ಹೃದಯಾಘಾತದಿಂದ ಮೃತಪಟ್ಟ ಗ್ರಾಮ ಪಂಚಾಯತ್  ಅಭ್ಯರ್ಥಿ ಗೆಲುವು - Mahanayaka
10:09 PM Saturday 17 - January 2026

ಹೃದಯಾಘಾತದಿಂದ ಮೃತಪಟ್ಟ ಗ್ರಾಮ ಪಂಚಾಯತ್  ಅಭ್ಯರ್ಥಿ ಗೆಲುವು

30/12/2020

ಬೆಳಗಾವಿ:  ಗ್ರಾಮ ಪಂಚಾಯತ್ ಚುನಾವಣೆಯ ಬಳಿಕ ಹೃದಯಾಘಾತದಿಂದ ಮೃತಪಟ್ಟ ಅಭ್ಯರ್ಥಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, 67 ವರ್ಷ ಪ್ರಾಯದ ಸಿ.ಬಿ.ಅಂಬೋಜಿ ಅವರು ಗ್ರಾಮ ಪಂಚಾಯತ್ ಚುನಾವಣೆಯ ಬಳಿಕ ನಿಧನರಾಗಿದ್ದರು. ಇದೀಗ ಮತ ಎಣಿಕೆ ನಡೆದು ಅವರು ಗೆಲುವು ಸಾಧಿಸಿದ್ದಾರೆ.

ಡಿಸೆಂಬರ್ 20ರಂದು ಮೊದಲ ಹಂತದಲ್ಲಿ ಮತದಾನ ನಡೆದಿತ್ತು. ಇದಾದ ಬಳಿಕ ಡಿಸೆಂಬರ್ 27ರಂದು ಆಂಬೋಜಿ ಹೃದಯಾಘಾತದಿಂದ ನಿಧನರಾಗಿದ್ದರು. ಇದೀಗ ಆಂಬೋಜಿ 414 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ.

ವಕೀಲರೂ ಆಗಿದ್ದ ಅವರು, ಸತತ ಐದು ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. 4 ಬಾರಿ ಗೆದ್ದಿದ್ದರು. ಒಮ್ಮೆ ಸೋತಿದ್ದರು. ತಮ್ಮ ಕೊನೆಯ ಚುನಾವಣೆಯಲ್ಲಿ ಅವರು ಗೆದ್ದಿದ್ದಾರೆ ಆದರೂ, ಅವರು ನಿಧನರಾಗಿದ್ದಾರೆ.

ಇತ್ತೀಚಿನ ಸುದ್ದಿ