ಇಂಗ್ಲಿಷ್ ಮಾತನಾಡದಿದ್ದಕ್ಕೆ 4 ವರ್ಷದ ಬಾಲಕನಿಗೆ ಥಳಿತ: ಶಿಕ್ಷಕ ಅರೆಸ್ಟ್ - Mahanayaka

ಇಂಗ್ಲಿಷ್ ಮಾತನಾಡದಿದ್ದಕ್ಕೆ 4 ವರ್ಷದ ಬಾಲಕನಿಗೆ ಥಳಿತ: ಶಿಕ್ಷಕ ಅರೆಸ್ಟ್

ernakulam
24/06/2022

ಎರ್ನಾಕುಲಂ: ಇಂಗ್ಲಿಷ್ ಮಾತನಾಡಲಿಲ್ಲ ಎಂಬ ಕಾರಣಕ್ಕೆ ನಾಲ್ಕು ವರ್ಷದ ಬಾಲಕನ ಮೇಲೆ  ಟ್ಯೂಷನ್ ಸೆಂಟರ್ ಶಿಕ್ಷಕ ಥಳಿಸಿದ ಎನ್ನುವ ಆರೋಪದಲ್ಲಿ ಟ್ಯೂಷನ್ ಸೆಂಟರ್  ಶಿಕ್ಷಕನನ್ನುಬಂಧಿಸಲಾಗಿದೆ.

ಬಾಲಕನ  ಕೈಕಾಲಲ್ಲಿ ಗಾಯಗಳಾದ್ದು, ಮಗುವಿನ ದೇಹದ ಮೇಲೂ  ಗಾಯಗಳು ಕಂಡುಬಂದಿವೆ.  ದೌರ್ಜನ್ಯ ಎಸಗಿರುವುದಾಗಿ ಶಿಕ್ಷಕ ಪೋಲಿಸರ ಮುಂದೆ  ತಪ್ಪೊಪ್ಪಿಕೊಂಡಿದ್ದಾನೆ.

ಎರ್ನಾಕುಲಂನ ಪಲ್ಲುರುತಿಯಲ್ಲಿ ಈ ಘಟನೆ ನಡೆದಿದ್ದು,  ಮಂಗಳವಾರ ಟ್ಯೂಷನ್ ಗೆ ಬಂದಿದ್ದ ನಾಲ್ಕು ವರ್ಷದ ಬಾಲಕನಿಗೆ ಆಂಗ್ಲ ಭಾಷೆ ಬಾರದ ಕಾರಣಕ್ಕೆ ಶಿಕ್ಷಕರು ಥಳಿಸಿದ್ದಾರೆ.  ಮಗುವನ್ನು ವಾಪಸ್ ಮನೆಗೆ ಕರೆದುಕೊಂಡು ಹೋಗಲು ಬಂದಾಗ ಪೋಷಕರಿಗೆ ಮಾಹಿತಿ ತಿಳಿದಿದೆ.  ನಂತರ ಮನೆಯವರು ಚೈಲ್ಡ್ ಲೈನ್ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ.

ಮನೆಗೆ ಬಂದ ಮಗುವಿನ ದೇಹದ ಗಾಯಗಳು  ಕಂಡ ಪೋಷಕರು ವಿಚಾರ ಕೇಳಿದಾಗ, ಮಗುವಿನ ತಾಯಿ ಶಿಕ್ಷಕನ ದೌರ್ಜನ್ಯದ ಬಗ್ಗೆ ಹೇಳುತ್ತಾನೆ.

ತಕ್ಷಶಿಲಾ ಟ್ಯೂಷನ್ ಸೆಂಟರ್ ಮಾಲೀಕ ನಿಖಿಲ್ ನನ್ನು ಪಳ್ಳುರುತಿ ಪೊಲೀಸರು ಬಂಧಿಸಿ 14 ದಿನಗಳ ಕಾಲ ರಿಮಾಂಡ್ ಗೆ ಮಾಡಿದ್ದಾರೆ. ಮಗುವಿನ ಕೈ ಮತ್ತು ಕಾಲುಗಳಲ್ಲಿ ಗಾಯಗಳಾಗಿದ್ದು ಬಾಲಕನು ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಬಾಲಕನ ಆರೋಗ್ಯ ಸುಧಾರಿಸಿದ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಫ್ಘಾನಿಸ್ತಾನದ ಜನರಿಗೆ ಸಹಾಯ ಹಸ್ತ ನೀಡಿದ್ದ ಭಾರತ

ಒಕ್ಕಲಿಗ ಸಮುದಾಯವನ್ನು ನಿರ್ಲಕ್ಷಿಸಿ ಕೆಂಪೇಗೌಡ ಜಯಂತಿ ಆಚರಣೆ ಅರ್ಥಹೀನ: ಸಚಿನ್ ಸರಗೂರು

ಗೃಹಪ್ರವೇಶದ ಮನೆಗೆ ನುಗ್ಗಿ 25 ಸಾವಿರ ಹಣಕ್ಕೆ ಬೇಡಿಕೆಯಿಟ್ಟು ಮಂಗಳಾಮುಖಿಯರಿಂದ ದಾಂಧಲೆ

ಸ್ಕೂಟರ್ ಶೋ ರೂಮ್‌ ನಲ್ಲಿ ಅಗ್ನಿ ಅವಘಡ: ಲಕ್ಷಾಂತರ ರೂ. ಮೌಲ್ಯದ ಬೈಕ್ ಬೆಂಕಿಗಾಹುತಿ

ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಭ್ರಷ್ಟಾಚಾರದ ದುಡ್ಡಿನಿಂದ ಆಪರೇಷನ್ ಕಮಲ: ಸಿದ್ದರಾಮಯ್ಯ ಆರೋಪ

ಬಾಳು ಕೊಡುತ್ತೇನೆಂದು ಮಹಿಳೆಯನ್ನು ಕರೆದೊಯ್ದ ಅರ್ಚಕ, ಕಾಡಿನಲ್ಲಿ ಬಿಟ್ಟು ಹೋದ!

ಇತ್ತೀಚಿನ ಸುದ್ದಿ