ಕಾರ್ಕಳದಲ್ಲಿ ಕಾರು ಬಿಟ್ಟು ಪರಾರಿಯಾದ್ರಾ ಫಾಝಿಲ್ ಹಂತಕರು?: ಪತ್ತೆಯಾದ ಕಾರು ಯಾರದ್ದು? - Mahanayaka

ಕಾರ್ಕಳದಲ್ಲಿ ಕಾರು ಬಿಟ್ಟು ಪರಾರಿಯಾದ್ರಾ ಫಾಝಿಲ್ ಹಂತಕರು?: ಪತ್ತೆಯಾದ ಕಾರು ಯಾರದ್ದು?

car
31/07/2022

ಮಂಗಳೂರು: ಸುರತ್ಕಲ್ ನಲ್ಲಿ ಫಾಝಿಲ್ ಹತ್ಯೆಗೆ ಬಳಸಿದ್ದ ಕಾರು ಎನ್ನಲಾಗಿರುವ ಕಾರೊಂದು ಪಡುಬಿದ್ರಿ ಸಮೀಪದ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಬಳಿಯ ನಿರ್ಜನ ಪ್ರದೇಶದಲ್ಲಿ  ಪತ್ತೆಯಾಗಿದೆ.

ಸುರತ್ಕಲ್ ನಲ್ಲಿ ಫಾಝಿಲ್ ನಲ್ಲಿ ಹತ್ಯೆ ಮಾಡಿದ ಬಳಿಕ  ಕಾರ್ಕಳದಲ್ಲಿ ಕಾರನ್ನು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.  ಇಯಾನ್ ಕಾರೊಂದು ನಿರ್ಜನ ಪ್ರದೇಶದಲ್ಲಿ ಎರಡು ದಿನಗಳಿಂದ ನಿಂತಲ್ಲೇ ಇರುವುದನ್ನು ಕಂಡು ಸಾರ್ವಜನಿಕರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಸದ್ಯ ಕಾರಿನ ಮೇಲೆ ಪೊಲೀಸರು ಟರ್ಪಾಲ್ ಮುಚ್ಚಿದ್ದಾರೆ. ಈ ಸ್ಥಳದ ಬಗ್ಗೆ ಗೊತ್ತಿರುವವರೇ ಈ ಕಾರನ್ನು ಇಲ್ಲಿ ತಂದು ನಿಲ್ಲಿಸಲು ಸಾಧ್ಯ ಎಂಬ ಚರ್ಚೆಗಳು ಕೂಡ ಕೇಳಿ ಬಂದಿವೆ.

ಹತ್ಯೆಗೆ ಬಳಸಿದ್ದ ಕಾರು ಮಾಲೀಕ ಅಜಿತ್ ​ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಡುಪಿಯ ಪ್ರೇಮ್ ​ನಗರದಲ್ಲಿರುವ ಕಾರಿನ ಮಾಲೀಕ ಅಜಿತ್​ ಬಾಡಿಗೆ ಮನೆ ಸುತ್ತಮುತ್ತ ಪೊಲೀಸ್​ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಅಜಿತ್​ ಮಾಹಿತಿ ಮೇರೆಗೆ ಶಂಕಿತರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಕೋಡಿಕೆರೆ ಪರಿಸರದಲ್ಲಿ ಸುರತ್ಕಲ್ ಠಾಣೆ ಪೊಲೀಸರು, ಕೆಎಸ್​ಆರ್​​ಪಿ ತುಕಡಿ ನಿಯೋಜನೆ ಮಾಡಲಾಗಿದ್ದು ಸುಮಾರು 3 ಕಿಲೋಮೀಟರ್​ ವ್ಯಾಪ್ತಿಯಲ್ಲಿ ಪೊಲೀಸ್​ ಕಣ್ಗಾವಲಿದೆ.

ಇನ್ನೂ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6 ಗಂಟೆಯ ಬಳಿಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಮದ್ಯದಂಗಡಿಗಳು ಮುಚ್ಚಿವೆ. ಕಳೆದ ಕೆಲವು ದಿನಗಳ ಹಿಂದೆ ಒಂದರ ಹಿಂದೊಂದರಂತೆ ಯುವಕರ ಹತ್ಯೆಯಾಗಿರುವುದು ಸಾರ್ವಜನಿಕರನ್ನು ತೀವ್ರವಾಗಿ ಆಘಾತಕ್ಕೊಳಪಡಿಸಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ