ಕಾಡು ಹಂದಿಗೆ ಇಟ್ಟಿದ್ದ ಉರುಳಿಗೆ ಬಿದ್ದ ಚಿರತೆ ಸಾವು - Mahanayaka

ಕಾಡು ಹಂದಿಗೆ ಇಟ್ಟಿದ್ದ ಉರುಳಿಗೆ ಬಿದ್ದ ಚಿರತೆ ಸಾವು

chitha
07/02/2023


Provided by

ಮೂಡಿಗೆರೆ: ಮೂಡಿಗೆರೆ ತಾಲೂಕಿನ ಬಿಳಗುಳ ಕೊಲ್ಲಿಬ್ಯೆಲ್ ಸಮೀಪದ ಲಕ್ಷ್ಮಣಗೌಡ ಎಂಬುವವರ ಸುಮಾರು 10ವರ್ಷದಿಂದ ಪಾಳುಬಿದ್ದ ಕಾಫಿ ತೋಟದಲ್ಲಿ.  ದುಷ್ಕರ್ಮಿಗಳು ಕಾಡು ಹಂದಿ ಬೇಟೆಗಾಗಿ ಹಾಕಿದ್ದ ಉರುಳಿಗೆ ಸುಮಾರು ಮೂರು ವರ್ಷದ ಚಿರತೆ ಸಿಲುಕಿ ಸಾವನ್ನಪ್ಪಿರುವ ಘಟನೆ ಸೋಮವಾರ ತಡರಾತ್ರಿ ವೇಳೆ ನಡೆದಿದೆ.

ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೆಲವೇ ಅಡಿ ಅಂತರದಲ್ಲಿ ಚಿರತೆಯು ಉರುಳಿಗೆ ಬಿದ್ದಿದ್ದು, ಈ ವೇಳೆ ಕೂಗಾಟವನ್ನು ಕೇಳಿ ದಾರಿಯಲ್ಲಿ ಹೋಗುವ ಪ್ರಯಾಣಿಕರು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದು, ರಾತ್ರಿಯೇ ತೆರಳಿದ ಅಧಿಕಾರಿಗಳು ಚಿರತೆಯನ್ನು ಬದುಕಿಸಲು ಪ್ರಯತ್ನಪಟ್ಟಿದ್ದಾರೆ.

ಉರುಳು ಚಿರತೆಯ ಕುತ್ತಿಗೆ ಬಲವಾಗಿ ಸಿಲುಕಿದ್ದ ಕಾರಣ ಚಿರತೆ ಮೃತಪಡುವ ಹಂತಕ್ಕೆ ತಲುಪಿದ್ದು. ರಕ್ಷಣೆ ಮಾಡುವ ವೇಳೆಗೆ ಚಿರತೆ ಮೃತಪಟ್ಟಿತ್ತು.

ಘಟನೆ ಸಂಬಂಧ ತೋಟದ ಮಾಲಿಕರು ಮತ್ತು ಉರುಳು ಹಾಕಿದ ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಮೂಡಿಗೆರೆ ಅರಣ್ಯ ಇಲಾಖೆಗೆ ಶವ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆಯ ನಂತರ ಚಿರತೆಯ ಅಂತ್ಯ ಸಂಸ್ಕಾರ ನಡೆಸಲು ತಿರ್ಮಾನಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ