ಭಾರತ ದೇಶ ಬಹುಸಂಖ್ಯಾತರ ಇಚ್ಛೆಯಂತೆ ನಡಿತಿದೆ ಎಂಬ ವಿವಾದಾತ್ಮಕ ಹೇಳಿಕೆ: 'ನನಗೆ ಮುಜುಗರ ಇಲ್ಲ' ಎಂದ ನ್ಯಾಯಾಧೀಶ - Mahanayaka

ಭಾರತ ದೇಶ ಬಹುಸಂಖ್ಯಾತರ ಇಚ್ಛೆಯಂತೆ ನಡಿತಿದೆ ಎಂಬ ವಿವಾದಾತ್ಮಕ ಹೇಳಿಕೆ: ‘ನನಗೆ ಮುಜುಗರ ಇಲ್ಲ’ ಎಂದ ನ್ಯಾಯಾಧೀಶ

10/12/2024

ಈ ದೇಶವು ಬಹುಸಂಖ್ಯಾತರ ಇಚ್ಛೆಯಂತೆ ನಡೆಯುತ್ತಿದೆ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಒಳಗಾಗಿದ್ದ ಅಲಹಾಬಾದ್ ಹೈಕೋರ್ಟ್ ನ ನ್ಯಾಯಾಧೀಶ ಎಸ್ ಕೆ ಯಾದವ್ ಅವರು ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. ಈ ದೇಶ ಹಿಂದುಸ್ತಾನ್ ಎಂದು ಹೇಳುವುದಕ್ಕೆ ನನಗೆ ಯಾವುದೇ ಹಿಂಜರಿಕೆಯೂ ಇಲ್ಲ ಮತ್ತು ಈ ದೇಶ ಬಹುಸಂಖ್ಯಾತರ ಇಚ್ಛೆಯಂತೆ ನಡೆಯುತ್ತಿದೆ ಎಂದು ಹೇಳುವುದಕ್ಕೆ ಮುಜುಗರವೂ ಇಲ್ಲ. ಯಾಕೆಂದರೆ ಇದು ಈ ದೇಶದ ಕಾನೂನು ಎಂದವರು ಸಮರ್ಥಿಸಿಕೊಂಡಿದ್ದಾರೆ.

ಇವರು ತಲಾಕ್, ನಿಕಾ ಹಲಾಲಾ, ಬಹುಪತ್ನಿತ್ವ, ಸಮಾನ ನಾಗರಿಕ ಸಂಹಿತೆ ಇತ್ಯಾದಿಗಳ ಮೇಲೆಯೂ ಹೇಳಿಕೆ ನೀಡಿದ್ದರು. ನ್ಯಾಯಾಧೀಶರ ಈ ಹೇಳಿಕೆಯ ವಿರುದ್ಧ ರಾಷ್ಟ್ರೀಯ ಲಾಯರ್ಸ್ ಸೊಸೆಯೇಷನ್ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು ಮತ್ತು ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿತ್ತು.


ADS

ಇದೇ ವೇಳೆ ದೇಶದ ಖ್ಯಾತ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಕೂಡ ಈ ನ್ಯಾಯಾಧೀಶರ ಹೇಳಿಕೆಯ ವಿರುದ್ಧ ಸುಪ್ರೀಂ ಕೋರ್ಟಿಗೆ ಪತ್ರ ಬರೆದಿದ್ದಾರೆ. ಮಾತ್ರ ಅಲ್ಲ ಇವರ ಈ ಭಾಷಣದ ಬಗ್ಗೆ ಸುಪ್ರೀಂ ಕೋರ್ಟ್ ವಿವರಣೆಯನ್ನ ಕೇಳಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ