ಫ್ಯಾಶನ್ ಬ್ಲಾಗರ್ ಳನ್ನು ಕೈಕಾಲು ಕಟ್ಟಿ ಕಟ್ಟಡದಿಂದ ಕೆಳಗೆಸೆದ ಪತಿ! - Mahanayaka

ಫ್ಯಾಶನ್ ಬ್ಲಾಗರ್ ಳನ್ನು ಕೈಕಾಲು ಕಟ್ಟಿ ಕಟ್ಟಡದಿಂದ ಕೆಳಗೆಸೆದ ಪತಿ!

fashion blogger
27/06/2022


Provided by

ಗಾಜಿಯಾಬಾದ್‌: ಫ್ಯಾಶನ್ ಬ್ಲಾಗರ್ ಒಬ್ಬರನ್ನು ಕಟ್ಟಡದ ಮೇಲಿನಿಂದ ಎಸೆದು ಕೊಂದ ಘಟನೆ ಗಾಜಿಯಾಬಾದ್‌ ನಲ್ಲಿ ನಡೆದಿದ್ದು,  ಕೈ ಮತ್ತು ಕಾಲುಗಳನ್ನು ಕಟ್ಟಿದ ನಂತರ ಫ್ಯಾಶನ್ ಬ್ಲಾಗರ್ ರಿತಿಕಾ ಸಿಂಗ್ ನನ್ನು ಕಟ್ಟಡದ ಮೇಲಿನಿಂದ ಈಕೆಯ ಪತಿ ಆಕಾಶ್ ಗೌತಮ್ ಕೆಳಗಡೆ ದೂಡಿಹಾಕಿದ್ದಾನೆ.

30ರ ಹರೆಯದ ರಿತಿಕಾ ಸಿಂಗ್ ಆಗ್ರಾದಲ್ಲಿ ಸ್ನೇಹಿತನ ಜತೆ ಫ್ಲಾಟ್‌ನಲ್ಲಿ ವಾಸವಾಗಿದ್ದರು.  ಪತಿ ಆಕಾಶ್ ಫ್ಲಾಟ್ ಗೆ ಆಗಾಗ ಬರುತ್ತಿದ್ದ. ಸ್ನೇಹಿತನ ಜೊತೆ ಪತ್ನಿ ಇರುವ ರೀತಿಯ ವಿಚಾರದಲ್ಲಿ ಆಗಾಗ ಇವರ ನಡುವೆ  ಮಾತಿನ ಚಕಮಕಿ ನಡೆಯುತ್ತಿತ್ತೆನ್ನಲಾಗಿದೆ. ನಿನ್ನೆ ಮಾತಿಗೆ ಮಾತು ಬೆಳೆದು ಕೊನೆಗೆ ಪತಿ ಈಕೆಯನ್ನು ಪ್ಲಾಟ್ ನಿಂದ ಕೆಳಗಡೆ ತಳ್ಳಿದ್ದಾನೆ.

ಫ್ಯಾಶನ್ ಮತ್ತು ಲೈಫ್ ಸ್ಟೈಲ್ ಬ್ಲಾಗರ್ ಆಗಿರುವ ರಿತಿಕಾ ಸಿಂಗ್ ಗೆ Instagram ನಲ್ಲಿ 44,000 ಅನುಯಾಯಿಗಳನ್ನು ಹೊಂದಿದ್ದಾರೆ.  ರಿತಿಕಾ ಸಿಂಗ್ ಮತ್ತು ಆಕಾಶ್ 2014 ರಲ್ಲಿ ಭೇಟಿಯಾಗುತ್ತಾರೆ. ನಂತರ ಇಬ್ಬರೂ ಪ್ರೀತಿಸಿ ಮದುವೆಯಾಗುತ್ತಾರೆ.

ಆಕಾಶ್ ಗೆ ಸ್ವಂತ ಉದ್ಯೋಗ ಅಥವಾ ಆದಾಯ ಇಲ್ಲದ ಕಾರಣ ಆಕೆಯ ಸಂಬಳವನ್ನು ತೆಗೆದುಕೊಳ್ಳುತ್ತಿದ್ದರು ಎಂದು ಹೃತಿಕಾ ಕುಟುಂಬ ಆರೋಪಿಸಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಡು ರಸ್ತೆಯಲ್ಲಿ ವಿದ್ಯಾರ್ಥಿನಿಯ ಶಿರಚ್ಛೇದಿಸಿದ ಪಾಗಲ್ ಪ್ರೇಮಿ: ಮದುವೆಗೆ ಒಪ್ಪದಿದ್ದರೆ ಕೊಲ್ಲುವುದೇ?

ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಡಿಕ್ಕಿ ಹೊಡೆದ ಹಕ್ಕಿ!

ಪತ್ನಿಗೆ ಕಚ್ಚಿದ ಹಾವನ್ನು ಹಿಡಿದುಕೊಂಡು ಆಸ್ಪತ್ರೆಗೆ ಓಡಿ ಬಂದ ಪತಿ: ಬೆಚ್ಚಿಬಿದ್ದ ವೈದ್ಯರು!

ಇಂಗ್ಲಿಷ್ ಮಾತನಾಡದಿದ್ದಕ್ಕೆ 4 ವರ್ಷದ ಬಾಲಕನಿಗೆ ಥಳಿತ: ಶಿಕ್ಷಕ ಅರೆಸ್ಟ್

ಇತ್ತೀಚಿನ ಸುದ್ದಿ