ಅತಿಯಾಗಿ  ಟೀ ಕುಡಿಯುತ್ತೀರಾ? ಹಾಗಿದ್ದರೆ, ಕಾದಿದೆ ಅಪಾಯ! - Mahanayaka

ಅತಿಯಾಗಿ  ಟೀ ಕುಡಿಯುತ್ತೀರಾ? ಹಾಗಿದ್ದರೆ, ಕಾದಿದೆ ಅಪಾಯ!

tea
31/05/2022


Provided by

ಸಾಕಷ್ಟು ಜನರು ಬೆಳಗೆ ಎದ್ದ ತಕ್ಷಣವೇ ಚಹಾದ ಮೊರೆ ಹೋಗುತ್ತಾರೆ. ಚಹಾ ಕುಡಿಯಲಿಲ್ಲವಾದರೆ, ಕೆಲವರಿಗಂತೂ ಇಡೀ ದಿನ ಕಿರಿಕಿರಿ ಅನ್ನಿಸುವುದು ಕೂಡ ಇದೆ. ಕೆಲವೊಬ್ಬರು ಚಹಾವನ್ನು ವ್ಯಸನವಾಗಿಸಿಕೊಳ್ಳುವುದು ಕೂಡ ಇದೆ. ಆದರೆ, ಅತಿಯಾದರೆ ಅಮೃತವೂ ವಿಷ ಅನ್ನೋ ಹಾಗೆ, ಚಹಾ ಕೂಡ ಅತಿಯಾಗಿ ಸೇವನೆ ಮಾಡುವುದು ಉತ್ತಮವಲ್ಲ.

ದಿನವೊಂದಕ್ಕೆ 4 ಕಪ್ ಗಿಂತ ಹೆಚ್ಚು ಚಹಾ ಕುಡಿಯುವವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಮುಖ್ಯವಾಗಿ ಇದರಲ್ಲಿ ಉದರ(ಹೊಟ್ಟೆ) ಬಾಧೆ, ಹಸಿವಿಲ್ಲದಿರುವುದು, ಕರುಳಿನ ಮೇಲೆ ಕೆಟ್ಟ ಪರಿಣಾಮದಂತಹ  ಸಮಸ್ಯೆಗಳು ಕಂಡು ಬರುತ್ತವೆ.

ಹೆಚ್ಚು ಟೀ ಸೇವನೆ ನಮ್ಮ ಮನಸ್ಸಿನ ಆತಂಕ ಹಾಗೂ ಉದ್ವೇಗವನ್ನು ಕೂಡ ಹೆಚ್ಚಿಸುತ್ತದೆ. ಚಹಾದಲ್ಲಿರುವ ಕೆಫೀನ್ ಅಂಶ ನಿಮ್ಮ ದೇಹವನ್ನು ಪ್ರವೇಶಿಸಿದಾಗ ಆರೋಗ್ಯಕ್ಕೆ ಅನೇಕ ರೀತಿಯ ಹಾನಿ ಉಂಟಾಗುತ್ತದೆ. ಅತಿಯಾಗಿ ಟೀ ಕುಡಿಯುವುದು ಕರುಳಿಗೆ ಹಾನಿಕಾರಕ. ಚಹಾ, ಆಹಾರವನ್ನು ಜೀರ್ಣಿಸಿಕೊಳ್ಳುವಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.

ಎದೆ ಉರಿ, ಆಸಿಡಿಟಿಯಂತಹ ಸಮಸ್ಯೆಗಳು ಕೂಡ ಶುರುವಾಗುವ ಸಾಧ್ಯತೆ ಇರುತ್ತದೆ. ಅತಿಯಾಗಿ ಟೀ ಕುಡಿಯುವುದರಿಂದ ನಿದ್ರಾಹೀನತೆ ಉಂಟಾಗುತ್ತದೆ. ಸಾಕಷ್ಟು ನಿದ್ರೆ ಮಾಡದಿದ್ದರೆ ಬೇರೆ ಬೇರೆ ತೆರನಾದ ಆರೋಗ್ಯ ಸಮಸ್ಯೆಗಳಿಗೆ ನೀವು ತುತ್ತಾಗುತ್ತೀರಿ. ದಿನಕ್ಕೆ 2 ಕಪ್ ಚಹಾ ಸಾಕು.

ಯಾವುದೇ ಪದಾರ್ಥಗಳ ಸೇವನೆ ಒಂದು ಮಿತಿಯಲ್ಲಿರಬೇಕು. ಆಹಾರ ಸೇವನೆಯನ್ನು ಆರೋಗ್ಯಕರವಾಗಿ ಮಾಡೋಣ, ಅಲ್ಲದೇ ಅದನ್ನೊಂದು ವ್ಯಸನವಾಗಿಸಿಕೊಳ್ಳುವುದು ಬೇಡ. ಸದಾ ಆರೋಗ್ಯವಂತರಾಗಿರೋಣ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮುಸ್ಲಿಮ್ ಮಹಿಳೆಯರ ಧಾರ್ಮಿಕ ವಸ್ತ್ರ ಬುರ್ಖಾ ಧರಿಸಿ ಅಸಭ್ಯ ನೃತ್ಯ!

ಲೈಂಗಿಕ ಕ್ರಿಯೆಯ ಬಳಿಕ ನೆನಪಿನ ಶಕ್ತಿ ಕಳೆದುಕೊಂಡ ವೃದ್ಧ!

ಬೊಮ್ಮಾಯಿಯವರೇ ನೆನಪಿರಲಿ,  ಮಸಿ ಬಳಿದದ್ದು ರಾಜ್ಯ ಸರ್ಕಾರದ ಮುಖಕ್ಕೆ: ಸಿದ್ದರಾಮಯ್ಯ ಕಿಡಿ

ನೆಟ್‌ಫ್ಲಿಕ್ಸ್ ರಷ್ಯಾದಲ್ಲಿ ಪ್ರಸಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ

ಇತ್ತೀಚಿನ ಸುದ್ದಿ