ಅಮೆರಿಕದ ಉದ್ಯಮಿ ಜತೆ ಸೋನಿಯಾಗಾಂಧಿಗೆ ನಂಟು ಆರೋಪ: ಬಿಜೆಪಿ ಆರೋಪವನ್ನು ತಳ್ಳಿ ಹಾಕಿದ ಫ್ರೆಂಚ್ ಮಾಧ್ಯಮ
ಸೋನಿಯಾ ಗಾಂಧಿ ಸಹಿತ ಕಾಂಗ್ರೆಸ್ ಮುಖಂಡರಿಗೆ ಅಮೆರಿಕಾದ ಉದ್ಯಮಿ ಜಾರ್ಜ್ ಸೋರಸ್ ಜೊತೆ ಸಂಬಂಧ ಇದೆ ಎಂಬ ಬಿಜೆಪಿ ಆರೋಪವನ್ನು ಫ್ರೆಂಚ್ ಮಾಧ್ಯಮವಾದ ಮೀಡಿಯಾ ಪಾರ್ಟ್ ತಳ್ಳಿ ಹಾಕಿದೆ. ಬಿಜೆಪಿ ಸುಳ್ಳು ಆರೋಪವನ್ನು ಹೊರಿಸುತ್ತಿದೆ ಎಂದು ಮೀಡಿಯಾ ಪಾರ್ಟ್ ಸ್ಪಷ್ಟಪಡಿಸಿದೆ.
ಬಿಜೆಪಿಯ ಆರೋಪಗಳಿಗೆ ಯಾವುದೇ ದಾಖಲೆಗಳಿಲ್ಲ, ನಾವು ಒಮ್ಮೆಯೂ ಪ್ರಕಟಿಸದ ಸುದ್ದಿಯನ್ನು ತಮ್ಮ ಸುಳ್ಳು ಆರೋಪಗಳಿಗೆ ತಪ್ಪಾಗಿ ಬಿಜೆಪಿ ಬಳಸಿಕೊಳ್ಳುತಿದೆ ಎಂದು ಮೀಡಿಯಾ ಪಾರ್ಟ್ ಪತ್ರಿಕೆ ಸ್ಪಷ್ಟಪಡಿಸಿದೆ.
ಇದೇ ವೇಳೆ ಮೀಡಿಯಾ ಪಾರ್ಟ್ ಪತ್ರಿಕೆ ಬಿಡುಗಡೆಗೊಳಿಸಿದ ವರದಿಯ ಅಂಶವನ್ನೇ ನಾವು ಹೇಳುತ್ತಿದ್ದೇವೆ ಎಂದು ಬಿಜೆಪಿ ಹೇಳಿತ್ತು ಮತ್ತು ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕರಿಗೆ ಜಾರ್ಜ್ ಸೋರೋಸ್ ಜೊತೆ ಸಂಬಂಧ ಇದೆ ಎಂದು ಮೀಡಿಯಾ ಪಾರ್ಟ್ ಪತ್ರಿಕೆ ಹೇಳಿದೆ ಎಂದು ಬಿಜೆಪಿ ತನ್ನ ವಾದಕ್ಕೆ ಸಮರ್ಥನೆಯನ್ನು ನೀಡಿತ್ತು.
ಕಾಂಗ್ರೆಸ್ ನಿರಂತರವಾಗಿ ಅದಾನಿಯನ್ನು ಎತ್ತಿಕೊಂಡು ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಹಣಿಯುತ್ತಿದೆ. ಈ ಮೊದಲು ಅದಾನಿಯ ಷೇರು ವಂಚನೆಯ ಬಗ್ಗೆ ಇದೇ ಜಾರ್ಜ್ ಸೋರೋಸ್ ಫೌಂಡೇಶನ್ ಹಲವು ಮಾಹಿತಿಗಳನ್ನು ಬಿಡುಗಡೆಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸೋರೋಸ್ ಅವರನ್ನು ಮುಂದಿಟ್ಟು ಕಾಂಗ್ರೆಸ್ಸನ್ನು ಹಣಿಯಲು ಬಿಜೆಪಿ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj