ಕಾರು—ಬೈಕ್ ನಡುವೆ ಭೀಕರ ಅಪಘಾತ: ಮಹಿಳೆ ಸಾವು | ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯನ ಕಾರು - Mahanayaka

ಕಾರು—ಬೈಕ್ ನಡುವೆ ಭೀಕರ ಅಪಘಾತ: ಮಹಿಳೆ ಸಾವು | ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯನ ಕಾರು

car bike
20/08/2023


Provided by

ಚಿಕ್ಕಮಗಳೂರು :  ಕಾರು–ಬೈಕ್ ನಡುವೆ ಭೀಕರ ಅಪಘಾತ ನಡೆದ ಪರಿಣಾಮ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿರುವ ಘಟನೆ ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಡೂರು ತಾಲೂಕಿನ ಹೇಮಗಿರಿ ಗೇಟ್ ಬಳಿ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನಲ್ಲೇ ಬೈಲ್ ಸಿಲುಕಿಕೊಂಡಿದ್ದು, ಬಳಿಕ ಕಾರು ಚಾಲಕ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಅರಸೀಕೆರೆ ತಾಲೂಕಿನ  ಮಾವುತನಹಳ್ಳಿ ಗ್ರಾಮದ ಕಲ್ಲಮ್ಮ (60) ಮೃತಪಟ್ಟವರಾಗಿದ್ದಾರೆ.  ಅಪಘಾತ ನಡೆಸಿದ ಕಾರು  ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚೌಡಯ್ಯ ಎಂಬುವರಿಗೆ ಸೇರಿದ ಕಾರು ಎನ್ನಲಾಗಿದೆ.

ಚೌಡಯ್ಯ, ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರ ಆಪ್ತರಾಗಿದ್ದು,  ಬಾಣಾವರ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮಾಜಿ ಸದಸ್ಯರಾಗಿದ್ದಾರೆ.

car bike

ಇತ್ತೀಚಿನ ಸುದ್ದಿ