ವಾಕಿಂಗ್ ಹೋದ ಗೆಳೆಯರಿಬ್ಬರು ಬರಲೇ ಇಲ್ಲ: ಫರಿದಾಬಾದ್ ನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಬಾಲಕರ ಶವ ಪತ್ತೆ - Mahanayaka
10:33 PM Thursday 16 - October 2025

ವಾಕಿಂಗ್ ಹೋದ ಗೆಳೆಯರಿಬ್ಬರು ಬರಲೇ ಇಲ್ಲ: ಫರಿದಾಬಾದ್ ನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಬಾಲಕರ ಶವ ಪತ್ತೆ

26/09/2023

ಫರಿದಾಬಾದ್ ನ್ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಬಾಲಕರ ಶವಗಳು ಪತ್ತೆಯಾಗಿವೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದನ್ನು ಪೊಲೀಸರು ದೃಢಪಡಿಸಿಲ್ಲ. ಮೃತ 16 ವರ್ಷದ ಬಾಲಕರ ಕುಟುಂಬಗಳು ಇದನ್ನು ಕೊಲೆ ಎಂದು ಶಂಕಿಸಿಲ್ಲ. ಆದರೂ ಸಾವಿನ ಕಾರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅರಾವಳಿಯ ಸಿದ್ಧತಾ ಆಶ್ರಮದ ಹಿಂಭಾಗದಲ್ಲಿ ಈ ಎರಡು ಶವಗಳು ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಬಾದ್ಷಾ ಖಾನ್ ಆಸ್ಪತ್ರೆಗೆ ಕಳುಹಿಸಲಾಗಿದೆ.


Provided by

ಫರಿದಾಬಾದ್ ನಿವಾಸಿಗಳಾಗಿದ್ದ ಹದಿಹರೆಯದ ಇವರು 7 ನೇ ತರಗತಿಯಿಂದ 10 ನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ಒಟ್ಟಿಗೆ ಓದಿದ್ದರು. ನಂತರ ಇವರಲ್ಲಿ ಒಬ್ಬರ ಕುಟುಂಬವು ಮನೆಗಳನ್ನು ಬದಲಾಯಿಸಿದ್ದರಿಂದ ಆತ ಬೇರೆ ಶಾಲೆಗೆ ಸ್ಥಳಾಂತರಗೊಳ್ಳಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಬಾಲಕರ ಕುಟುಂಬ ಸದಸ್ಯರ ಪ್ರಕಾರ, ಇಬ್ಬರೂ ವಾಕಿಂಗ್ ಮಾಡಲು ಮನೆಯಿಂದ ಹೊರಟಿದ್ದರು. ಇವರಲ್ಲಿ ಓರ್ವ ಬಾಲಕ ತಮ್ಮ ಹಿರಿಯ ಸಹೋದರನೊಂದಿಗೆ ಮಾತನಾಡಿ ಕೂಡಲೇ ಮನೆಗೆ ಬರುವುದಾಗಿ ಹೇಳಿದ್ದಾನೆ. ಆ ನಂತರ, 16 ವರ್ಷದ ಬಾಲಕ ತನ್ನ ಫೋನ್ ರಿಸೀವ್ ಮಾಡುವುದನ್ನು ನಿಲ್ಲಿಸಿದ್ದಾನೆ.

ತಡರಾತ್ರಿಯವರೆಗೂ ಇಬ್ಬರೂ ಮನೆಗೆ ಬಾರದಿದ್ದಾಗ ಕುಟುಂಬ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಅವರ ಫೋನ್ ಗಳನ್ನು ಪತ್ತೆಹಚ್ಚಿದ್ದಾರೆ. ಆಶ್ರಮದ ಹಿಂಭಾಗದ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇವರಿಬ್ಬರ ಶವಗಳು ಪತ್ತೆಯಾಗಿವೆ.

ಇತ್ತೀಚಿನ ಸುದ್ದಿ