ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರನ ಹತ್ಯೆಗೆ ಸಂಚು?: ದೂರು ದಾಖಲು - Mahanayaka
11:53 AM Tuesday 21 - October 2025

ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರನ ಹತ್ಯೆಗೆ ಸಂಚು?: ದೂರು ದಾಖಲು

araga
13/06/2022

ಬೆಂಗಳೂರು: ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ಎಂದು ಆರೋಪಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಜಯಕರ್ನಾಟಕ ಸಂಘಟನೆ ಸದಸ್ಯರು ಬೆಂಗಳೂರಿನ ಗೃಹ ಸಚಿವರ ನಿವಾಸಕ್ಕೆ ಭೇಟಿ ನೀಡಿ ದೂರು ನೀಡಿದ್ದಾರೆ.

ದೂರಿನಲ್ಲಿ ಮುತ್ತಪ್ಪ ರೈ ಸಂಬಂಧಿ ಮನ್ಮಿತ್ ರೈನಿಂದ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆ ಹತ್ಯೆಗೆ ಸ್ಕೆಚ್​ ಹಾಕಿರುವ ಆರೋಪವನ್ನು ತಳ್ಳಿ ಹಾಕಿರುವ ಮನ್ಮಿತ್​ ರೈ,  ತಾನು ಬ್ಯುಸಿನೆಸ್ ವಿಚಾರವಾಗಿ ವಿದೇಶದಲ್ಲಿದ್ದೇನೆ  ಈ ಆರೋಪ ಎಷ್ಟು ಸತ್ಯ ಎಂಬುವುದನ್ನು ಪೊಲೀಸರು ತನಿಖೆ ಮಾಡುತ್ತಾರೆ. ನನ್ನ ಮೇಲೆ ಇದುವೆರಗೂ ಯಾವುದೇ ಕ್ರಿಮಿನಲ್ ಪ್ರಕರಣಗಳು ಇಲ್ಲ. ಯಾವ ಸ್ಟೇಷನ್​ ನಲ್ಲೂ ಎಫ್‌ ಐಆರ್ ದಾಖಲಾಗಿಲ್ಲ. ಆದರೆ ಈ ವಿಚಾರದಲ್ಲಿ ನನ್ನ ಹೆಸರು ಏಕೆ ಬರುತ್ತಿದೆಯೋ ಗೊತ್ತಿಲ್ಲ ಎಂದಿದ್ದಾರೆ.

ಗುಣರಂಜನ್ ಶೆಟ್ಟಿ ಮತ್ತು ಮನ್ಮಿತ್ ಇಬ್ಬರೂ ಮುತ್ತಪ್ಪ ರೈ ಜೊತೆ ಇದ್ದವರು. ನಂತರ ಮುತ್ತಪ್ಪ ರೈ ಜೊತೆಯಿಂದ ಮನ್ಮಿತ್ ಹೊರಬಂದಿದ್ದ ಎಂದು ಹೇಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

ಮುಂದುವರಿದ ತಿಥಿ ಕಾರ್ಡ್ ಫೈಟ್: ಕುಮಾರಸ್ವಾಮಿ ಹೆಸರಿನ ಕೈಲಾಸ ಸಮಾರಾಧನೆ ಚಿತ್ರ ವೈರಲ್!

ಅಡ್ಡಮತದಾನ ಮಾಡಿದವರ ಹೆಸರಲ್ಲಿ ಕೈಲಾಸ ಸಮಾರಾಧನೆ ಪತ್ರ!

ಮದುವೆ ಸಂಭ್ರಮದಲ್ಲಿದ್ದ ಜೋಡಿಯ ನೆಮ್ಮದಿ ಕೆಡಿಸಿದ ಸಂಪ್ರದಾಯವಾದಿಗಳು!

ಇತ್ತೀಚಿನ ಸುದ್ದಿ