ನೆಲ ಅಗೆಯುವಾಗ ಸಿಕ್ಕಿತು 18 ಚಿನ್ನದ ನಾಣ್ಯಗಳಿರುವ ಮಡಿಕೆ!
ಆಂಧ್ರಪ್ರದೇಶ: ಕೊಳವೆಬಾವಿಗೆ ಪೈಪ್ ಲೈನ್ ಅಳವಡಿಸಲು ನೆಲ ಅಗೆಯುವಾಗ 18 ಚಿನ್ನದ ನಾಣ್ಯಗಳಿರುವ ಮಣ್ಣಿನ ಮಡಕೆ ಪತ್ತೆಯಾಗಿರುವ ಘಟನೆ ಆಂಧ್ರಪ್ರದೇಶದ ಏಲೂರು ಜಿಲ್ಲೆಯ ಕೊಯ್ಯಲಗುಡೆಂ ಮಂಡಲದ ಎಡುವದಲ ಪಾಲೆಂ ಗ್ರಾಮದಲ್ಲಿ ನಡೆದಿದೆ.
ಬೋರ್ ಪೈಪ್ಲೈನ್ ನಿರ್ಮಿಸಲು ಜಮೀನಿನಲ್ಲಿ ಅಗೆಯುತ್ತಿದ್ದಾಗ ಮಣ್ಣಿನ ಮಡಕೆ ಒಡೆದು ಅದರಲ್ಲಿದ್ದ 18 ಚಿನ್ನದ ನಾಣ್ಯಗಳು ಪತ್ತೆಯಾಗಿವೆ.
ಇನ್ನೂ ಈ ವಿಚಾರವನ್ನು ತಹಶೀಲ್ದಾರ್ ಗಮನಕ್ಕೆ ತಂದಿದ್ದು, ತಹಶೀಲ್ದಾರ್ ಅವರು ಸ್ಥಳಕ್ಕೆ ಆಗಮಿಸಿ, ಪಂಚನಾಮೆ ನಡೆಸಿ ಚಿನ್ನದ ನಾಣ್ಯ, ಅದರಲ್ಲಿ ಶೇಖರಿಸಿಟ್ಟಿದ್ದ ಮಣ್ಣಿನ ಮಡಕೆಯನ್ನು ವಶಪಡಿಸಿಕೊಳ್ಳಲಾಗಿದೆ.
ತನಿಖೆಯ ವೇಳೆ ಅಧಿಕಾರಿಗಳು ಜಮೀನಿನಲ್ಲಿ ಕೆಲಸ ಮಾಡುವ ಕಾರ್ಮಿಕರ ಬಳಿ ಇನ್ನೂ ಒಂದು ನಾಣ್ಯವನ್ನು ಪತ್ತೆ ಮಾಡಿದ್ದಾರೆ ಒಟ್ಟು 61 ಗ್ರಾಂ ತೂಕದ 18 ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೊಯ್ಯಲಗುಡ್ಡೆ ತಹಸೀಲ್ದಾರ್ ಪಿ.ನಾಗಮಣಿ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka