ಕೋಟ್ಯಂತರ ರೂಪಾಯಿಯ ಪಾನ್ ಮಸಾಲ ಜಾಹೀರಾತಿನ ಆಫರ್ ನಿರಾಕರಿಸಿದ ಯಶ್! - Mahanayaka
12:40 AM Wednesday 12 - February 2025

ಕೋಟ್ಯಂತರ ರೂಪಾಯಿಯ ಪಾನ್ ಮಸಾಲ ಜಾಹೀರಾತಿನ ಆಫರ್ ನಿರಾಕರಿಸಿದ ಯಶ್!

yash
30/04/2022

ರಾಕಿಂಗ್ ಸ್ಟಾರ್ ಯಶ್ ಅವರು ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸಲು ನಿರಾಕರಿಸಿದ್ದು, ಈ ಮೂಲಕ ಸಮಾಜಕ್ಕೆ ಕೆಟ್ಟ ಸಂದೇಶ ನೀಡುವ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎನ್ನುವ ಸಂದೇಶ ನೀಡಿದ್ದಾರೆ.

ವರದಿಗಳ ಪ್ರಕಾರ, ದೇಶದ ಪ್ರತಿಷ್ಠಿಯ ಸಂಸ್ಥೆಯೊಂದು ರಾಕಿಂಗ್ ಸ್ಟಾರ್ ಯಶ್ ಅವರನ್ನು ಪಾನ್ ಮಸಾಲ ಮತ್ತು ಎಲೈಚಿ ಬ್ರ್ಯಾಂಡ್ ನ ರಾಯಭಾರಿಯಾಗಿ  ಪ್ರಚಾರ ಮಾಡಲು ಸಂಪರ್ಕಿಸಿದ್ದು, ಕೋಟ್ಯಾಂತರ ರೂಪಾಯಿ ಮೌಲ್ಯದ ಆಫರ್ ನೀಡಿದೆ.

ಆದರೆ, ಈ ಆಫರ್ ತಿರಸ್ಕರಿಸಿದ ರಾಕಿ,  ಆರೋಗ್ಯದ ಹಿತದೃಷ್ಟಿ ಮತ್ತು ಸಮಾಜಕ್ಕೆ ಮಾರಕವಾಗುವಂತಹ ವಸ್ತುಗಳನ್ನು ಪ್ರಮೋಟ್ ಮಾಡಬಾರದು ಎಂದು ನಿರ್ಧರಿಸಿ ಜಾಹೀರಾತಿನಿಂದ ಜಾಹೀರಾತಿನಲ್ಲಿ ನಟಿಸುವ ಅವಕಾಶವನ್ನು ಕೈಬಿಟ್ಟಿದ್ದಾರೆ.

ಅಂದ ಹಾಗೆ, ಉತ್ತರ ಭಾರತದ(ಹಿಂದಿ) ನಟರು ಪಾನ್ ಮಸಾಲು ಜಾಹೀರಾತುಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್, ಅಜಯ್ ದೇವಗನ್, ಶಾರೂಖ್ ಖಾನ್ ಮೊದಲಾದವರು ಪಾನ್ ಮಸಾಲ ಜಾಹೀರಾತಿನಿಂದ ಕೋಟ್ಯಂತರ ರೂಪಾಯಿಗಳಿಸಿದ್ದಾರೆ.

ದಕ್ಷಿಣ ಭಾರತದ ನಟರು ಪಾನ್ ಮಸಾಲ ಜಾಹೀರಾತಿನಿಂದ ಹಿಂದಕ್ಕೆ ಸರಿಯುತ್ತಿದ್ದು, ಇದರಿಂದಾಗಿ ಪಾನ್ ಮಸಾಲ ಬ್ರಾಂಡ್ ನವರಿಗೆ ತಲೆನೋವು ಕಾಡುತ್ತಿದೆ. ಇತ್ತೀಚೆಗಷ್ಟೆ ತೆಲುಗು ನಟ ಅಲ್ಲು ಅರ್ಜುನ್ ಗೆ ಪಾನ್ ಮಸಾಲ ಕಂಪೆನಿಗಳು ಆಫರ್ ನೀಡಿತ್ತು. ಅವರು ಕೂಡ ಪಾನ್ ಮಸಾಲ ಜಾಹೀರಾತು ನೀಡಲು ನಿರಾಕರಿಸಿದ್ದರು. ಇದೀಗ ಯಶ್ ಗೆ ಆಫರ್ ನೀಡಿ ಮತ್ತೆ ವಿಫಲರಾಗಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಹಿಳೆಯರು ನಮಾಝ್ ಮಾಡುವ ಕೊಠಡಿಗೆ ನುಗ್ಗಿ ಅಸಭ್ಯ ವರ್ತನೆ: ಯುವಕ ಅರೆಸ್ಟ್

ಪಿಎಸ್ ಐ ಮರು ಪರೀಕ್ಷೆ ನಿರ್ಧಾರದ ಬೆನ್ನಲ್ಲೇ ಸರ್ಕಾರಕ್ಕೆ ಮತ್ತೊಂದು ತಲೆನೋವು!

ಭಾರತ ಹಿಂದಿ ಭಾಷಿಗರದ್ದು, ಹಿಂದಿಯನ್ನು ಪ್ರೀತಿಸದವರು ಭಾರತ ಬಿಟ್ಟು ಹೋಗಿ:  ಉತ್ತರ ಪ್ರದೇಶ ಸಚಿವ

“ನೀನು ನೋಡಲು ಚೆನ್ನಾಗಿಲ್ಲ” ಎಂದು ನಿಂದಿಸಿ, ಟಾಯ್ಲೆಟ್ ಕ್ಲೀನರ್ ಕುಡಿಸಿ ಗರ್ಭಿಣಿ ಪತ್ನಿಯ ಹತ್ಯೆ

ಇತ್ತೀಚಿನ ಸುದ್ದಿ