ಜನರ ಸಮಸ್ಯೆಗಳಿಗೆ ಸ್ಪಂದಿಸುವ ಯೋಗ್ಯತೆ ಇಲ್ಲ, ಸಿನಿಮಾ ಹಿಂದೆ ಬಿದ್ದ ಸಂಘ ಪರಿವಾರ: ಸಚಿನ್ ಸರಗೂರು ಕಿಡಿ
ರಾಜ್ಯದ ಜನತೆ ನೂರಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಂಘಪರಿವಾರಗಳು ಬೆಂಬಲಿಸುವ ಬಿಜೆಪಿ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಈವರೆಗೆ ರಾಜ್ಯ ಸರ್ಕಾರದ ಕಮಿಷನ್ ಕರ್ಮಕಾಂಡ, ಭ್ರಷ್ಟಾಚಾರ, ಜನತೆಗೆ ಸ್ಪಂದಿಸದ ಸರ್ಕಾರದ ವಿರುದ್ಧ ಮಾತನಾಡದವರು ಹೆಡ್ ಬುಷ್ ಚಿತ್ರದ ವಿರುದ್ಧ ಸಮರ ಸಾರಿಸುವುದು ಎಷ್ಟು ಸರಿ ಎಂದು ಹಾಸನದ ಯುವಕ ಸಚಿನ್ ಸರಗೂರು ಪ್ರಶ್ನಿಸಿದ್ದಾರೆ.
ಹೆಡ್ ಬುಷ್ ಚಿತ್ರಕ್ಕೆ ಸಂಘಪರಿವಾರಗಳು ವಿರೋಧ ವ್ಯಕ್ತಪಡಿಸಿರುವುದರ ವಿರುದ್ಧ ಬೇಸರ ವ್ಯಕ್ತಪಡಿಸಿದ ಅವರು, ಸಿನಿಮಾದಲ್ಲಿ ತಪ್ಪು ಹುಡುಕುವ ಹಾಗೆಯೇ , ನೀವೇ ಪ್ರಚಾರ ಮಾಡಿ ಗೆಲ್ಲಿಸಿರುವ ಎಂಪಿ, ಎಂಎಲ್ ಎಗಳು ಮಾಡುತ್ತಿರುವ ತಪ್ಪುಗಳನ್ನ ಕಂಡು ಹಿಡಿಯುತ್ತಿದ್ದರೆ, ಇಂದು ನಮ್ಮ ರಾಜ್ಯ, ದೇಶ ಶ್ರೀಮಂತವಾಗುತ್ತಿತ್ತು ಎಂದು ಸಚಿನ್ ಹೇಳಿದರು.
ಇಂದು ಸಮಾಜವು ಜಾತಿ ಧರ್ಮ ಎಂಬ ಹೆಸರಿನಲ್ಲಿ ಹೊಡೆದಾಡಿ ಸಾಯುತ್ತಿದ್ದಾರೆ. ಒಬ್ಬ ಬಡವನಿಗೆ ನ್ಯಾಯಕೊಡಿಸಲು ಯೋಗ್ಯತೆ ತೋರಿಸುವ ಬದಲು, ಸಿನಿಮಾದ ಹಿಂದೆ ಬೀಳುವ ಮೂಲಕ ರಾಜಕೀಯ ಲಾಭ ಪಡೆಯಲು ಮುಂದಾಗಿರೋದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.
ಸ್ವತಃ ವೀರಭದ್ರಸ್ವಾಮಿಯ ಭಕ್ತನಾಗಿರುವ ಡಾಲಿ ಧನಂಜಯ್ ಅವರು ಸಿನಿಮಾದಲ್ಲಿ ವೀರಗಾಸೆಗೆ ಅವಮಾನ ಮಾಡಿಲ್ಲ. ವೀರಗಾಸೆ ರೀತಿಯ ವೇಷ ಹಾಕಿ, ಜಯರಾಜ್ ಮೇಲೆ ದಾಳಿ ನಡೆಸಲು ಬಂದವರನ್ನು ಜಯರಾಜ್ ಹೊಡೆಯುತ್ತಾನೆ. ಈ ವೇಳೆ ವೀರಗಾಸೆ ವೇಷ ಧರಿಸಿರುವ ರೌಡಿಗಳ ಕಾಲಿನಲ್ಲಿ ಶೂ ಧರಿಸಿರುವುದನ್ನು ಗಮನಿಸಿ ಜಯರಾಜ್ ಅವರ ಮೇಲೆ ಹಲ್ಲೆ ನಡೆಸುತ್ತಾನೆ. ಈ ಸೂಕ್ಷ್ಮಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಆದರೆ ಮೊದಲೇ ದಾಲಿ ಧನಂಜಯ್ ಮೇಲೆ ಹಗೆ ಸಾಧಿಸಿಕೊಂಡಿದ್ದ ಕೆಲವರು ಇದನ್ನು ದಾಳವಾಗಿ ಬಳಸಿಕೊಳ್ಳುವ ಮೂಲಕ ಧನಂಜಯ್ ಅವರನ್ನು ವಿವಾದದ ವಸ್ತುವಾಗಿ ಬಿಂಬಿಸುತ್ತಿದ್ದಾರೆ ಎಂದು ಸಚಿನ್ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡವೋ, ಹಿಂದಿಯೋ ಎಂಬ ಪ್ರಶ್ನೆ ಬಂದಾಗ ಯಾವಾಗಲೂ ಹಿಂದಿ ಪರ ನಿಲ್ಲುವವರು ಇಂದು ಧನಂಜಯ್ ವಿರುದ್ಧವಾಗಿ ನಿಂತಿದ್ದಾರೆ. ಧನಂಜಯ್ ವಿರುದ್ಧ ಕೆಲವೇ ಕೆಲವು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಜನರಿಗೆ ಇದೊಂದು ವಿವಾದವೇ ಅಲ್ಲ ಅನ್ನೋ ಸಂಗತಿ ಗೊತ್ತಿದೆ. ಬುದ್ಧ, ಬಸವ, ಅಂಬೇಡ್ಕರ್, ಮಾನವತೆ ಹಾಗೂ ಬಡವರ ಪರ ಧ್ವನಿಯಾಗಿರುವ ಡಾಲಿ ಧನಂಜಯ್ ಅವರನ್ನು ವೈಯಕ್ತಿಕ ದ್ವೇಷದಿಂದ ಬಲಿ ಹಾಕಲು ಕೆಲವರು ಯತ್ನಿಸುತ್ತಿದ್ದಾರೆ. ಕೆಲವರು ಸಿನಿಮಾ ನಿಲ್ಲಿಸುತ್ತೇವೆ ಎನ್ನುತ್ತಿದ್ದಾರೆ. ಆದರೆ ಇಂತಹ ಯಾವ ಆಟಗಳನ್ನೂ ನಡೆಯಲು ಡಾಲಿ ಧನಂಜಯ್ ಅಭಿಮಾನಿಗಳು ಬಿಡುವುದಿಲ್ಲ, ಜನರ ಕಷ್ಟಗಳಿಗೆ ಸ್ಪಂದಿಸಿ, ರಾಜಕೀಯ ಮಾಡಿ, ಚಿತ್ರ ನಟರನ್ನು ಗುರಿಯಾಗಿಸಿ ಮತ ಬ್ಯಾಂಕ್ ಮಾಡುವ ಆಟಗಳು ಸರಿಯಲ್ಲ. ಸಂಘಪರಿವಾರಕ್ಕೆ ಸೇರಿದ ಯುವಕರಲ್ಲೂ ಡಾಲಿ ಧನಂಜಯ್ ಅವರ ಅಪ್ಪಟ ಅಭಿಮಾನಿಗಳಿದ್ದಾರೆ ಅನ್ನೋದನ್ನು ಮರೆಯಬೇಡಿ ಎಂದು ಸಚಿವ್ ಸರಗೂರು ಸಲಹೆ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka