2008ರಲ್ಲಿ ಜನಾರ್ಧನ ರೆಡ್ಡಿ ನನಗೆ ಟಿಕೆಟ್ ತಪ್ಪಿಸಿದ್ದರು: ಅನಿಲ್ ಲಾಡ್ ಆರೋಪ - Mahanayaka
11:46 PM Friday 11 - September 2026

2008ರಲ್ಲಿ ಜನಾರ್ಧನ ರೆಡ್ಡಿ ನನಗೆ ಟಿಕೆಟ್ ತಪ್ಪಿಸಿದ್ದರು: ಅನಿಲ್ ಲಾಡ್ ಆರೋಪ

janardhana reddy
13/03/2023

ಬಳ್ಳಾರಿ: 2008ರ ಚುನಾವಣೆ ಸಂದರ್ಭದಲ್ಲಿ ಖುದ್ದು ಜನಾರ್ದನ ರೆಡ್ಡಿಯವರೇ ನನಗೆ ಬಿಜೆಪಿಯಿಂದ ಟಿಕೆಟ್ ಕೊಡದಂತೆ ಹೈಕಮಾಂಡ್ ಮೇಲೆ ಒತ್ತಡ ಹಾಕಿ ತಡೆದಿದ್ದರು ಎಂದು ಮಾಜಿ ಶಾಸಕ ಅನಿಲ್ ಲಾಡ್ ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2008ರ ಚುನಾವಣೆ ಸಂದರ್ಭದಲ್ಲಿ ನಾನು ಅದೊಂದು ದಿನ ಗುಲಬರ್ಗಾದ ಖಾನಾಪುರದಲ್ಲಿ ಬಿಜೆಪಿ ಪರವಾಗಿ ಪ್ರಚಾರದಲ್ಲಿ ತೊಡಗಿದ್ದೆ. ಆ ಸಂದರ್ಭದಲ್ಲಿ ನನಗೆ ಕರೆ ಮಾಡಿದ್ದ ಯಡಿಯೂರಪ್ಪ, ಸಂತೋಷ್ ಅವರೇ ನಿಮಗೆ ಟಿಕೆಟ್ ಕೊಡಲು ಆಗುವುದಿಲ್ಲ. ನಿಮಗೆ ಟಿಕೆಟ್ ನೀಡದಂತೆ ಜನಾರ್ದನ ರೆಡ್ಡಿಯವರು ಒತ್ತಡ ಹಾಕಿದ್ದಾರೆ. ಹಾಗಾಗಿ, ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರೆಂದು ಅವರು ತಿಳಿಸಿದರು.

ಕುಮಾರಸ್ವಾಮಿಯವರ ವಿರುದ್ಧ ಲಂಚದ ಆರೋಪ ಮಾಡಲು ಜನಾರ್ದನ ರೆಡ್ಡಿಯವರು ನನ್ನನ್ನು ಕರೆದಿದ್ದರು. ಆದರೆ, ನಾನು ಅದಕ್ಕೆ ಹೋಗಲಿಲ್ಲ. ನಾನು ಆಗ, ಗಣಿಗಾರಿಕೆ ಮಾಲೀಕರ ಸಂಘದ ಉಪಾಧ್ಯಕ್ಷನಾಗಿದ್ದೆ. ಹಾಗಾಗಿ, ನಾನು ಹೋಗಲಿಲ್ಲ. ಆ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿಯವರು ನನಗೆ ಸಿಗಬೇಕಿದ್ದ ಟಿಕೆಟ್ ತಪ್ಪಿಸಿದರು ಎಂದು ಅವರು ಹೇಳಿದರು.

ಬಿಜೆಪಿಗೆ ಈ ಹಿಂದೆ ಬಸವರಾಜ ಬೊಮ್ಮಾಯಿ ಅವರನ್ನು ಕರೆತಂದಿದ್ದೇ ನಾನು. ಆ ಸಂದರ್ಭದಲ್ಲಿ ನಾನು ಅನೇಕ ಸವಾಲುಗಳನ್ನು ಎದುರಿಸಿದೆ. ಆ ಸಂದರ್ಭದಲ್ಲಿ ನನ್ನ ತಮ್ಮ (ಸಂತೋಷ್ ಲಾಡ್) ಕೂಡ ನನಗೆ ಸಹಾಯ ಮಾಡಲಿಲ್ಲ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ನಿಂದಲೂ ನನಗೆ ಬೆಂಬಲ ದೊರಕಲಿಲ್ಲ ಎಂದು ಅವರು ತಿಳಿಸಿದರು.

2013ರಲ್ಲಿ ಬಳ್ಳಾರಿ ಮತದಾರರು ನಮ್ಮನ್ನು ಶಾಸಕರಾಗಿ ಗೆಲ್ಲಿಸಿದ್ದರು. 2018ರಲ್ಲಿ 60 ಸಾವಿರ ಮತಗಳನ್ನು ಬಳ್ಳಾರಿ ಮತದಾರರು ಹಾಕಿದ್ದು, ಆ ಚುನಾವಣೆಯಲ್ಲಿ ನಾನು ಕೇವಲ 15 ಸಾವಿರ ಮತಗಳಿಂದ ಅಂತರದಿಂದ ಮಾತ್ರ ಸೋತಿದ್ದೇನೆ. ಕಾಂಗ್ರೆಸ್ ಪಕ್ಷ ಬಿ ಫಾರಂ ಕೊಟ್ಟರೆ ಗೆದ್ದ ಮೇಲೆ ಬಳ್ಳಾರಿ ನಗರದಲ್ಲಿ ಸರಕಾರಿ ಶಾಲೆಗಳನ್ನು ಹೈಟೆಕ್ ಮಾಡಲಾಗುವುದು. ಐಟಿಐ, ಪಾಲಿಟೆಕ್ನಿಕ್ ಶಾಲೆಯಲ್ಲಿ ಹಳೆಯ ಯಂತ್ರಗಳಿವೆ, ತಾಂತ್ರಿಕ ಕಾಲೇಜಿ‌ನಲ್ಲಿ ಹೈಟೆಕ್ ಯಂತ್ರದ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು.

ಬಳ್ಳಾರಿ ಪ್ರಾಂತ್ಯದಲ್ಲಿರುವ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ಸಿಗುವಂತೆ ಮಾಡುತ್ತೇನೆ ಎಂದು ಅವರು ಹೇಳಿದರು. ಬಳ್ಳಾರಿ ಸುತ್ತಮುತ್ತಲು ಇರುವ ಪ್ರಾಂತ್ಯಗಳಲ್ಲಿ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗವಕಾಶಗಳು ಇಲ್ಲ. ಉದಾಹರಣೆಗೆ, ಜಿಂದಾಲ್ ನಲ್ಲಿ ಒಟ್ಟಾರೆ ಎಷ್ಟು ಜನ ಕನ್ನಡಿಗರು ಇದ್ದರೆ ಸ್ಪಷ್ಟನೆ ಕೊಡಬೇಕು. ನಾನು ಶಾಸಕರಾದರೆ, ಈ ಸಮಸ್ಯೆ ನಿವಾರಿಸುತ್ತೇನೆ ಎಂದು ಅವರು ತಿಳಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler