಕತೆ ನಡೆಸುವುದು. ಯಾವುದಾದರೂ ವಿಚಾರಗಳನ್ನು ಆಲೋಚನೆ ಮಾಡುವುದು ಬಿಟ್ಟು ಊಟದ ಕಡೆಗೆ ಸಂಪೂರ್ಣ ಗಮನವನ್ನು ನೀಡಬೇಕು. ಆಹಾರ ಶ್ವಾಸಕೋಶಕ್ಕೆ ಪ್ರವೇಶಿಸಿದರೆ ಪ್ರಾಣ ಹಾನಿ ಖಚಿತ ಎಂಬಂತಹ ಸ್ಥಿತಿ ಇದೆ. ಹಾಗಾಗಿ ಊಟದ ವೇಳೆಯಲ್ಲಿ ನಿರಾಳರಾಗಿ ಊಟ ಮಾಡುವುದು ಉತ್ತಮ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೇಸಿಗೆ ಕಾಲದಲ್ಲಿ ಹೆಚ್ಚು ಬೆಳ್ಳುಳ್ಳಿ  ಸೇವಿಸಿದರೆ ಏನಾಗುತ್ತದೆ?

ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ವಿರೋಧಿಸಿದ್ದಕ್ಕೆ ರೈಲಿನಿಂದ ಕೆಳಗೆ  ಎಸೆದ ಪಾಪಿ!

ಕೋಟ್ಯಂತರ ರೂಪಾಯಿಯ ಪಾನ್ ಮಸಾಲ ಜಾಹೀರಾತಿನ ಆಫರ್ ನಿರಾಕರಿಸಿದ ಯಶ್!

ಪಿಎಸ್ ಐ ಮರು ಪರೀಕ್ಷೆ ನಿರ್ಧಾರದ ಬೆನ್ನಲ್ಲೇ ಸರ್ಕಾರಕ್ಕೆ ಮತ್ತೊಂದು ತಲೆನೋವು!

ದೂರು ನೀಡಲು ಬಂದಿದ್ದ ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡ ಪೊಲೀಸ್  ಅಧಿಕಾರಿ!

ಇತ್ತೀಚಿನ ಸುದ್ದಿ