20 ನಿಮಿಷಗಳ ದೃಶ್ಯ ಕಂಡು ರೋಮಾಂಚನವಾಗಿದೆ: ಕಾಂತಾರ ವೀಕ್ಷಿಸಿದ ಲಿಂಬಾವಳಿ - Mahanayaka
3:28 PM Monday 15 - September 2025

20 ನಿಮಿಷಗಳ ದೃಶ್ಯ ಕಂಡು ರೋಮಾಂಚನವಾಗಿದೆ: ಕಾಂತಾರ ವೀಕ್ಷಿಸಿದ ಲಿಂಬಾವಳಿ

kanthara
19/11/2022

ಬೆಂಗಳೂರು: ಇಂದು ಅರವಿಂದ್ ಲಿಂಬಾವಳಿ ಅವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ದೇಶ-ವಿದೇಶದೆಲ್ಲೆಡೆ ಸದ್ದು ಮಾಡಿರುವ ಕನ್ನಡ ಚಿಲನಚಿತ್ರ ‘ಕಾಂತಾರ’ ಚಿತ್ರವನ್ನು ವೀಕ್ಷಿಸಿದರು


Provided by

ಚಿತ್ರ ವೀಕ್ಷಣೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕರ್ನಾಟಕದ ಕರಾವಳಿಯ ಪವಿತ್ರ ಸಂಸ್ಕೃತಿಯ ಸೊಗಡಿನ ಹೂರಣವಿರುವ ಈ ಅದ್ಭುತ ಚಲನಚಿತ್ರವು ಕನ್ನಡ ಚಿತ್ರರಂಗವನ್ನು ಹಾಗೂ ತುಳುನಾಡಿನ ಜನರ ವಿಶಿಷ್ಟ ಸಂಸ್ಕೃತಿಯನ್ನು, ದೇಶ-ವಿದೇಶಗಳಲ್ಲಿ ನೋಡಿ ಸವಿಯಲು ಅವಕಾಶ ಮಾಡಿಕೊಟ್ಟಿದೆ ಎಂದಿದ್ದಾರೆ.

ಈ ಐತಿಹಾಸಿಕ ಚಲನಚಿತ್ರವು ವಿಶೇಷವಾಗಿ ದೈವ ಪರಂಪರೆಯ ಬಗ್ಗೆ ಬೆಳಕು ಚೆಲ್ಲಿದ್ದು, ವಿಶೇಷವಾಗಿ ಕೊನೆಯ ಸುಮಾರು 20 ನಿಮಿಷಗಳ ದೃಶ್ಯವನ್ನು ಕಂಡು ಅತ್ಯಂತ ರೋಮಾಂಚನಗೊಂಡಿದ್ದೇನೆ ಎಂದರು.

ಇಂತಹ ಮೈನವಿರೇಳಿಸುವ ದೃಶ್ಯ ವೈಭವವನ್ನು ಸಮಸ್ತ ಜನತೆಗೆ ಉಣಬಡಿಸಿದ್ದಕ್ಕಾಗಿ ನಾನು ಇಡೀ ಚಿತ್ರತಂಡಕ್ಕೆ ಹೃತ್ಪೂರ್ವಕವಾಗಿ ಅಭಿನಂದನೆಗಳನ್ನು ಹೇಳಬಯಸುತ್ತೇನೆ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ