ಅಬುದಾಭಿಯ ಸಚಿವರೊಂದಿಗೆ ಪುತ್ತಿಗೆ ಶ್ರೀ - Mahanayaka
6:24 PM Saturday 14 - December 2024

ಅಬುದಾಭಿಯ ಸಚಿವರೊಂದಿಗೆ ಪುತ್ತಿಗೆ ಶ್ರೀ

puttige shree
19/12/2022

ಅಬುದಾಭಿ  ಸರಕಾರದ ಕ್ಯಾಬಿನೇಟ್ ಮಂತ್ರಿಗಳಾದ  ಸಮಾಜ ಧರ್ಮ ಸಾಮರಸ್ಯ ಸಚಿವರಾದ ಶೇಖ್ ನಹ್ಯಾನ್ ಬಿನ್ ಮುಬಾರಕ್  ಅಲ್ ನಹ್ಯಾನ್ ರೊಂದಿಗೆ ಪುತ್ತಿಗೇಶ್ರೀ ಸೌಹಾರ್ದ  ಭೇಟಿ ನಡೆಯಿತು .

ಈ ಸಂದರ್ಭದಲ್ಲಿ  ಸಮಕಾಲೀನ ಸಮಸ್ಯೆಗಳ ಬಗ್ಗೆ ,ಸಮಾಜದಲ್ಲಿ  ಪರಸ್ಪರ ಶಾಂತಿ ಸೌಹಾರ್ದ  ವನ್ನು ಗಟ್ಟಿಗಳಿಸುವಲ್ಲಿ  ಧಾರ್ಮಿ ಕ ನಾಯಕರು  ಕೈಗೊಳ್ಳುವ ಕ್ರಮಗಳ ಬಗ್ಗೆ  ವಿಸ್ತೃತ ಚರ್ಚೆ  ನಡೆಯಿತು .

ಈ ಸಂದರ್ಭದಲ್ಲಿ  ಶ್ರೀಪಾದರ  ಸಮಾಜಮುಖಿ ಯೋಜನೆಯಾದ ಕೋಟಿ ಗೀತಾ ಲೇಖನ ಯಜ್ಞದ ಬಗ್ಗೆ ಶ್ರೀಗಳು  ವಿವರಿಸಿದರು. ಈ ವೇಳೆ ಮಂತ್ರಿಗಳು ಶ್ರೀಗಳ ವಿಶ್ವಶಾಂತಿ ನಾಯಕತ್ವದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು .

ಶ್ರೀಗಳು ತಮ್ಮ  ಮುಂಬರುವ ಶ್ರೀ  ಕೃಷ್ಣ ಪೂಜಾ ಪರ್ಯಾಯಕ್ಕೆ  ಪ್ರೀತಿಪೂರ್ವಕ ಆಹ್ವಾನಿಸಿದಾಗ ಮಂತ್ರಿಗಳು ಸಂತೋಷದಿಂದ  ಒಪ್ಪಿಗೆ ಸೂಚಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka


ಇತ್ತೀಚಿನ ಸುದ್ದಿ