ಇತಿಹಾಸ ಸೃಷ್ಟಿಸಿದ ದೀಪಿಕಾ ಪಡುಕೋಣೆ: ಕೋಟ್ಯಾಂತರ ಜನರ ನಡುವೆ ಮಿಂಚಿದ ಕನ್ನಡದ ಹುಡುಗಿ - Mahanayaka

ಇತಿಹಾಸ ಸೃಷ್ಟಿಸಿದ ದೀಪಿಕಾ ಪಡುಕೋಣೆ: ಕೋಟ್ಯಾಂತರ ಜನರ ನಡುವೆ ಮಿಂಚಿದ ಕನ್ನಡದ ಹುಡುಗಿ

deepika padukone
19/12/2022


Provided by

ಕನ್ನಡ ಮಣ್ಣಿನ ಪ್ರತಿಭೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಡೀ ಭಾರತ ದೇಶವೇ ಹೆಮ್ಮೆ ಪಡುವ ಸಾಧನೆ ಮೆರೆದಿದ್ದು,  ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕ್ಯಾರೇಟ್ ಚಿನ್ನ ಮತ್ತು ಮಲಾಕೈಟ್ ನಿಂದ ಮಾಡಲ್ಪಟ್ಟ  6.175 ಕೆ.ಜಿ. ತೂಕದ ಟ್ರೋಫಿಯನ್ನು ಪಂದ್ಯ ಆರಂಭಕ್ಕೂ ಮೊದಲು ಅನಾವರಣಗೊಳಿಸುವ ಕಾರ್ಯಕ್ರಮ ಬಹಳ ಮಹತ್ವದ್ದಾಗಿದೆ. ದೀಪಿಕಾ ಪಡುಕೋಣೆ ಈ ಬಾರಿ ಟ್ರೋಫಿ ಅನಾವರಣಗೊಳಿಸಿರುವುದು ಭಾರತಕ್ಕೆ ಹೆಮ್ಮೆ ತರುವ ವಿಚಾರವಾಗಿದೆ. ಈ ಮೂಲಕ ದೀಪಿಕಾ ಪಡುಕೋಣೆ ಹೊಸ ದಾಖಲೆಯನ್ನು ಬರೆದರು.

deepika padukone

ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿರುವ ಜನರು, ಲಕ್ಷಾಂತರ ಕ್ಯಾಮರಗಳ ನಡುವೆ ದೀಪಿಕಾ ಪಡುಕೋಣೆ ಮಿಂಚುತ್ತಿದ್ದರು.  ತಮ್ಮ ವೃತ್ತಿ ಜೀವನದ ಸಾಧನೆಗಾಗಿ ದೀಪಿಕಾ ಪಡುಕೋಣೆ ಭಾರತ ಹೆಮ್ಮೆಪಡುವ ಹಲವು ಯಶಸ್ಸುಗಳನ್ನು ತಂದುಕೊಟ್ಟಿದ್ದಾರೆ. ಈ ಪೈಕಿ ಇದೀಗ ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ ಮೊದಲ ಭಾರತೀಯ ಅನ್ನೋ ಹೆಗ್ಗಳಿಗೆಗೆ ಪಾತ್ರರಾಗಿದ್ದಾರೆ.

ದೀಪಿಕಾ ಪಡುಕೋಣೆ ಅವರು ಸಾಟಿ ಇಲ್ಲದ ಜಾಗತಿಕ ಆಕರ್ಷಣೆಯಾಗಿ ಹೊರ ಹೊಮ್ಮಿದ್ದಾರೆ. ಐಷಾರಾಮಿ ಬ್ರ್ಯಾಂಡ್ ಗಳು, ಪಾಪ್ ಸಂಸ್ಕೃತಿಯ ಬ್ರ್ಯಾಂಡ್ ಗಳಿಗೆ ದೀಪಿಕಾ ಪಡುಕೋಣೆಯ ಮುಖವೇ ಪ್ರತಿನಿಧಿಯಾಗಿದೆ. ಎರಡು ಬಾರಿ ಟೈಮ್ ಮ್ಯಾಗಜೀನ್ ಪ್ರಶಸ್ತಿ ಪುರಸ್ಕೃತರಾಗಿರುವ ದೀಪಿಕಾ ಪಡುಕೋಣೆ ವಿಶ್ವದ ನಾಯಕರ ಜೊತೆಗೆ ಗುರುತಿಸಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ