ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ: ಸಿಗರೇಟ್ ನಿಂದ ಖಾಸಗಿ ಅಂಗಗಳಿಗೆ ಸುಟ್ಟು ವಿಕೃತಿ - Mahanayaka
11:35 AM Tuesday 21 - October 2025

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ: ಸಿಗರೇಟ್ ನಿಂದ ಖಾಸಗಿ ಅಂಗಗಳಿಗೆ ಸುಟ್ಟು ವಿಕೃತಿ

rape
04/12/2022

ಮುಂಬೈ: ಮಹಿಳೆಯೊಬ್ಬರ ಮನೆಗೆ ನುಗ್ಗಿದ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿ,  ಹರಿತವಾದ ಬ್ಲೇಡ್ ನಿಂದ ಇರಿದು ಆಕೆಯ ಖಾಸಗಿ ಭಾಗಗಳನ್ನು ಸಿಗರೇಟಿನಿಂದ ಸುಟ್ಟು ವಿಕೃತಿ ಮೆರೆದ ಘಟನೆ ಬುಧವಾರ ಮುಂಜಾನೆ ಕುರ್ಲಾದಲ್ಲಿ ಈ ಘಟನೆ ಸಂಭವಿಸಿದೆ.

ಆರೋಪಿಗಳು ಮತ್ತು ಬಲಿಪಶು ಒಂದೇ ನೆರೆಹೊರೆಯಲ್ಲಿ ವಾಸಿಸುತ್ತಿರುವವರು ಎಂದು ಪೊಲೀಸರು ತಿಳಿಸಿದ್ದಾರೆ. 42ರ ಹರೆಯದ ಮಹಿಳೆಯ ಮನೆಗೆ ನುಗ್ಗಿದ ದುಷ್ಕರ್ಮಿಗಳು ಒಬ್ಬೊಬ್ಬರಾಗಿ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದು, ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಸಿಗರೇಟಿನಿಂದ ಆಕೆಯ ಖಾಸಗಿ ಅಂಗಗಳನ್ನು ಸುಟ್ಟಿದ್ದು, ಎದೆ ಮತ್ತು ಎರಡೂ ಕೈಗಳ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ.

ಮಾಡಬಾರದ ಅನಾಚಾರ ನಡೆಸಿರುವುದೇ ಅಲ್ಲದೇ  ಕೃತ್ಯವನ್ನು ವಿಡಿಯೋ ಮಾಡಿಕೊಂಡು, ದೂರು ನೀಡಿದರೆ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಯಬಿಡುವುದಾಗಿ ಬೆದರಿಸಿದ್ದಾರೆ. ಘಟನೆಯ ಬಳಿಕ ಸಂತ್ರಸ್ತ ಮಹಿಳೆ ಎನ್ ಜಿಒಗಳನ್ನು ಸಂಪರ್ಕಿಸಿ ಕಾನೂನಿನ ನೆರವು ಪಡೆದುಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ