ಪ್ರತಿಪಕ್ಷಗಳು ಮುಸ್ಲಿಂ ಮಹಿಳೆಯರನ್ನು ನಿರ್ಲಕ್ಷ್ಯ ಮಾಡಿದೆ: ನಾವೇ ಅವರನ್ನು ಸಬಲೀಕರಣಗೊಳಿಸಿದ್ದು ಎಂದ ಪ್ರಧಾನಿ ಮೋದಿ - Mahanayaka
5:48 PM Thursday 23 - October 2025

ಪ್ರತಿಪಕ್ಷಗಳು ಮುಸ್ಲಿಂ ಮಹಿಳೆಯರನ್ನು ನಿರ್ಲಕ್ಷ್ಯ ಮಾಡಿದೆ: ನಾವೇ ಅವರನ್ನು ಸಬಲೀಕರಣಗೊಳಿಸಿದ್ದು ಎಂದ ಪ್ರಧಾನಿ ಮೋದಿ

27/09/2023

ಹಲವು ವರ್ಷಗಳಿಂದ ಮಹಿಳೆಯರ ಅಭಿವೃದ್ಧಿಯನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ವಿರೋಧ ಪಕ್ಷಗಳನ್ನು ಬುಧವಾರ ತೀವ್ರವಾಗಿ ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ, ತ್ರಿವಳಿ ತಲಾಖ್ ನಂತಹ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಮುಸ್ಲಿಂ ಮಹಿಳೆಯರನ್ನು ಸಬಲೀಕರಣಗೊಳಿಸುವತ್ತ ತಮ್ಮ ಸರ್ಕಾರ ಗಮನ ಹರಿಸಿದೆ. ಆದರೆ ಅವರು ತಮ್ಮ ರಾಜಕೀಯ ಬೇಳೆ ಬೇಯಿಸುವುದಕ್ಕೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರತಿಪಕ್ಷಗಳ ವಿರುದ್ಧ ತಮ್ಮ ಟೀಕೆಯನ್ನು ಮುಂದುವರಿಸಿದ ಪ್ರಧಾನಿ ಮೋದಿ, ವಿರೋಧ ಪಕ್ಷಗಳು ಮುಸ್ಲಿಂ ಮಹಿಳೆಯರ ಹಕ್ಕುಗಳಿಗಾಗಿ ನಿಲ್ಲುವುದಿಲ್ಲ ಎಂದರು. ಗುಜರಾತ್ ನ ವಡೋದರಾದಲ್ಲಿ ನಡೆದ ‘ನಾರಿ ಶಕ್ತಿ ವಂದನ್ ಅಭಿನಂದನ್ ಕಾರ್ಯಕ್ರಮ’ದಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಪ್ರತಿಪಕ್ಷಗಳಿಗೆ ಮಹಿಳೆಯರ ಅಭಿವೃದ್ಧಿಯ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ, ಅವರು ದಶಕಗಳವರೆಗೆ ಅವರನ್ನು ವಂಚಿತರನ್ನಾಗಿ ಮಾಡುತ್ತಿರಲಿಲ್ಲ” ಎಂದು ಹೇಳಿದರು.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಕಾಯ್ದಿರಿಸಿದ ನಾರಿ ಶಕ್ತಿ ವಂದನ್ ಅಧಿನಿಯಮ್ (ಮಹಿಳಾ ಮೀಸಲಾತಿ ಮಸೂದೆ) ಅಂಗೀಕಾರವನ್ನು ಪ್ರಧಾನಿ ಇದೇ ವೇಳೆ ಉಲ್ಲೇಖಿಸಿದರು. ಮಹಿಳೆಯರಿಗೆ ಶೌಚಾಲಯಗಳನ್ನು ಒದಗಿಸುವ ಬಗ್ಗೆ ತಮ್ಮ ಸರ್ಕಾರ ಮಾತನಾಡಿದಾಗ ವಿರೋಧ ಪಕ್ಷಗಳು ತಮ್ಮನ್ನು ಅಪಹಾಸ್ಯ ಮಾಡಿವೆ ಎಂದು ಹೇಳಿದರು.

ಭಾಷಣಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರೊಂದಿಗೆ ವಡೋದರಾದಲ್ಲಿ ರೋಡ್ ಶೋ ನಡೆಸಿದರು. ಹೂವುಗಳಿಂದ ಅಲಂಕರಿಸಲ್ಪಟ್ಟ ತೆರೆದ ವಾಹನದಲ್ಲಿ ಸವಾರಿ ಮಾಡುತ್ತಿದ್ದ ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಬೆಂಬಲಿಗರು, ಮುಖ್ಯವಾಗಿ ಮಹಿಳೆಯರು ಬೀದಿಗಳಲ್ಲಿ ಜಮಾಯಿಸಿದ್ದರು.

ಇತ್ತೀಚಿನ ಸುದ್ದಿ