ಟ್ರೈಲರ್ ನಲ್ಲೇ ಬೆಂಕಿ ಹಚ್ಚಿದ ಬಡ ಪ್ರತಿಭೆಗಳ ಶ್ರೀಮಂತ ಚಿತ್ರ ‘ಕಂಬ್ಲಿಹುಳ’: ಹಾಸನದ ಯುವಕ ಪುನೀತ್
ಇತ್ತೀಚೆಗೆ ಹೊಸ ಪ್ರತಿಭೆಗಳ ಚಿತ್ರಗಳೇ ಸೂಪರ್ ಹಿಟ್ ಆಗ್ತಿವೆ. ಈ ಸಾಲಿಗೆ ನೈಜ ಘಟನೆಯಾಧಾರಿತ ಸಿನಿಮಾ ಕಂಬ್ಲಿಹುಳ ಕೂಡ ಸೇರ್ಪಡೆಯಾಗಲಿದೆ ಎಂದು ಹಾಸನದ ಯುವಕ ಪುನೀತ್ ಅವರು ಹೇಳಿದ್ದಾರೆ.
ಕಂಬ್ಲಿಹುಳ ಚಿತ್ರದ ಟ್ರೈಲರ್ ವೀಕ್ಷಿಸಿದ ಬಳಿಕ ಈ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಚಿತ್ರದ ಟ್ರೈಲರ್ ಅದ್ಭುತವಾಗಿ ಮೂಡಿ ಬಂದಿದೆ. ಚಿತ್ರ ಭರ್ಜರಿ ಯಶಸ್ಸು ಕಾಣುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಹೊಸ ಪ್ರತಿಭೆಗಳಾದರೂ, ನಟನೆಯಲ್ಲಿ ಎಲ್ಲರೂ ಪ್ರೌಡತೆ ಹೊಂದಿದ್ದಾರೆ. ಚಿತ್ರದ ಹಾಸ್ಯ ಕಲಾವಿದರಂತೂ ಬಿದ್ದು ಬಿದ್ದು ನಗುವಂತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪುನೀತ್ ಹೇಳಿದರು.
ನವನ್ ಶ್ರೀನಿವಾಸ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಕನ್ನಡ ಚಿತ್ರಗಳಲ್ಲಿ ಸಾಧನೆ ಬರೆಯಲಿರುವ ಮತ್ತೊಂದು ಚಿತ್ರವಾಗಿ ಹೊರಹೊಮ್ಮಲಿದೆ. ಮಲೆನಾಡಿನ ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಚಿತ್ರವಿದು. ಶೃಂಗೇರಿ, ಸಕಲೇಶಪುರ, ತೀರ್ಥಹಳ್ಳಿ, ಸಾಗರ ಸುತ್ತಮುತ್ತಾ ಶೂಟಿಂಗ್ ಮಾಡಲಾಗಿದೆ. ಎರಡು ಕಾಲು ಘಂಟೆಯ ಸಿನಿಮಾದಲ್ಲಿ ಪ್ರೇಕ್ಷಕನಿಗೆ ನಗು ಅಳು, ಕಾಮಿಡಿ ಎಲ್ಲವೂ ಉಣಬಡಿಸಲಾಗಿದೆ ಎಂದು ಪುನೀತ್ ತಿಳಿಸಿದರು.
ಬಡವರ ಪ್ರತಿಭೆಯಾಗಿರುವ ಯುವ ನಟ ಅಂಜನ್ ಚಿತ್ರರಂಗಕ್ಕೆ ಪಾದಾರ್ಪಣೆಗೊಂಡಿದ್ದಾರೆ. ಇವರು ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಚಿಕ್ಕ ವಯಸ್ಸಿನಿಂದಲೇ ನಟನ ರಂಗದಲ್ಲಿ ಆಸಕ್ತಿ ಹೊಂದಿದ್ದ ಅಂಜನ್ ಹಾಸನದ ರಂಗಸಿರಿ ತಂಡದಲ್ಲಿ ಅನೇಕ ನಾಟಕಗಳಲ್ಲಿ ಅಭಿನಯಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಒಲಂಪಿಕ್ ಮಾರ್ಷಲ್ ಆರ್ಟ್ಸ್ ನಲ್ಲಿ ಬ್ಲಾಕ್ ಬೆಲ್ಟ್ ಪದವಿ ಪಡೆದಿದ್ದಾರೆ. ಆದರೆ, ನಟನೆಯಲ್ಲಿರುವ ಅಪಾರ ಆಸಕ್ತಿಯಿಂದಾಗಿ ಅವರು ಚಿತ್ರರಂಗವನ್ನು ಆರಿಸಿಕೊಂಡಿದ್ದಾರೆ. ಇದೀಗ ನಟನೆಯಲ್ಲೂ ಸೈ ಅನ್ನಿಸಿಕೊಂಡಿದ್ದಾರೆ.
ಕಂಬ್ಲಿಹುಳ ಚಿತ್ರದ ಟ್ರೈಲರ್ ವೀಕ್ಷಿಸಿದರೆ, ಚಿತ್ರ ನೋಡಬೇಕು ಅನ್ನೋ ಕುತೂಹಲ ತನ್ನಿಂದ ತಾನೆ ಹುಟ್ಟಿಕೊಳ್ಳುತ್ತದೆ. ಹೊಸಬರ ಚಿತ್ರ ಅನ್ನೋದಕ್ಕಿಂತಲೂ, ಒಂದು ಒಳ್ಳೆಯ ಕಥೆಯನ್ನು ಹೊಂದಿರುವ ಚಿತ್ರವಾಗಿ, ಈ ಸಿನಿಮಾ ಸಿನಿಪ್ರಿಯರಿಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ. ಈ ಚಿತ್ರವು ರಾಜ್ಯಾದ್ಯಂತ ನವೆಂಬರ್ 4ರಂದು ಬಿಡುಗಡೆಯಾಗಲಿದೆ. ಹಾಸನದಲ್ಲಿ ಪೃಥ್ವಿ ಟಾಕೀಸ್ ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಪುನೀತ್ ತಿಳಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka