ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಲಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ - Mahanayaka

ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಲಾಗಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

cm bommai
07/02/2023

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಉದ್ಘಾಟಿಸಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಬೆಂಗಳೂರಿಗೆ ನಗರೋತ್ಥಾನ ಹಾಗೂ ಅಮೃತ ನಗರೋತ್ಥಾನ ಯೋಜನೆಗಳ  ನಂತರ ಎಲ್ಲ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳ  ಜೊತೆಗೆ ಶಿಕ್ಷಣ ಮತ್ತು ಆರೋಗ್ಯ, ರಸ್ತೆ ನಿರ್ಮಾಣ, ಚರಂಡಿಗಳ ನಿರ್ಮಾಣವಾಗುತ್ತಿದೆ. ಆದರೆ ಪ್ರಥಮ ಬಾರಿಗೆ ನಮ್ಮ ಸಚಿವರು ಹಾಗೂ ಶಾಸಕರು ಶಿಕ್ಷಣಕ್ಕೆ ಬಹಳ ಒತ್ತು ನೀಡಿದ್ದಾರೆ. ಆರೋಗ್ಯಕ್ಕೂ ಒತ್ತು ನೀಡಿದ್ದಾರೆ. ಖಾಸಗಿ ವಲಯಕ್ಕಿಂತಲೂ ಉತ್ತಮವಾದ ಶಾಲೆಗಳನ್ನು ನಿರ್ಮಿಸಲಾಗಿದೆ. ನಮ್ಮ ಮಕ್ಕಳು ಒಳ್ಳೆಯ ಪರಿಸರದಲ್ಲಿ ಕಲಿಯುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಹಳೆಯ ಶಾಲೆಗಳನ್ನು ಕೆಡವಿ ಆಧುನಿಕವಾಗಿ ಮಾದರಿ ಶಾಲೆಗಳನ್ನು ನಿರ್ಮಿಸುವ ಕೆಲಸವಾಗುತ್ತಿದೆ ಎಂದರು.

ಬರುವ ವರ್ಷದಲ್ಲಿ ಇನ್ನೂ 15 ಸಾವಿರ ಶಿಕ್ಷಕರ  ನೇಮಕ:

ಕಳೆದ ವಾರ ಗೋವಿಂದರಾಜನಗರ ಕ್ಷೇತ್ರದಲ್ಲೂ ಶಾಲೆ ಮತ್ತು ಕಾಲೇಜಿನ ಉದ್ಘಾಟನೆ ಮಾಡಿದ್ದೆ. ಇಂದು ಮಹಾಲಕ್ಷ್ಮಿ ಲೇಔಟ್ ನಲ್ಲಿ ಮಾದರಿ ಶಾಲೆಯನ್ನು ಉದ್ಘಾಟನೆ ಮಾಡಲಾಗಿದೆ. ಬಹುತೇಕವಾಗಿ ಖಾಸಗಿ ವಲಯಕ್ಕಿಂತ ಹೆಚ್ಚು ಆಧುನಿಕವಾದ ಪ್ರಯೋಗಾಲಯಗಳನ್ನು ಹೊಂದಿದೆ. ಸುಮಾರು 6 ಸಾವಿರ ಮಕ್ಕಳು ವಿದ್ಯಾಭ್ಯಾಸ ಮಾಡುವ 4 ಶಾಲೆಗಳನ್ನು ಆಧುನೀಕರಣ ಮಾಡಲಾಗಿದೆ. ಮೂಲಭೂತ ಸೌಕರ್ಯ ಬಹಳ ಮುಖ್ಯ. ಈಗಾಗಲೇ 15 ಸಾವಿರ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಅನುಷ್ಠಾನ ಮಾಡಲಾಗುವುದು. ಬರುವ ವರ್ಷದಲ್ಲಿ ಶಿಕ್ಷಕರ ಕೊರತೆ ನೀಗಿಸುವ ಸಲುವಾಗಿ ಇನ್ನೂ 15 ಸಾವಿರ ಶಿಕ್ಷಕರನ್ನು ನೇಮಿಸಲಾಗುವುದು.  ಸಚಿವ ಕೆ. ಗೋಪಾಯ್ಯನವರು ತಮ್ಮ ಟ್ರಸ್ಟ್ ನಿಂದ ಶಿಕ್ಷಕರನ್ನು ಸರ್ಕಾರಿ ಶಾಲೆಗಳಿಗೆ ನೇಮಿಸಿ, ವೇತನವನ್ನೂ ನೀಡುತ್ತಿದ್ದಾರೆ.  ಹಲವಾರು ಸಂಗ ಸಂಸ್ಥೆಗಳ ಸಹಕಾರವನ್ನೂ ಪಡೆದುಕೊಳ್ಳಬೇಕು. ಸರ್ಕಾರವೂ ಇದಕ್ಕೆ ಸಹಾಯ ಮಾಡುತ್ತದೆ. ಒಂದು ರೀತಿಯಲ್ಲಿ ನಗರದ ಕೊಳಗೇರಿಗಳಲ್ಲಿರುವ, ಶಿಕ್ಷಣದಿಂದ ವಂಚಿತರಾದವರಿಗೆ ಇದರಿಂದ ಒಳ್ಳೆಯ ಅವಕಾಶ ದೊರೆತಿದೆ ಎಂದರು.

ಕಾಲ ಬದಲಾಗಿದೆ:

ಸರ್ಕಾರಿ ಶಾಲೆ, ಆಸ್ಪತ್ರೆಗೆ ಜನ ಬರುತ್ತಿದ್ದಾರೆ. ಕಾಲ ಬದಲಾವಣೆಯಾಗಿದೆ. ಹಿಂದೆ ಬಿಬಿಎಂಪಿಯಲ್ಲಿ ಇಂಥ ಶಾಲೆಯಾಗುವುದೆಂಬ ಕಲ್ಪನೆಯೂ ಇರಲಿಲ್ಲ. 108 ನಮ್ಮ ಕ್ಲಿನಿಕ್ ಗಳನ್ನು ಉದ್ಘಾಟಿಸಲಾಗಿದ್ದು, ಕ್ಲಿನಿಕ್‍ನಲ್ಲಿ ಬಿಪಿ, ಶುಗರ್ ಪರೀಕ್ಷಿಸಲು ಚಿಕ್ಕ ಪ್ರಯೋಗಾಲಯವೂ ಲಭ್ಯವಿದೆ. ಸರ್ಕಾರದ ಚಿಂತನೆ ಮತ್ತು ಅನುಷ್ಠಾನ ಬಹಳಷ್ಟು ಉತ್ತಮವಾಗಿರುವುದರಿಂದ ಜನರು ಬರುತ್ತಿದ್ದಾರೆ ಎಂದರು.  ಗೋವಿಂದರಾಜನಗರದಲ್ಲಿ ಎಲ್ಲಾ ಶಾಲೆಗಳ ಆಧುನೀಕರಣ ಮಾಡಿದ್ದಾರೆ.  ಬಹುತೇಕ ಎಲ್ಲಾ ಶಾಸಕರೂ ಈ ಕೆಲಸ ಮಡಿದ್ದಾರೆ. ಅದೇ ರೀತಿ ಆಸ್ಪತ್ರೆಗಳು ಬಹಳಷ್ಟು ನಿರ್ಮಾಣವಾಗಿದೆ ಎಂದರು.

ಟರ್ಕಿಯಲ್ಲಿರುವ ಕನ್ನಡಿಗರ ರಕ್ಷಣೆಗೆ ಸಹಾಯವಾಣಿ ಸ್ಥಾಪನೆ:

ಈಗಾಗಲೇ ವಿದೇಶಾಂಗ ಇಲಾಖೆಯವರ ಸಂಪರ್ಕದಲ್ಲಿದ್ದು, ಅವರು ವಿಶೇಷ ಸಹಾಯವಾಣಿ  ಸ್ಥಾಪಿಸುತ್ತಿದ್ದಾರೆ.  ಅಲ್ಲಿರುವ ಕನ್ನಡಿಗರ ಬಗ್ಗೆ ಸರ್ಕಾರ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದು, ಟರ್ಕಿ ಎಂಬೆಸ್ಸಿಯಿಂದಲೂ  ಪಡೆದುಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ ಸರ್ಕಾರ ಸಹಾಯವಾಣಿ ಸ್ಥಾಪಿಸುತ್ತಿದೆ. ಯಾರು ಅಲ್ಲಿ ನೆಲೆಸಿದ್ದರು ಎಂದು ಮಾಹಿತಿ ನೀಡಿದರೆ ಅವರನ್ನು ಸಂಪರ್ಕಿ, ಸಹಾಯ, ಹಿಂದಿರುಗಲು ನೆರವು ಒದಗಿಸಲಾಗುವುದು ಎಂದರು.

ಅನುಷ್ಠಾನ  ಕಾಲ:

ಆಂಧ್ರಪ್ರದೇಶ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಯ ಬಗ್ಗೆ ಸುದ್ದಿಗಾರರ ಪ್ರತಿಕ್ರಿಯೆ ನೀಡಿ ಅವರು ವಿರೋಧಿಸುವ ಕಾಲ ಮುಗಿದಿದೆ. ಈಗ ಅನುಷ್ಠಾನ ಮಾಡುವ ಕಾಲ ಎಂದು ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ