ವೀರಗಾಸೆಗೆ ಅವಮಾನ: ಹೆಡ್ ಬುಷ್ ಚಿತ್ರದ ವಿರುದ್ಧ ದೂರು ದಾಖಲು - Mahanayaka

ವೀರಗಾಸೆಗೆ ಅವಮಾನ: ಹೆಡ್ ಬುಷ್ ಚಿತ್ರದ ವಿರುದ್ಧ ದೂರು ದಾಖಲು

veeragase
27/10/2022


Provided by

ಹೆಡ್ ಬುಷ್ ಚಿತ್ರದಲ್ಲಿ ವೀರಗಾಸೆ ಕಲಾವಿದರ ಮೇಲೆ ಹಲ್ಲೆ ಮಾಡುವಂತಹ ದೃಶ್ಯಕ್ಕೆ ವಿರೋಧ ವ್ಯಕ್ತವಾಗಿದ್ದು, ಈ ಸಂಬಂಧ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ದೂರು ದಾಖಲಿಸಿದ್ದಾರೆ.

ಡಾನ್ ಜಯರಾಜ್ ಪಾತ್ರದಲ್ಲಿರುವ ಧನಂಜಯ್ ಅವರಿಂದ ವೀರಗಾಸೆಗೆ ಅವಮಾನವಾಗಿದೆ. ಇದರಿಂದಾಗಿ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ಚಿತ್ರದುರ್ಗದ ಹಿರಿಯೂರು ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಇನ್ನೂ ಈ ದೃಶ್ಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಾಲಿ ಧನಂಜಯ್, ಆ ಫೈಟ್ ಸಂದರ್ಭದಲ್ಲಿ ವೀರಗಾಸೆ ಹಾಕಿಕೊಂಡವರು ಹಿಂದೆ ಸರಿಯುತ್ತಾರೆ. ವೀರಗಾಸೆ ರೀತಿಯ ವೇಷ ಹಾಕಿದವರು ಮುಂದೆ ಬರುತ್ತಾರೆ. ವೀರಗಾಸೆ ವೇಳೆ ಚಪ್ಪಲಿ ಹಾಕುವಂತಿಲ್ಲ. ಆದರೆ, ಜಯರಾಜ್ ಮೇಲೆ ಹಲ್ಲೆ ಮಾಡಿದವರು ಶೂ ಧರಿಸಿರುತ್ತಾರೆ. ಆಗ ಅವನಿಗೆ ಇವರು ವೀರಗಾಸೆಯವರು ಅಲ್ಲ ಎಂಬುದು ಗೊತ್ತಾಗುತ್ತದೆ. ಆಗ ಅವರ ಮೇಲೆ ಜಯರಾಜ್​ ಹಲ್ಲೆ ಮಾಡುತ್ತಾನೆ. ವೀರಗಾಸೆಗೆ ಅವಮಾನ ಮಾಡುತ್ತಿರುವವರ ಮೇಲೆ ಜಯರಾಜ್ ಹೊಡೆದನೇ ಹೊರತು, ಜಯರಾಜ್ ವೀರಗಾಸೆಗೆ ಅವಮಾನ ಮಾಡಿಲ್ಲ ಎಂದು ಧನಂಜಯ್ ಸ್ಪಷ್ಟನೆ ನೀಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ