ಪುತ್ತೂರು:  ಭೀಕರ ಅಪಘಾತ | 8 ಜನರ ದಾರುಣ ಸಾವು | 10 ಜನರ ಸ್ಥಿತಿ ಗಂಭೀರ - Mahanayaka

ಪುತ್ತೂರು:  ಭೀಕರ ಅಪಘಾತ | 8 ಜನರ ದಾರುಣ ಸಾವು | 10 ಜನರ ಸ್ಥಿತಿ ಗಂಭೀರ

03/01/2021

ಪುತ್ತೂರು: ಪುತ್ತೂರಿನಿಂದ  ಸುಳ್ಯದ ಆಲೆಟ್ಟಿಯಾಗಿ ಕೇರಳದ ಪಾಣತ್ತೂರಿನ ಕರಿಕೆ ಕಡೆಗೆ ಮದುವೆ ದಿಬ್ಬಣದಲ್ಲಿ ಸಾಗುತ್ತಿದ್ದ ಖಸಗಿ  ಬಸ್ಸೊಂದು  ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದಿದ್ದು, ಪರಿಣಾಮವಾಗಿ 8 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ರಾಜೇಶ್, ರವಿಚಂದ್ರ, ಆದರ್ಶ್,  ಸುಮತಿ, ಶ್ರೇಯಸ್, ಜಯಲಕ್ಷ್ಮೀ, ಶಶಿ ಮೃತಪಟ್ಟವರು ಎಂದು ಹೇಳಲಾಗಿದೆ. ಪಾಣತ್ತೂರು ಬಳಿಕ ಕೊಡಗು ಜಿಲ್ಲಾ ವ್ಯಾಪ್ತಿಯ ಚೆತ್ತುಕಯ ಎಂಬಲ್ಲಿರುವ ವರನ ಮನೆಗೆ  ಪುತ್ತೂರಿನ ಈಶ್ವರಮಂಗಲದಿಂದ ವಧುವಿನ ಕಡೆಯವರು ದಿಬ್ಬಣ ಹೊರಟಿದ್ದರು.

ಕಲ್ಲಪ್ಪಳ್ಳಿ-ಪಾಣತ್ತೂರು ಮಧ್ಯೆ ಪೆರಿಯಾರಂ ಬಳಿಯ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿಸ ಬಸ್,  ಮನೆಯೊಂದರ ಮೇಲೆ ಉರುಳಿ ಬಿದ್ದಿದೆ. ಈ ಸಂದರ್ಭ ಬಸ್ ನಲ್ಲಿ 60ಕ್ಕೂ ಹೆಚ್ಚು  ಮಂದಿ  ಇದ್ದರು ಎಂದು ಹೇಳಲಾಗಿದೆ.

ಘಟನೆಯಲ್ಲಿ 35ಕ್ಕೂ ಅಧಿಕ ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಇವರನ್ನು ಕಾಞಂಗಾಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.  11 ಮಂದಿಯನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ 10 ಜನರ ಸ್ಥಿತಿ ಇನ್ನೂಈ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ವರದಿಗಳ ಪ್ರಕಾರ ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ  ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಕೇರಳ ಸಿಎಂ ಪಿಣರಾಯಿ ವಿಜಯನ್ ಈ ಸಂಬಂಧ ತನಿಖೆಗೆ ಆದೇಶ ನೀಡಿದ್ದು, ಸಂತಾಪ ಸೂಚಿಸಿದ್ದಾರೆ.  ಈ ಅಪಘಾತ ಸಂಬಂಧ ಕಾಸರಗೋಡು ಜಿಲ್ಲಾಧಿಕಾರಿ ಕಾಞಂಗಾಡ್ ಸಹಾಯಕ ಕಮೀಷನರ್  ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ