ಬಹುಮುಖ ವ್ಯಕ್ತಿತ್ವದ ಏಕಾಂಗಿ ಹೋರಾಟಗಾರ ‘ಜಿ.ರಾಜಶೇಖರ್’: ಅಮೃತ್ ಶೆಣೈ - Mahanayaka

ಬಹುಮುಖ ವ್ಯಕ್ತಿತ್ವದ ಏಕಾಂಗಿ ಹೋರಾಟಗಾರ ‘ಜಿ.ರಾಜಶೇಖರ್’: ಅಮೃತ್ ಶೆಣೈ

g rajashekhar nudinamana
31/07/2022

ಉಡುಪಿ:  ರಥಬೀದಿ ಗೆಳೆಯರು ಉಡುಪಿ, ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ), ಸಹಬಾಳ್ವೆ ಉಡುಪಿ ಇವುಗಳ ಸಹಯೋಗದಲ್ಲಿ ಅಗಲಿದ ವಿಮರ್ಶಕ, ಚಿಂತಕ ಜಿ.ರಾಜಶೇಖರ್ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ರವಿವಾರ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.


Provided by

ಸಹಬಾಳ್ವೆ ಅಧ್ಯಕ್ಷ ಅಮೃತ್ ಶೆಣೈ ಮಾತನಾಡಿ, ಯಾವುದೇ ಬೆದರಿಕೆಗೂ ಬಗ್ಗದೆ ಜಿ.ರಾಜಶೇಖರ್ ತನ್ನ ಜೀವನದುದ್ದಕ್ಕೂ ಹೋರಾಟ ನಡೆಸಿದರು. ಬಹುಮುಖ ವ್ಯಕ್ತಿತ್ವದ ಇವರು, ಏಕಾಂಗಿಯಾಗಿಯೂ ಹೋರಾಟ ನಡೆಸಿದ್ದರು. ಯಾವುದೇ ಸರಕಾರ ಇದ್ದರೂ ತಮ್ಮ ಬದ್ಧತೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಹೋರಾಟ ನಡೆಸಿದರು ಎಂದು ತಿಳಿಸಿದರು.

ದಸಂಸ ಅಂಬೇಡ್ಕರ್ ವಾದ ಸಂಘಟನಾ ಸಂಚಾಲಕ ಶ್ಯಾಮ್ರಾಜ್ ಬಿರ್ತಿ, ಸಿಪಿಎಂ ಹಿರಿಯ ಮುಖಂಡ ಅದಮಾರು ಶ್ರೀಪತಿ ಆಚಾರ್ಯ, ವಿಮರ್ಶಕ ಪ್ರೊ.ಮುರಳೀಧರ್ ಉಪಾಧ್ಯಾಯ ಹಿರಿಯಡ್ಕ, ಶಿಕ್ಷಣ ತಜ್ಞ ಪ್ರೊ.ಮಹಾ ಬಲೇಶ್ವರ ರಾವ್, ಪ್ರೊ.ಪಟ್ಟಾಭಿರಾಮ ಸೋಮ ಯಾಜಿ, ಪ್ರೊ.ರಾಜಾರಾಮ್ ತೋಳ್ಬಾಡಿ, ಕವಯತ್ರಿ ಜ್ಯೋತಿ ಗುರುಪ್ರಸಾದ್, ಪ್ರಾಂಶುಪಾಲೆ ಅಭಿಲಾಷ, ಉಪನ್ಯಾಸಕಿ ಸುಮಾ, ಲೇಖಕ ಭಾಸ್ಕರ್ ರಾವ್ ನುಡಿ ನಮನ ಸಲ್ಲಿಸಿದರು

ಈ ಸಂದರ್ಭದಲ್ಲಿ ಜಿ.ರಾಜಶೇಖರ್ ಕುರಿತು ಕವಿ ವರದರಾಜ ಬಿರ್ತಿ ಬರೆದ ‘ಮಳೆಯು ಸುರಿಯುತ್ತಲಿದೆ..’ ಎಂಬ ಗೀತೆಯನ್ನು ತೆಂಕಬಿರ್ತಿ ಅಂಕದಮನೆ ಕಲಾ ತಂಡದ ಸದಸ್ಯರು ಹಾಡಿದರು. ಹಿರಿಯ ವಿಜ್ಞಾನಿ ಕೆ.ಪಿ.ರಾವ್, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಹಿರಿಯ ಚಿಂತಕ ನಾರಾಯಣ ಮಣೂರು, ಲೇಖಕ ರಾಜರಾಮ್ ತಲ್ಲೂರು, ಪ್ರೊ.ಹಯವದನ ಉಪಾಧ್ಯ, ಹುಸೇನ್ ಕೋಡಿಬೆಂಗ್ರೆ, ಇದ್ರೀಸ್ ಹೂಡೆ, ಸಾಮಾಜಿಕ ಕಾರ್ಯ ಕರ್ತರಾದ ಇಕ್ಬಾಲ್ ಮನ್ನಾ, ಅನ್ಸಾರ್ ತೋನ್ಸೆ, ನಗರಸಭಾ ಸದಸ್ಯ ರಮೇಶ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.

ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ವಂದಿಸಿದರು. ಹಿರಿಯ ಚಿಂತಕ ಪ್ರೊ.ಫಣಿರಾಜ್ ಕಾರ್ಯಕ್ರಮ ನಿರೂಪಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ