ಸಂಬಂಧಿಯ ಅಂತ್ಯಸಂಸ್ಕಾರಕ್ಕೆ ಬಂದಿದ್ದ 18 ಮಂದಿ ದಾರುಣ ಸಾವು | ಅಷ್ಟಕ್ಕೂ ಶವಾಗಾರದಲ್ಲಿ ನಡೆದದ್ದೇನು ಗೊತ್ತಾ? - Mahanayaka
8:46 AM Sunday 15 - September 2024

ಸಂಬಂಧಿಯ ಅಂತ್ಯಸಂಸ್ಕಾರಕ್ಕೆ ಬಂದಿದ್ದ 18 ಮಂದಿ ದಾರುಣ ಸಾವು | ಅಷ್ಟಕ್ಕೂ ಶವಾಗಾರದಲ್ಲಿ ನಡೆದದ್ದೇನು ಗೊತ್ತಾ?

03/01/2021

ಗಾಜಿಯಾಬಾದ್: ಸಂಬಂಧಿಯ ಅಂತ್ಯಸಂಸ್ಕಾರಕ್ಕೆ  ಬಂದಿದ್ದ 18 ಸಂಬಂಧಿಕರು ಶವಾಗಾರದ ಮೇಲ್ಛಾವಣಿ ಕುಸಿದು ದಾರುಣವಾಗಿ ಸಾವನ್ನಪ್ಪಿದ ಘಟನೆ  ಗಾಜಿಯಾಬಾದ್​ ನ ಮುರಾದ್​ ನಗರದಲ್ಲಿ  ನಡೆದಿದ್ದು, ಈ ಸಂದರ್ಭ ಒಟ್ಟು 25 ಜನರಿದ್ದರು.  ಇನ್ನೂ ಹಲವರು ಗಾಯಗೊಂಡಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಕಂಡು ಬಂದಿದೆ.

ಉಖಲಾರ್ಸಿ ಗ್ರಾಮದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅವರ ಅಂತ್ಯಸಂಸ್ಕಾರ ನಡೆಸಲೆಂದು ಸಂಬಂಧಿಕರು ತೆರಳಿದ್ದಾರೆ.  ಅಂತ್ಯಕ್ರಿಯೆಗೂ ಮೊದಲು ಜೋರಾಗಿ ಮಳೆ ಸುರಿದಿದ್ದು, ಸಂಬಂಧಿಕರು ಛಾವಣಿಯೊಳಗೆ ಸೇರಿಕೊಂಡಿದ್ದಾರೆ. ಈ ವೇಳೆ ಏಕಾಏಕಿ ಛಾವಣಿ ಕುಸಿದಿದ್ದು, ಪರಿಣಾಮವಾಗಿ 18 ಜನರು ಸಾವನ್ನಪ್ಪಿ, ಇತರರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಗಾಜಿಯಾಬಾದ್​ ಪೊಲೀಸರು ಮತ್ತು ಎನ್​ಡಿಆರ್​ಎಫ್​ನ ರಕ್ಷಣಾ ತಂಡ ಆಗಮಿಸಿ ಕಾರ್ಯಾಚರಣೆ ನಡೆಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸಂತಾಪ ಸೂಚಿಸಿದ್ದಾರೆ.


Provided by

ಇತ್ತೀಚಿನ ಸುದ್ದಿ