ಈಶ್ವರಪ್ಪನವರು ಶ್ರವಣ ಕರ್ಕಶತೆಯಿಂದ ಬಳಲುತ್ತಿದ್ದಾರೆ: ಅಲ್ಲಾಹನು ಕಿವುಡನೆ? ಹೇಳಿಕೆಗೆ ಕೆ.ಅಶ್ರಫ್ ತಿರುಗೇಟು - Mahanayaka

ಈಶ್ವರಪ್ಪನವರು ಶ್ರವಣ ಕರ್ಕಶತೆಯಿಂದ ಬಳಲುತ್ತಿದ್ದಾರೆ: ಅಲ್ಲಾಹನು ಕಿವುಡನೆ? ಹೇಳಿಕೆಗೆ ಕೆ.ಅಶ್ರಫ್ ತಿರುಗೇಟು

ashraf
13/03/2023


Provided by

ಮಂಗಳೂರಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ, ಈಶ್ವರಪ್ಪನವರು ಸಾಂದರ್ಭಿಕವಾಗಿ ಸ್ಥಳೀಯವಾಗಿ,ಧಾರ್ಮಿಕ ಕೇಂದ್ರದಿಂದ ಮೊಳಗಿದ ಆಝಾನ್ ದ್ವನಿಗೆ ವ್ಯತ್ಯಸ್ಥವಾಗಿ ಪ್ರತಿಕ್ರಿಯಿಸಿ,ತನ್ನ ಭಾಷಣದಲ್ಲಿ, ಮೈಕ್ ಇಲ್ಲದೆ ಆಝಾನ್ ಕೂಗಿದರೆ ಅಲ್ಲಾಹನಿಗೆ ಕೇಳಿಸುವುದಿಲ್ಲವೆ?,ಅಲ್ಲಾಹನು ಕಿವುಡನೆ? ಇತ್ಯಾದಿಯಾಗಿ ಪ್ರಶ್ನಿಸಿದ್ದಾರೆ. ಈಶ್ವರಪ್ಪರಿಗೆ ಆರಾಧನಾ ಕರ್ಮಗಳ ಶಬ್ದಗಳು ಬಹುಶ ಕರ್ಕಶವಾಗಿ ಆಲಿಕೆ ಆಗುತ್ತಿದೆ. ಇತರರಿಗೆ ಇಂಪು ನೀಡುವ ಧ್ವನಿಗಳು ಈಶ್ವರಪ್ಪ ನವರಿಗೆ ಕರ್ಕಶ ಧ್ವನಿ ಆಗುತ್ತಿದೆ ಎಂದು ಮುಸ್ಲಿಂ ಒಕ್ಕೂಟದ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷ, ಮಾಜಿ ಮೇಯರ್ ಕೆ.ಅಶ್ರಫ್ ಕಿಡಿಕಾರಿದ್ದಾರೆ.

ಈಶ್ವರಪ್ಪನವರು ಬಹುಶ ಶ್ರವಣ ಕರ್ಕಶತೆಯಿಂದ ಬಳಲುತ್ತಿದ್ದಾರೆ. ಇತ್ತೀಚೆಗೆ ಈಶ್ವರಪ್ಪನವರು ತನ್ನ ಮಾತಿನ ಪ್ರಬುದ್ಧತೆಯನ್ನು ಕಳೆದು ಕೊಂಡಿದ್ದಾರೆ. ಈಶ್ವರಪ್ಪನವರು ಧಾರ್ಮಿಕ ನಿಂದನೆ ಹೊರತಾದ ಇತರ ವಿಷಯಗಳ ಬಗ್ಗೆಗಿನ ಸ್ವಂತಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಅವರು ತಿರುಗೇಟು ನೀಡಿದ್ದಾರೆ.

ತಾನು ಪ್ರವಾಸ ಕೈಗೊಂಡಲ್ಲಿ ತನ್ನ ಭಾಷಣದಲ್ಲಿ ಜನರ ನೈಜ ಸಮಸ್ಯೆಯ ಬದಲಿಗೆ ಮತೀಯ ಪ್ರಚೋದಿತ ಹೇಳಿಕೆ ನೀಡುತ್ತಿದ್ದಾರೆ. ಈಶ್ವರಪ್ಪನವರ ಇಂತಹ ಹೇಳಿಕೆ ಖಂಡನೀಯ. ಮತೀಯ ನಿಂದನೀಯ. ಬಿಜೆಪಿ ಪಕ್ಷದ ಉನ್ನತ ನಾಯಕರು ಈಶ್ವರಪ್ಪನವರ ನಾಲಗೆಯನ್ನು ಹದ್ದು ಬಸ್ತಿನಲ್ಲಿ ಇಡಲು ತಿಳಿಸಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ