ಕಾರಿನಲ್ಲಿ ಇಬ್ಬರು ವಿದ್ಯಾರ್ಥಿಗಳ ಅಪಹರಣ, ಹಲ್ಲೆ: 7 ಮಂದಿ ಆರೋಪಿಗಳು ಅರೆಸ್ಟ್ - Mahanayaka

ಕಾರಿನಲ್ಲಿ ಇಬ್ಬರು ವಿದ್ಯಾರ್ಥಿಗಳ ಅಪಹರಣ, ಹಲ್ಲೆ: 7 ಮಂದಿ ಆರೋಪಿಗಳು ಅರೆಸ್ಟ್

crime news
26/08/2023


Provided by

ಮಂಗಳೂರು ನಗರದಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಕಾರಿನಲ್ಲಿ ಅಪಹರಿಸಿ ಹಲ್ಲೆ ಮಾಡಿದ ಆರೋಪದ ಮೇರೆಗೆ 7 ಮಂದಿಯನ್ನು ಮಂಗಳೂರು ಬಂದರು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪಾಣೆಮಂಗಳೂರು ಸಮೀಪದ ಆಲಡ್ಕದ ಇಬ್ರಾಹೀಂ ತಾಬೀಶ್ (19), ಗೂಡಿನ ಬಳಿಯ ಅಬ್ದುಲ್ಲಾ ಹನ್ನಾನ್ (19), ಸಜಿಪ ಮುನ್ನೂರು ಗ್ರಾಮದ ಶಕೀಫ್ (19), ಬಂಟ್ವಾಳ ಮೂಡ ಗ್ರಾಮದ ಶಾಹೀಕ್ (19), ಬಜಾಲ್ ನಂತೂರಿನ ಯುಪಿ ತನ್ವೀರ್ (20), ಬಜಾಲ್ ಫೈಸಲ್ ನಗರದ ಅಬ್ದುಲ್ ರಶೀದ್ (19), ಗೂಡಿನ ಬಳಿಯ ಮನ್ಸೂರ್ (37) ಎಂದು ಗುರುತಿಸಲಾಗಿದೆ.

ನಗರದ ಸಂತ ಅಲೋಶಿಯಸ್ ಕಾಲೇಜು ಬಳಿ ವಿದ್ಯಾರ್ಥಿಗಳಾದ ಶಾಮೀರ್ ಮತ್ತು ಇಬ್ರಾಹೀಂ ಫಾಹೀಮ್ ಎಂಬುವವರನ್ನು ಆಗಸ್ಟ್ 23ರಂದು ಈ ಆರೋಪಿಗಳು ಕಾರಿನಲ್ಲಿ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ಬಗ್ಗೆ ಇಬ್ರಾಹೀಂ ಫಾಹೀಮ್ ನೀಡಿದ ದೂರಿನಂತೆ ಬಂದರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇತ್ತೀಚಿನ ಸುದ್ದಿ